ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಹಲವು ಅತ್ಯುತ್ತಮ ಪ್ರಶಸ್ತಿಗಳಿಗೆ ಪಾತ್ರವಾಗಿದೆ.
2018-19ನೇ ಸಾಲಿನ ಅತ್ಯುತ್ತಮ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಶಸ್ತಿ ಗಣೇಶ್ ಶೆಂಡ್ಯೆ ಅವರಿಗೆ ಲಭಿಸಿದೆ. 2019-20ನೇ ಸಾಲಿನ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಅಶಾಕಿರಣ್ ಅವರಿಗೆ, 2017-18ರ ಸಾಲಿನ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಧನುಷ್ ಕೆ.ಪಿ ಅವರಿಗೆ ಮತ್ತು 2019-20ನೇ ಸಾಲಿನ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಸತ್ಯಪ್ರಸಾದ್ ಅವರಿಗೆ ಲಭಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಕಾಲೇಜಿನ NSS ತಂಡ ಎರಡು ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ, ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ 12 ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲಿ ಭಾಗವಹಿಸಿದುದಲ್ಲದೆ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ವೃಕ್ಷಾರೋಪಣ ಅಭಿಯಾನ, ಅನೀಮಿಯಾ ಮುಕ್ತ ಅಭಿಯಾನ, ಜಲ ಸಂರಕ್ಷಣಾ ಅಭಿಯಾನ ಮುಂತಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಅಕ್ಟೋಬರ್ 12ರಂದು ಮಂಗಳವಾರ, ಬೆಂಗಳೂರಿನ ಕ್ರೀಡಾ ಇಲಾಖೆಯ ಸಭಾಂಗಣ ಯವನಿಕಾದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪಡೆದ ಯೋಜನಾಧಿಕಾರಿಗಳನ್ನು ಹಾಗೂ ಸ್ವಯಂಸೇವಕರನ್ನು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ