||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು: ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

ಪುತ್ತೂರು: ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಪುತ್ತೂರು: ಪ್ರಪಂಚದಲ್ಲೇ ಭಾರತದ ಪ್ರಜಾಪ್ರಭುತ್ವ ಅತ್ಯಂತ ಹಿರಿದು. ಭಾರತದ ಸ್ವಾತಂತ್ರ್ಯಕ್ಕೋಸ್ಕರ ನೇಣಿಗೆ ಶರಣಾದವರು ಅನೇಕ ದೇಶಭಕ್ತರು. ದೇಶದ ವರ್ತಮಾನ ರಾಜಕೀಯ ಪರಿಸ್ಥಿತಿಯನ್ನು ಸರಿಪಡಿಸಲು ವಿದ್ಯಾವಂತ ದೇಶಭಕ್ತ ರಾಜಕಾರಣಿ, ನಾಯಕರ ಆವಶ್ಯಕತೆ ಇದೆ. ಆಡಳಿತದ ಮುಂಚೂಣಿಯನ್ನು ಚೆನ್ನಾಗಿ ಕೊಂಡೊಯ್ಯುವ ಜವಾಬ್ದಾರಿಯು ಭವಿಷ್ಯದಲ್ಲಿ ನಿಮ್ಮದಾಗಿರುವುದರಿಂದ ಉತ್ತಮ ನಾಯಕರನ್ನು ಸೃಷ್ಟಿಸುವ ನಿಟ್ಟಿನಲ್ಲಿ ಅಂಬಿಕಾ ವಿದ್ಯಾಲಯದಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುತ್ತದೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುಖ್ಯಸ್ಥರಾಗಿರುವ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು, ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆಯುವ ಚುನಾವಣೆಯ ಸಂದರ್ಭ ಸಭೆಯಲ್ಲಿ ಚುನಾವಣೆಯ ಮಹತ್ವ ಮತ್ತು ದೇಶಭಕ್ತ ನಾಯಕರ ಆವಶ್ಯಕತೆಯ ಕುರಿತು ವಿದ್ಯಾರ್ಥಿಗಳಿಗೆ ಉತ್ತೇಜನದ ಮಾತುಗಳನ್ನಾಡಿದರು.


ಎದೆಗಾರಿಕೆಯುಳ್ಳ ಧೀರೋದಾತ್ತ ನಾಯಕರನ್ನು ನಿರ್ಮಿಸುವ ಎದೆಗಾರಿಕೆ ಶಿಕ್ಷಣ ಸಂಸ್ಥೆಗಳದ್ದು. ಲಾಲ್ ಬಹದ್ದೂರ್ ಶಾಸ್ತ್ರಿಗಳಂತಹ ದೇಶಭಕ್ತ ನಾಯಕ, ರಾಜಕಾರಣಿಗಳು ಎಂದೆಂದಿಗೂ ಆದರ್ಶಪ್ರಾಯರು, ಅನುಕರಣೀಯರು. ಭಗತ್ ಸಿಂಗ್‍ನಂತಹ ದೇಶಭಕ್ತರು ಸದಾ ಸ್ಮರಣೀಯರು. ಭ್ರಷ್ಟಾಚಾರ ನಿರ್ಮೂಲನೆಯ ಅಗತ್ಯ ದೇಶಕ್ಕಿದೆ. ದೇಶ ಕಟ್ಟುವ ನಿಟ್ಟಿನಲ್ಲಿ ಪಾರದರ್ಶಕ, ಆತ್ಮ ಸಮರ್ಪಣಾ ಮನೋಭಾವದ ಯುವ ನಾಯಕರು ಮುಂದಕ್ಕೆ ಅಂಬಿಕಾದಿಂದ ನಿರ್ಮಾಣವಾಗಬೇಕು ಎಂದು ಅವರು ನುಡಿದರು.


ಕಸಬ್‍ನನ್ನು ಗಲ್ಲಿಗೇರಿಸಿದ ಪೇದೆಗೆ ಪ್ರೋತ್ಸಾಹ ರೂಪವಾಗಿ ದೇಣಿಗೆ ನೀಡಿರುವ ಬಗ್ಗೆ, ಸ್ವಚ್ಛತಾ ಆಂದೋಲನ, ನೂರು ಪ್ರತಿಶತ ಫಲಿತಾಂಶ ಸಾಧನೆಯ ಬಗ್ಗೆ ಗತ ವರ್ಷದ ಹಿರಿಯ ವಿದ್ಯಾರ್ಥಿ ನಾಯಕರು ಹಾಗೂ ವಿದ್ಯಾರ್ಥಿಗಳನ್ನೆಲ್ಲಾ ಸ್ಮರಿಸಿಕೊಂಡು ಅವರನ್ನು ಅನುಸರಿಸಿ ಅಂಬಿಕಾ ವಿದ್ಯಾಲಯದ ಘನತೆ ಗೌರವವನ್ನು ಮುಂದಕ್ಕೂ ಎತ್ತಿ ಹಿಡಿಯಿರಿ. ಉತ್ತಮ ನಾಯಕರಾಗಿ ಎಂದು ಶುಭ ಹಾರೈಸಿದರು.


ವಿದ್ಯಾರ್ಥಿ ಸಂಘದ ಚುನಾವನೆಯಲ್ಲಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ತಮ್ಮನ್ನು ಪರಿಚಯಿಸಿ ತಮ್ಮ ಕಾರ್ಯಕ್ಷಮತೆಯ ಬಗ್ಗೆ ತಿಳಿಸಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಜಿ ರಾಜಶ್ರೀ ಎಸ್ ನಟ್ಟೋಜ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಗಣಕಶಾಸ್ತ್ರ ಉಪನ್ಯಾಸಕ ಪ್ರದೀಪ್ ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ಶೈನಿ ಕೆ ಜೆ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.  ಕಛೇರಿ ಅಧೀಕ್ಷಕರಾದ ರವಿಚಂದ್ರ ಮತ್ತು ಪ್ರಯೋಗಾಲಯ ಸಹಾಯಕರಾದ ಮುರಳಿ ಮೋಹನ ಸಹಕರಿಸಿದರು.(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post