ಮಂಡ್ಯದ ಶಂಕರ ಸಂಗೀತ ಶಾಲೆಯ ವಾರ್ಷಿಕೋತ್ಸವ, ಪ್ರತಿಭಾ ಪ್ರದರ್ಶನ- ಪುರಸ್ಕಾರ
ಮಂಡ್ಯ: ಸಂಗೀತ, ನೃತ್ಯ, ಕಲೆಗಳು ಮನುಷ್ಯನ ಮನಸ್ಸನ್ನು ಅರಳಿಸಿ ಚೇತನಗೋಳಿಸುತ್ತದೆ ಎಂದು ಕೃಷಿಕ್ ಲಯನ್ಸ್ ನ ಸಂಸ್ಥಾಪಕ ಅಧ್ಯಕ್ಷ ಕೆ.ಟಿ ಹನುಮಂತು ಅಭಿಪ್ರಾಯಿಸಿದರು.
ನಗರದ ಗಾಂಧಿಭವನದಲ್ಲಿ ಶ್ರೀ ರಂಜಿನಿ ಕಲಾ ವೇದಿಕೆ ಆಯೋಜಿಸಿದ್ದ ಶಂಕರ ಸಂಗೀತ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಮನುಷ್ಯನ ಜೀವನದ ಅವಿಭಾಜ್ಯ ಅಂಗಗಳಲ್ಲಿ ಮನಸ್ಸಿಗೆ ಹರ್ಷ ತರುವ ಬದುಕಿನ ಜೀವನೋತ್ಸವ ಹೆಚ್ಚಿಸುವ ವಿಶೇಷ ಶಕ್ತಿ ಸಂಗೀತಕ್ಕಿದೆ. ಆರೋಗ್ಯ ವರ್ಧನೆಯಲ್ಲೂ ಸಂಗೀತದ ಪಾತ್ರ ಮಹತ್ತರವಾದುದು ಪೋಷಕರು ತಮ್ಮ ಮಕ್ಕಳನ್ನು ಸಂಗೀತ ನೃತ್ಯ ಶಾಲೆಗಳಿಗೆ ಕಳಿಸುವುದರ ಮೂಲಕ ಅವರಲ್ಲಿನ ಅಭಿಜಾತ ಶಕ್ತಿಯನ್ನು ಉದ್ದೀಪನೆಗೊಳಿಸಿ ಹೊರ ತರುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು. ಜೀವನೋತ್ಸಾಹವನ್ನು ಹೆಚ್ಚಿಸುವ ಮಾಂತ್ರಿಕ ಶಕ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಿದೆ ಎಂದರು.
ಕಾರ್ಯಕ್ರಮವನ್ನು ಲಯನ್ ಬಿ.ಎಂ.ಅಪ್ಪಾಜಪ್ಪ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ವಹಿಸಿದ್ದರು. ಕಲಾವಿದ ಗೊರವಾಲೆ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ.ಎಂ.ಎಸ್. ಚಂದ್ರಮೌಳಿ, ಸ್ವಾಮಿ ಮಂಡ್ಯ, ಡಾ.ಹೆಚ್.ಆರ್. ಕನ್ನಿಕಾ ಹರ್ಷಪೇಟ್ಕರ್ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಶ್ರೀ ಶಂಕರ ಸಂಗೀತ ಶಾಲೆಯ ಮಕ್ಳಳಿಂದ ಗಾಯನ, ಕೀಬೋರ್ಡ್ ವಾದನ ಎಲ್ಲರ ಗಮನ ಸೆಳೆಯಿತು.
ಸಮೃದ್ಧಿ ಲಯನ್ಸ್ ಅಧ್ಯಕ್ಷೆ ನೀನಾ ಪಟೇಲ್ ಮಾತನಾಡಿ ವೇದಿಕೆಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಎಂ.ಎಸ್. ಆತ್ಮಾನಂದ ವಹಿಸಿದ್ದರು. ಗಣ್ಯರ ಕುರಿತು ಡಾ.ಶ್ರೀ ನಿವಾಸ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಜಿ.ವಿ.ಕುಮಾರ್, ಉಧ್ಯಮಿ- ಗಾಯಕ ಬಸವರಾಜು ಭಾಗವಹಿಸಿದ್ದರು.
ಖ್ಯಾತ ಗಿಟಾರ್ ವಾದಕ ದೇವರಾಜ್ ಮತ್ತು ತಂಡ ನಡೆಸಿಕೊಟ್ಟ ಗಿಟಾರ್ ವಾದನ ಹಾಗೂ ಕಲಾಶ್ರೀ ವಿದ್ಯಾಶಂಕರ್ ರವರ ಗಾಯನ ಎಲ್ಲರ ಮನ ತಣಿಸುವಲ್ಲಿ ಯಶಸ್ವಿ ಯಾಯಿತು. ವೈಭವ್ ಸುರಾನಾ ಪ್ರಾರ್ಥಿಸಿ ವೇದಿಕೆ ಅಧ್ಯಕ್ಷ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ