|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಡಗುತಿಟ್ಟಿನ "ಯಕ್ಷ ಯುವರಾಜ" ಚಂದ್ರಹಾಸ ಭೈರು ಗೌಡ

ಬಡಗುತಿಟ್ಟಿನ "ಯಕ್ಷ ಯುವರಾಜ" ಚಂದ್ರಹಾಸ ಭೈರು ಗೌಡ



ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಹೊಸಪಟ್ಟಣದ ಶ್ರೀಮತಿ ಗಣಪಿ ಗೌಡ ಹಾಗೂ ಭೈರು ಗೌಡ ಇವರ ಮಗನಾಗಿ ದಿನಾಂಕ 12.12.1990ರಲ್ಲಿ ಇವರ ಜನನ. 7ನೇ ತರಗತಿವರೆಗೆ ವಿದ್ಯಾಭ್ಯಾಸ. ಸ್ವಕಲಿಕೆಯಿಂದ ಯಕ್ಷಗಾನ ರಂಗಕ್ಕೆ ಬಂದ ಇವರು, ತೀರ್ಥಹಳ್ಳಿ ಶ್ರೀ ಗೋಪಾಲಾಚಾರಿಯವರ ಯಕ್ಷಗಾನ ವೇಷವನ್ನು ನೋಡಿ, ಪ್ರೇರಣೆಗೊಂಡು ಇವರು ಯಕ್ಷರಂಗಕ್ಕೆ ಪ್ರವೇಶ ಮಾಡಿದರು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ :-

ಬಣ್ಣಗಾರಿಕೆ ಮಾಡಿಕೊಳ್ಳುವಾಗ ನಾನು ಮಾಡುವ ಪಾತ್ರಕ್ಕೆ ರಂಗದಲ್ಲಿ ಯಾವ ರೀತಿ ಜೀವ ತುಂಬಬೇಕು ಎಂಬುದರ ಬಗ್ಗೆ ಭಾಗವತರು, ಹಿರಿಯ ಕಲಾವಿದರಲ್ಲಿ ಮಾರ್ಗದರ್ಶನ ಪಡೆಯುತ್ತೇನೆ ಎಂದು ಹೇಳುತ್ತಾರೆ.


ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅಭಿಮನ್ಯು, ತರಣಿಸೇನ, ಬಬ್ರುವಾಹನ, ಬರ್ಬರಿಕ, ಲವ-ಕುಶ, ಕಂಸವಧೆಯ‌ ಕೃಷ್ಣ, ರುದ್ರಕೋಪ ಇನ್ನೂ ಹಲವು ವೇಷಗಳು ಇವರ ನೆಚ್ಚಿನ ವೇಷಗಳು.


ಬಂಗಾರ ಮಕ್ಕಿ, ಗುಂಡಬಾಳ, ಮಡಾಮಕ್ಕಿ, ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ೧0 ವರ್ಷಗಳಿಂದ ತಿರುಗಾಟ ಮಾಡುತ್ತಿದ್ದಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಇವತ್ತಿನ ಯಕ್ಷಗಾನ ಪ್ರೇಕ್ಷಕರು ಹೊಸ ಪ್ರಸಂಗಗಳಿಗಿಂತ ಪೌರಾಣಿಕ ಪ್ರಸಂಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಗೌಡ ಅವರು ಹೇಳುತ್ತಾರೆ.     ‌‌  


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಮೂರು ವರ್ಷಗಳ ಹಿಂದೆ ಯಕ್ಷಗಾನ ಶಿಬಿರವನ್ನು ಆರಂಭಿಸಿ, ಹೊಸಪಟ್ಟಣ, ಅಪ್ಸರಕೊಂಡ, ಮಂಕಿ, ತಲಗೋಡ ಊರುಗಳಲ್ಲಿ 150 ಕ್ಕೂ ಹೆಚ್ಚು ಮಕ್ಕಳನ್ನು ರಂಗದಲ್ಲಿ ಗೆಜ್ಜೆ ಕಟ್ಟಿ ಕುಣಿಯುವಂತೆ ಮಾಡಿದ ನೆನಪು ಈಗಲೂ ಹುಸಿಯಾಗಿದೆ. ಅಲ್ಲದೇ ಯಕ್ಷರಂಗದಲ್ಲಿ ನವ ಪ್ರತಿಭೆಗಳನ್ನು  ಪ್ರೋತ್ಸಾಹಿಸಿ, ಯಕ್ಷಗಾನ ಕಲೆಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಸುವ ಬಯಕೆ ಇದೆ ಎಂದು ಗೌಡ ಅವರು ಹೇಳುತ್ತಾರೆ.


ಕರ್ನಾಟಕ ಕರಾವಳಿ ಮೈತ್ರಿ ಸಂಘ ಹೈದ್ರಾಬಾದ್  ಇವರಿಂದ "ಯಕ್ಷಯುವರಾಜ" ಬಿರುದು ಹಾಗೂ ಸನ್ಮಾನ,  ಗೆಳೆಯರ ಬಳಗ ಹೊಸಪಟ್ಟಣ ಮತ್ತು ಶ್ರೀ ಚಿದಾನಂದೇಶ್ವರ ಮಿತ್ರಮಂಡಳಿ ಕೆಳಗಿನೂರು, ಗೆಳೆಯರ ಬಳಗ ಬೇರೊಳ್ಳಿ, ತಾಲ್ಲೂಕು ಹೊನ್ನಾವರ, ಶ್ರೀಹರಿ ಸೇನಾ ಸಾಂಸ್ಕೃತಿಕ ಪ್ರತಿಷ್ಠಾನ ಹರಿ ಬಂಡಿಗೆ ಉಡುಪಿ, ನಿರ್ಮಲ ಕಲ್ಚರಲ್ ಟ್ರಸ್ಟ್ ಹೆಗ್ಗೋಡು ಶಿವಮೊಗ್ಗ, ಶ್ರೀ ಚಂದ್ರನಾಥ ಭಜನಾ ಮಂಡಳಿ ಕೊಂಡೆ ಜಡ್ಡು ಹೆಬ್ರಿ, ಮನ್ವಿತ ಎಂಟರ್ಪ್ರೈಸಸ್ ಯಲಹಂಕ ನ್ಯೂ ಟೌನ್ ಬೆಂಗಳೂರು ಮತ್ತು ಓಂಕಾರ ಸೌಹಾರ್ದ ಸಹಕಾರ ನಿಯಮಿತ ಬೆಂಗಳೂರು ಇವರಿಂದ  ಹಾಗೂ  ಬೆಂಗಳೂರು, ಮುಂಬೈಯಲ್ಲಿ ಇನ್ನು ಕೆಲವು ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.


ಪುಸ್ತಕ ಓದುವುದು, ತಾಳಮದ್ದಳೆ ಕೇಳುವುದು, ನಾಟಕ ನೋಡುವುದು ಇವರ ಹವ್ಯಾಸಗಳು.


ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ತಂದೆ ತಾಯಂದಿರು, ಸರ್ವ ಕಲಾವಿದರು, ಮೇಳದ ಯಜಮಾನರು ಇವರೆಲ್ಲರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Click: Ramakrishna Clicks, Dheeraj udupa uppinakuduru, Ananya Photography


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم