ಬದಿಯಡ್ಕ: ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಕೀರ್ತಿಶೇಷ ಕಲಾವಿದರ ಸಂಸ್ಮರಣೆ ಹಾಗೂ ತಾಳಮದ್ದಳೆ ಸಪ್ತಾಹ ಅ.24 ರಿಂದ 30ರ ವರೆಗೆ ವಿಟ್ಲ ಶ್ರೀಭಗವತೀ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಇಂದು ಅಪರಾಹ್ನ 3:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡುವರು.
ಈ ಸಂದರ್ಭ ನೆಡ್ಲೆ ನರಸಿಂಹ ಭಟ್ ಸಂಸ್ಮರಣೆ ನಡೆಯಲಿದ್ದು ಸುಬ್ರಾಯ ಹೊಳ್ಳ ಕಾಸರಗೋಡು ಅವರು ಸಂಸ್ಮರಣಾ ಭಾಷಣ ಮಾಡುವರು. ಬಳಿಕ ಸತ್ಯ ಹರಿಶ್ಚಂದ್ರ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ನಾಳೆ (ಅ.25) ದಿವಾಣ ಭೀಮ ಭಟ್ ಸಂಸ್ಮರಣೆ, 26 ರಂದು ವಿಟ್ಲ ಗೋಪಾಲಕೃಷ್ಣ ಜೋಶಿ ಸಂಸ್ಮರಣೆ, 27 ರಂದು ಅಳಿಕೆ ರಾಮಯ್ಯ ರೈ, 28ರಂದು ಕರ್ಗಲ್ಲು ಸುಬ್ಬಣ್ಣ ಭಟ್, 29ರಂದು ಮಳಿ ಶಾಮ ಭಟ್ ಸಂಸ್ಮರಣೆ ನಡೆಯಲಿದೆ. 30ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಈ ಸಂದರ್ಭ ದೇರಾಜೆ ಸೀತಾರಾಮಯ್ಯ ಸಂಸ್ಮರಣೆ ನಡೆಯಲಿದ್ದು ಜಿ.ಕೆ. ಭಟ್ ಸೇರಾಜೆ ಸಂಸ್ಮರಣಾ ಭಾಷಣ ಮಾಡುವರು. ಬಳಿಕ ಶ್ರೀಕೃಷ್ಣ ಪರಂಧಾಮ ಆಖ್ಯಾಯಿಕೆಯ ತಾಳಮದ್ದಳೆ ನಡೆಯಲಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ