ಕೃಷ್ಣಾಪುರ ಮಠಾಧೀಶರ ಚತುರ್ಥ ಪರ್ಯಾಯಕ್ಕೆ ಸಿದ್ಧತೆ: ಉತ್ತರ ಭಾರತದ ಪವಿತ್ರ ಕ್ಷೇತ್ರಗಳಿಗೆ ಶ್ರೀಗಳ ಯಾತ್ರೆ

Upayuktha
0

ಉಡುಪಿ: ಶ್ರೀ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣಪೂಜಾ ಪರ್ಯಾಯ ಪೂರ್ವಭಾವಿಯಾಗಿ ಉತ್ತರಭಾರತದ ಪವಿತ್ರ ತೀರ್ಥ ಕ್ಷೇತ್ರ ಸಂಚಾರದಲ್ಲಿ ಆಶ್ವಯುಜ ಷಷ್ಟೀ ತಿಥಿ ಇಂದು ಸೋಮವಾರ ಹರಿದ್ವಾರದಲ್ಲಿ ದಕ್ಷಪ್ರಜಾಪತಿ ಮಂದಿರ (ಅಲ್ಲೇ ಇರುವ ಪಾರ್ವತೀದೇವಿ ಅಗ್ನಿಪ್ರವೇಶಗೈದ ಯಜ್ಞ ಕುಂಡ), ಹರಿದ್ವಾರದ ಅಧಿದೇವತೆ ಮಾಯಾದೇವಿ ಮಂದಿರ, ಆಂಜನೇಯ ಮಂದಿರ, ಪಾರ್ವತೀದೇವಿಯು ಶಿವನನ್ನು ಪತಿಯಾಗಿ ಪಡೆಯಲು ಇಚ್ಛಿಸಿ 3000 ವರ್ಷ ತಪಸ್ಸಾಚರಿಸಿದ ಪವಿತ್ರ ಸ್ಥಳ ಬಿಲ್ವಕೇಶ್ಚರ ಮಹಾದೇವ ಮಂದಿರಗಳ ದರ್ಶನ ಪಡೆದರು.


ಬಳಿಕ ಶ್ರೀ ಪೇಜಾವರ ಮಠದ ಶಾಖಾ ಮಠ ಶ್ರೀ ಮಧ್ವಾಶ್ರಮದಲ್ಲಿ ಶ್ರೀ ಕೃಷ್ಣ- ಶ್ರೀ ಮಧ್ವಗುರುಗಳ ದರ್ಶನ ಪಡೆದು ಮಂಗಳಾರತಿ ಬೆಳಗಿದರು.‌ ಮಧ್ವಾಶ್ರಮದ ವ್ಯವಸ್ಥಾಪಕ ಮನೋಜ್ ವ್ಯವಸ್ಥೆಯಲ್ಲಿ ಸಹಕರಿಸಿದರು.‌ ಇಲ್ಲಿಂದ ಗುರುಗಳ ಮುಂದಿನ ಪ್ರಯಾಣ ಪವಿತ್ರ ಕ್ಷೇತ್ರ ಕಾಶಿಯ ಕಡೆಗೆ, ವಿಶ್ವನಾಥನ ದರ್ಶನಕ್ಕೆ ತೆರಳಲಿದ್ದಾರೆ.




(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top