ಶ್ರೀರಾಮ ವಿದ್ಯಾಲಯ ಸೂರ್ಯನಗರ: ದಶಮಾನೋತ್ಸವ ಪೂರ್ವಭಾವಿ ಕಾರ್ಯಕರ್ತರ ಸಭೆ

Upayuktha
0

ನೆಲ್ಯಾಡಿ: ಇಲ್ಲಿನ ಶ್ರೀರಾಮ ವಿದ್ಯಾಸಂಸ್ಥೆಯು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಮಾರ್ಗದರ್ಶನದಲ್ಲಿ, ನೆಲ್ಯಾಡಿ ಯಲ್ಲಿ ಕಳೆದ 12 ವರ್ಷಗಳಿಂದ ಶಿಶುಮಂದಿರದಿಂದ ಆರಂಭಿಸಿ 10ನೇ ತರಗತಿ ತನಕ ಸಂಸ್ಕಾರದೊಂದಿಗೆ ಅತ್ಯುನ್ನತ ಶಿಕ್ಷಣವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಇದೀಗ  ಈ ವಿದ್ಯಾಸಂಸ್ಥೆಯು ದಶಮಾನೋತ್ಸವವನ್ನು ಆಚರಿಸುವ ನಿಮಿತ್ತ ನೂತನ ವಿದ್ಯಾಮಂದಿರದ ಮೊದಲ ಹಂತದ ಲೋಕಾರ್ಪಣೆ ಕಾರ್ಯಕ್ರಮವು ಡಿಸೆಂಬರ್ 8ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ನೆಲ್ಯಾಡಿ-ಗುಂಡ್ಯ ಮಂಡಲ ವ್ಯಾಪ್ತಿಯ ಕಾರ್ಯಕರ್ತರ ಸಭೆಯು ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಅಕ್ಟೋಬರ್ 31ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸೇವ ಪ್ರಮುಖ್ ನ. ಸೀತಾರಾಮ್ ಮಾತನಾಡಿ, ಒಂದು ಕುಟುಂಬ ಎಂದಾಗ ಎಷ್ಟೆಲ್ಲ ಮನೆಗಳು ಒಟ್ಟುಗೂಡುವುದೋ ಅಂತೆಯೇ ಒಂದು ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಹಲವಾರು ಗ್ರಾಮಗಳ ಸದಸ್ಯರು ಒಂದಾದರೆ ಮಾತ್ರ ಸಂಸ್ಥೆಯ ಬೆಳವಣಿಗೆಯಾಗುವುದು ಎಂದರು. ಅಲ್ಲದೇ ಈ ವಿದ್ಯಾ ಸಂಸ್ಥೆಗಳಲ್ಲಿ ಪಾಠದ ಜೊತೆಗೆ ಹಿಂದೂ ಸಮಾಜದ ರಕ್ಷಣೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ನೆಲ್ಯಾಡಿಯ ಉದ್ಯಮಿ, ಕುಶಾಲಪ್ಪ ಗೌಡ ಪೂವಾಜೆ ಆಮಂತ್ರಣವನ್ನು ಬಿಡುಗಡೆಗೊಳಿಸಿ, ಹಿಂದೂ ಸಮಾಜವನ್ನು ಒಗ್ಗೂಡಿಸಲು ಪ್ರಾರಂಭವಾದ ಈ ಸಂಸ್ಥೆಯನ್ನು ನಾವೆಲ್ಲರೂ ಜೊತೆಗೂಡಿ ಬೆಳೆಸಬೇಕು ಹಾಗೂ ಮುಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ನುಡಿದರು.


ಕಾರ್ಯಕ್ರಮದಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಗೋರೆ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ  ನಿರ್ದೇಶಕ ಕೃಷ್ಣ ಶೆಟ್ಟಿ, ಪ್ರಾಂತ ವಿದ್ಯಾಭಾರತಿ ಪ್ರಮುಖರು ವೆಂಕಟ್ರಮಣ ರಾವ್ ಕಡಬ ಇವರು ಉಪಸ್ಥಿತರಿದ್ದರು.

 

ಶ್ರೀರಾಮ ವಿದ್ಯಾಸಂಸ್ಥೆಯ ಗೌರವ ಅಧ್ಯಕ್ಷ ಜಯಪ್ರಕಾಶ್ ನೆಕ್ರಾಜೆ ಸ್ವಾಗತಿಸಿ, ಕಾರ್ಯದರ್ಶಿ ಬಾಲಕೃಷ್ಣ ಬಾಣಜಾಲು ವಂದಿಸಿದರು. ಅಂತೆಯೇ ಶ್ರೀ ರಾಮ ಸಂಸ್ಥೆಯ ಶಿಕ್ಷಕ ಅನಿಲ್ ಅಕ್ಕಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top