|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚುಚ್ಚದ ಜೇನು- ಸಾಕುವ ವಿಧಾನದ ತರಬೇತಿ, ಅನುಭವ ವಿನಿಮಯ ಅ.24ಕ್ಕೆ ಪುತ್ತೂರಿನಲ್ಲಿ

ಚುಚ್ಚದ ಜೇನು- ಸಾಕುವ ವಿಧಾನದ ತರಬೇತಿ, ಅನುಭವ ವಿನಿಮಯ ಅ.24ಕ್ಕೆ ಪುತ್ತೂರಿನಲ್ಲಿ


ಪುತ್ತೂರು: ಚುಚ್ಚದ ಜೇನು- ಸಾಕುವ ವಿಧಾನದ ಬಗ್ಗೆ ತರಬೇತಿ ಮತ್ತು ಅನುಭವ ವಿನಿಮಯ ಕಾರ್ಯಕ್ರಮ ಅ.24ರ ಭಾನುವಾರದಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ನಡೆಯಲಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪರ್ಪುಂಜದ 'ಸೌಗಂಧಿಕಾ' ಆವರಣದಲ್ಲಿ ಈ ತರಬೇತಿ ಆಯೋಜಿಸಲಾಗಿದೆ.


ಮುಜಂಟಿ/ ಮಿಸ್ರಿ/ ನಸ್ರಿ ಸಾಕಣೆಯ ಮಹತ್ವ, ಹವ್ಯಾಸ- ಸ್ವ ಉದ್ಯೋಗವಾಗಿ ಮುಜಂಟಿ ಸಾಕಣೆ, ವಿವಿಧ ಬಗೆಯ ಗೂಡುಗಳು, ಕುಟುಂಬವನ್ನು ಗೂಡಿಗೆ ವರ್ಗಾಯಿಸುವುದು, ನಿರ್ವಹಣೆಯ ಬಗೆ, ಜೇನು ತೆಗೆಯುವ ಕ್ರಮ, ಕುಟುಂಬ ವಿಭಜನೆ ಹೇಗೆ?, ಈ ಜೇನ್ನೊಣಗಳಿಗೆ ಪ್ರಿಯವಾದ ಹೂಗಿಡಗಳು, ಜೇನು-ಜೇನು ಕುಟುಂಬಕ್ಕೆ ಮಾರುಕಟ್ಟೆ ಸಾಧ್ಯತೆ- ಈ ವಿಷಯಗಳ ಬಗ್ಗೆ ತರಬೇತಿಯಲ್ಲಿ ಅನುಭವೀ ಜೇನು ಸಾಕಣೆದಾರರು ಮಾಹಿತಿ ನೀಡಲಿದ್ದಾರೆ.


ಚುಚ್ಚದ ಜೇನು ಸಾಕಣೆ ಕುರಿತ ಪುಸ್ತಕ ಹಾಗೂ ಜೇನ್ನೊಣಗಳಿಗೆ ಪ್ರಿಯವಾದ ಹೂಗಿಡಗಳ ಮಾರಾಟವೂ ಈ ಸಂದರ್ಭದಲ್ಲಿ ಇರುತ್ತದೆ.


ತರಬೇತಿಗೆ 500 ರೂ ಶುಲ್ಕ ನಿಗದಿಪಡಿಸಲಾಗಿದೆ. 25 ಮಂದಿಗೆ ಮಾತ್ರ ಅವಕಾಶವಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೇನು ಸಾಕಣೆಯ ಬಗ್ಗೆ ಸಾಕಷ್ಟು ಮಹತ್ವಪೂರ್ಣ ಮಾಹಿತಿ, ಅನುಭವಗಳನ್ನು ಪಡೆದುಕೊಳ್ಳಬಹುದು.


ಈ ತರಬೇತಿಗೆ ಆಸಕ್ತರು ನೋಂದಾವಣೆ ಮಾಡಿಕೊಳ್ಳಲು 18 ಅಕ್ಟೋಬರ್ 2021 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ- ಚಂದ್ರ ಸೌಗಂಧಿಕಾ: 99004 09380- ಇವರನ್ನು ಸಂಪರ್ಕಿಸಬಹುದು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post