ನಾಟಾ ಪರೀಕ್ಷಾ ಫಲಿತಾಂಶ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

Upayuktha
0

ಪುತ್ತೂರು: ನ್ಯಾಷನಲ್ ಆಪ್ಟಿಟ್ಯೂಡ್‍ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್‍ಎಟಿಎ- ನಾಟಾ) ಪರೀಕ್ಷೆ ಬರೆದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.


ಸುಳ್ಯದ ಮಂಡೆಕೋಲಿನ ಶ್ಯಾಮ ಪ್ರಸಾದ್ ಮತ್ತು ಸೌಮ್ಯ ಎನ್. ಜೆ ದಂಪತಿ ಪುತ್ರಿ ಪೂರ್ಣ ಎಸ್ ಪ್ರಸಾದ್ 405ನೇ ರ‍್ಯಾಂಕ್‌ ಗಳಿಸಿದ್ದಾರೆ. ಪುತ್ತೂರಿನ ಕೆದಿಲದ ಶ್ಯಾಮಪ್ರಸಾದ್ ಮತ್ತು ಸುಮನ ದಂಪತಿ ಪುತ್ರಿ ಸಿಂಧೂರ ಒ 813ನೇ ರ‍್ಯಾಂಕ್‌ ಗಳಿಸಿದ್ದಾರೆ.


ಅಂತೆಯೇ ಪುತ್ತೂರಿನ ಕಬಕದ ಮಹಬಲೇಶ್ವರ ಭಟ್ ಕೆ ಮತ್ತು ವಿದ್ಯಾ ಎಂ ದಂಪತಿ ಪುತ್ರಿ ದೀಪಿಕಾ ಪಿ. ಎಂ 864ನೇ ರ‍್ಯಾಂಕ್‌ ಗಳಿಸಿದ್ದಾರೆ. ಪುತ್ತೂರಿನ ನೆಲ್ಲಿಕಟ್ಟೆಯ ಸುರೇಶ್ ಟಿ ಮತ್ತು ಮಾಲಿನಿ ಬಿ.ಎಸ್ ದಂಪತಿ ಪುತ್ರಿ ಕೃಪಾ ಟಿ.ಎಸ್ 921ನೇ ರ‍್ಯಾಂಕ್‌ ಗಳಿಸಿದ್ದಾರೆ.


ನಾಟಾ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top