ಮೂರು ನಾಮದ ಪೆಟ್ರೋಲ್ ರೇಟ್!!!

Upayuktha
0


ಅದೇನೋ ಗೊತ್ತಿಲ್ಲ, ಆಡು ಮಾತಿನಲ್ಲಿ 'ಮೂರು ನಾಮ' ಅಂತ ಒಂದು ಪದ ಪ್ರಯೋಗ ಇದೆ!!! 


ಮೋಸ ಹೋದರೆ, "ಬಡ್ಕೊಂಡೆ ಕೇಳ್ಳಿಲ್ಲ, ಈಗ ನೋಡು ಮೂರು ನಾಮ ಬಿತ್ತು!!!" ಅಂತ ಹೇಳೋದಿದೆ.


ಕುದುರೆ ಬಾಲದಲ್ಲಿ, ಇಸ್ಪೀಟ್‌ನಲ್ಲಿ, ಶೇರು ಮಾರುಕಟ್ಟೆಯಲ್ಲಿ, ಮೂರು ನಾಮ ಹಾಕಿಸಿಕೊಂಡವರು ಅನೇಕರಿದ್ದಾರೆ!!! 


ವಿನಿವಿಂಕ್, ರಾಘವೇಂದ್ರ ಬ್ಯಾಂಕ್ IMA ಗಳಿಂದಲೂ 100 ಕ್ಕೆ 11 ಪರ್ಸಂಟ್ ಇಂಟರೆಸ್ಟ್ ಅಂತ ಹೇಳಿ, ಕೊನೆಗೆ ಅಷ್ಟನ್ನೂ ಒಟ್ಟು ಮಾಡಿ 111 ನ್ನು ತಲೆಮೇಲೆ (ಹಣೆ ಮೇಲೆ?) ಇಟ್ಟಿದ್ದಾರೆ!!!


ಇನ್ನೊಂದು ತಮಾಷೆ ಅಂದರೆ ಈ ಮೂರು ನಾಮವನ್ನು ತಿರುಪತಿ ದೇವರಿಗೂ ಕೆಲವರು ಲಿಂಕ್ ಮಾಡ್ತಾರೆ!!! ಅದ್ಯಾಕೆ ಅಂತ ನಂಗೆ ಇವತ್ತಿಗೂ ಗೊತ್ತಿಲ್ಲ!!! 


ಅದು ಬಹುಶಃ ಅತ್ಯಂತ ದಡ್ಡನಿಗೆ "ಬೃಹಸ್ಪತಿ" ಅಂದ ಹಾಗೆ ಇರಬೇಕು!!!


ತಿರುಪತಿ ದೇವರ ಹಣೆಯಲ್ಲಿ ಇರುವುದು ಮೂರು ನಾಮ ಅಲ್ಲ!!!, ಅಲ್ಲಿರುವುದು ಇಂಗ್ಲೀಷ್‌ನ U ಮತ್ತು ಅದರ ಮಧ್ಯೆ ಅಂಗ್ರೇಜಿಯ I !!! 


ಅಂದರೆ ವೆಂಕಟರಮಣನೆ "ನಿನ್ನೊಳಗೆ (U) ನಾನು (I) ಇದ್ದೇನೆ ಅಂದ ಹಾಗೆ!!!.  ಅವನಿಗೂ ಮೂರು ನಾಮ ಹಾಕಿ ಗೋವಿಂದಾssss ಗೋsssವಿಂದ ಅಂತ ಆರೋಪ ಹೋರಿಸಿದ್ದು ಯಾರು?!!!


ನಿನ್ನೆ 'ಕಡಿಮೆ ಕುಡಿಯುವ' ನನ್ನ ಆ್ಯಕ್ಸಸ್ 125' (ಈಗ ಅದು ಕುಡಿಯುವುದನ್ನು ಜಾಸ್ತಿ ಮಾಡಿ ಮೂರು ನಾಮ ಹಾಕ್ತಾ ಇದೆ!!!) ರಿಸರ್ವ್‌ಗೆ ಬಂದು ಒಂದು ಕಡ್ಡಿ ನಾಮದಲ್ಲಿ ಇತ್ತು!!! ಸರಿ ಅಂತ ಬಂಕಿಗೆ ಹೋಗಿ ಗಾಡಿಗೆ ಹೊಟ್ಟೆ ತುಂಬ ಕುಡಿಸಿ ರೇಟ್ ನೋಡಿದರೆ ಲೀಟರಿಗೆ ಬರೋಬರಿ ₹ 111 !!!


ಸಂಖ್ಯಾ ಶಾಸ್ತ್ರದ ಪ್ರಕಾರ ಇವತ್ತು ಎಲ್ಲ ರಾಶಿಯವರಿಗೂ 1, 11, 111 ಶುಭ ಸಂಖ್ಯೆ ಅಂತೆ !!!


ಇವತ್ತು 11 ಮತ್ತು 11 ಜನ ಆಡುವ ಕ್ರಿ'ಕೆಟ್ಟಾ'ಟ ಮ್ಯಾಚ್ ಇದೆಯಾ!!!


-ಅರವಿಂದ ಸಿಗದಾಳ್, ಮೇಲುಕೊಪ್ಪ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top