||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಬಾಕಾಶಾ' ಮೆಚ್ಚಿಕೊಂಡ ಬಾಳೆ ರಾಜಧಾನಿಯ ಕೇವೀಕೆ ಮುಖ್ಯಸ್ಥರು

'ಬಾಕಾಶಾ' ಮೆಚ್ಚಿಕೊಂಡ ಬಾಳೆ ರಾಜಧಾನಿಯ ಕೇವೀಕೆ ಮುಖ್ಯಸ್ಥರು'ಬಢಿಯಾ'!


ಬಾಳೆಕಾಯಿ ಶಾವಿಗೆ (ಬಾಕಾಶಾ) ಯನ್ನು ಮೊತ್ತಮೊದಲ ಬಾರಿ ಸವಿದ ಜಲಗಾಂವ್ ಕೇವೀಕೆಯ ಮುಖ್ಯಸ್ಥರ ಉದ್ಗಾರವಿದು. 


"ಅದಕ್ಕೆ ಅನನ್ಯ ಪರಿಮಳ ಇದೆ. ರುಚಿಯಲ್ಲೇನೂ ಕೊರತೆಯಿಲ್ಲ. ನಮಗೆಲ್ಲರಿಗೂ ಅದು ಇಷ್ಟವಾಯಿತು"- ಈಚೆಗೆ ಜಿ- ನೈನ್ ಬಾಳೆಯಿಂದ ಮನೆಯಲ್ಲೇ ಬಾಕಾಶಾ ಮಾಡಿ ಸವಿದ ಡಾ. ಹೇಮಂತ್ ಎಸ್.ಬಹೇತಿ ಹೇಳುತ್ತಾರೆ. ಶಾವಿಗೆ ತಯಾರಿ ಸರಿಯಾಗಲು ಅವರು ಎರಡು ಬಾರಿ ಪ್ರಯೋಗ ಮಾಡಬೇಕಾಯಿತಂತೆ. ಮೊದಲ ಬಾರಿ ಬೆಂದದ್ದು ಸಾಕಾಗದೆ ಒತ್ತಲು ಬರಲಿಲ್ಲ.


ಯಾವುದೇ ಜಾತಿಯ ತಾಜಾ ಬಾಳೆಕಾಯಿಯಿಂದ ಶಾವಿಗೆ ಮತ್ತದರ ಉಪ್ಪಿಟ್ಟು ಮಾಡಬಹುದು. 'ಬಾಳೆ ರಾಜಧಾನಿ' ಎಂದೇ ಬಣ್ಣಿಸಲಾಗುವ ಮಹಾರಾಷ್ಟ್ರದ ಜಲಗಾಂವಿನಲ್ಲಿ ಅರ್ಧ ಲಕ್ಷ ಹೆಕ್ಟಾರ್ ಬಾಳೆ ತೋಟಗಳಿವೆ. ಇಲ್ಲಿಗೆ ಬಾಳೆಕಾಯಿ ಶಾವಿಗೆ ತೀರಾ ಹೊಸತು.


"ಇದು ಬಹಳ ಭರವಸೆದಾಯಕ ತಿಂಡಿ. ನಮ್ಮ ಪ್ರದೇಶದಲ್ಲಿ ಯಾವಾಗ ಬೇಕಾದರೂ ಮಾಡಬಹುದು" ಎನ್ನುವ ಡಾ. ಹೇಮಂತ ಅವರಿಗೆ ಕೇವೀಕೆಯ ಮುಂದಿನ ಕಾರ್ಯಕ್ರಮಗಳಲ್ಲಿ ಇದನ್ನು ಜಿಲ್ಲೆಯ ಕೃಷಿಕರಿಗೆ ಪರಿಚಯಿಸಬೇಕೆಂದಿದೆಯಂತೆ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post