ಕೃಷ್ಣಾಂಗಾರಕ ಚತುರ್ದಶಿ: ಸ್ವರ್ಣಾನದಿ ಸ್ನಾನದಲ್ಲಿ ನೂರಾರು ಮಂದಿ ಭಾಗಿ

Upayuktha
0

ಸ್ವರ್ಣೆಗೆ ಆರತಿ ಬೆಳಗಿದ ಪೇಜಾವರ, ಕಾಣಿಯೂರು, ಶೀರೂರು ಶ್ರೀಗಳು 



ಉಡುಪಿ: ಮಂಗಳವಾರದಂದು ಕೃಷ್ಣಾಂಗಾರಕ ಚತುರ್ದಶಿ ಯೋಗವಿದ್ದ ಕಾರಣ ಉಡುಪಿಯ ಸುವರ್ಣಾನದಿಯಲ್ಲಿ ನೂರಾರು ಮಂದಿ ಪವಿತ್ರ ನದಿ ಸ್ನಾನಗೈದರು. 


ಉಡುಪಿ ಮಾತ್ರವಲ್ಲದೇ ಬೆಂಗಳೂರು ಹುಬ್ಬಳ್ಳಿ ಧಾರವಾಡ ಮೈಸೂರು ಮಂಗಳೂರು, ಆಂಧ್ರದ ಚಿತ್ತೂರಿನಿಂದಲೂ ಅನೇಕ ಭಕ್ತರು ಆಗಮಿಸಿದ್ದರು. 


ಪೇಜಾವರ ಶ್ರೀ, ಕಾಣಿಯೂರು, ಶೀರೂರು ಮಠಾಧೀಶರು ನದೀ ಸ್ನಾನಗೈದು ಸುವರ್ಣೆಗೆ ಆರತಿ ಬೆಳಗಿದರು.‌


ಸ್ವರ್ಣೆಗೆ ಸಚಿವ ಸುನಿಲ್ ಕುಮಾರ್‌ ದಂಪತಿಯಿಂದ ಪೂಜೆ


ಬುಧವಾರದಂದು ಉಡುಪಿಯ ಜೀವನದಿ ಸುವರ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶೀಂಬ್ರ ಸಿದ್ಧಿವಿನಾಯಕಮ ದೇವಸ್ಥಾನದ ಬಳಿ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ವಿಧಿವತ್ತಾಗಿ ನೆರವೇರಿತು. ಜಿಲ್ಲಾಡಳಿತ ಮತ್ತು ಉಡುಪಿ ನಗರ ಸಭೆಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.


ಜಿಲ್ಲಾ ಉಸ್ತುವಾರಿ ಮತ್ರು ರಾಜ್ಯ ಇಂಧನ‌ ಕನ್ನಡ ಸಂಸ್ಕೃತಿ ಮಂತ್ರಿ ವಿ ಸುನಿಲ್ ಕುಮಾರ್, ಪತ್ನಿ ಪ್ರಿಯಾಂಕ ಸಹಿತರಾಗಿ ಬಂದು ಜಿಲ್ಲೆಯ ಜನತೆಯ ಪರವಾಗಿ ತಲೆಗೆ ಮುಂಡಾಸು ತೊಟ್ಟು ಯಜಮಾನಿಕೆ ಸ್ವೀಕರಿಸಿ ಸಂಕಲ್ಪ ನೆರವೇರಿಸಿ ಬಾಗಿನ‌ ಅರ್ಪಿಸಿ ಮಂಗಳಾರತಿ ಗೈದರು.‌ ಸುವರ್ಣೆಗೆ ಹಾಲು, ಗಂಧೋದಕ, ಅರಶಿನ ಕುಂಕುಮ, ರಜತ ಮಾಂಗಲ್ಯ, ಪುಷ್ಪ, ಸೀರೆ, ಲಡ್ಡು, ತಾಂಬೂಲ ದಕ್ಷಿಣೆಗಳನ್ನು ಸಚಿವರು ಅರ್ಪಿಸಿದರು.



   


ಆಚಂದ್ರಾರ್ಕ ಜಿಲ್ಲೆಯ ಸುಭಿಕ್ಷೆ ಸಮೃದ್ಧಿಯನ್ನು ಕಾಪಾಡುವಂತೆ ಜೀವನದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.


ಶಾಸಕ ರಘುಪತಿ ಭಟ್ ದಂಪತಿ ಜಿಲ್ಲಾಧಿಕಾರಿ ಕೂರ್ಮರಾವ್, ಎಸ್ ಪಿ ವಿಷ್ಣುವರ್ಧನ್ ಎಡಿಸಿ ಸದಾಶಿವ ಪ್ರಭು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಆಯುಕ್ತ ಉದಯ ಶೆಟ್ಟಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತ ಶೇಷ ಕೃಷ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್, ಸ್ಥಳೀಯ ನಗರಸಭಾ ಸದಸ್ಯೆ ಅರುಣಾ ಸುಧಾಮ, ಅರ್ಚಕ ನವೀನ್ ಶಿವತ್ತಾಯ,  ನಗರಸಭಾ ಸದಸ್ಯರುಗಳು ಅಧಿಕಾರಿಗಳು ಉಪಸ್ಥಿತರಿದ್ದರು.


ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹೆರ್ಗ ಹರಿಪ್ರಸಾದ್ ಭಟ್, ಪೂಜಾವಿಧಿ ನೆರವೇರಿಸಿದರು. ಗಣಪತಿ ಭಟ್ ಡೆನಿಸ್ ಡಿ‌ಸೋಜ, ನಾಗರಾಜ್ ಶಿವತ್ತಾಯ ಸಹಕರಿಸಿದರು.‌ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ ಸ್ಥಳದ ಪ್ರಾಚೀನ‌ ಹಿನ್ನೆಲೆಯನ್ನು ವಿವರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top