ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಅಕ್ಟೋ 8 ರಂದು ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಏಳು ವಿಭಾಗಗಳಲ್ಲಿ ಭಾಗವಹಿಸಿದ 92 ಅಭ್ಯರ್ಥಿಗಳಲ್ಲಿ 21 ಗಾಯಕರನ್ನು ಕನಕ ಕೀರ್ತನ ಗಂಗೋತ್ರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
‘ಸಾಮುದಾಯಿಕ ಪಾಲ್ಗೊಳ್ಳುವಿಕೆ’ಯ ಆಶಯದ ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಯೋಜಿತ ಹಾಗು ಸ್ವಾಯತ್ತ ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ವೈಧ್ಯಕೀಯ ಶಿಕ್ಷಣ, ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ, ವಿಶ್ವವಿದ್ಯಾನಿಲಯ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿಗಳು ಅಲ್ಲದೆ ಸಾರ್ವಜನಿಕರು ಭಾಗವಹಿಸಿದ್ದರು. ಪ್ರತಿ ವಿಭಾಗದಲ್ಲಿ ಮೂರು ಅತ್ಯುತ್ತಮ ಗಾಯಕರನ್ನು ಆಯ್ಕೆ ಮಾಡಲಾಗಿದ್ದು ತಲಾ ಕನಕ ಪುರಸ್ಕಾರ ಸ್ಮರಣಿಕೆ, ಪ್ರಮಾಣಪತ್ರ ಮತ್ತು ನಗದು 2000. ರೂಗಳನ್ನು ದಶಂಬರ ತಿಂಗಳಲ್ಲಿ ನಡೆಯುವ ಕನಕಸ್ಮೃತಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.
ಆಯ್ಕೆಯಾದ ಗಾಯಕರ ವಿವರ ಇಂತಿದೆ.
ಪ್ರೌಢ ಶಾಲೆ ವಿಭಾಗ
ಶ್ರೀರಕ್ಷ ಎಸ್. ಎಚ್. ಪೂಜಾರಿ, ವಿಶ್ವಮಂಗಳ ಪ್ರೌಢಶಾಲೆ, ಕೊಣಾಜೆ, ಪ್ರತೀಕ್ಷ ಆರ್, ಶ್ರೀರಾಮಕೃಷ್ಣ ಪ್ರೌಢಶಾಲೆ, ಬಂಟ್ಸ್ ಹಾಸ್ಟೆಲ್, ಮಂಗಳೂರು, ಶ್ರೀಕರಿ, ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್
ಪದವಿ ಪೂರ್ವ ವಿಭಾಗ
ಅವನಿ ಎಸ್ ಭಟ್, ಶಾರದಾ ಕಾಲೇಜು, ಕೊಡಿಯಾಲ್ ಬೈಲ್, ಮಂಗಳೂರು, ವೆಂಕಟೇಶ್ ಮಲ್ಯ, ಮಹಾವೀರ ಪ. ಪೂ ಕಾಲೇಜು, ಮೂಡುಬಿದಿರೆ, ರವಿಚಂದ್ರ, ಮಹಾವೀರ ಪ.ಪೂ ಕಾಲೇಜು, ಮೂಡುಬಿದಿರೆ
ಪದವಿ ವಿಭಾಗ :
ಆರ್. ಸುಧೀಕ್ಷ, ಪ್ರಥಮ ಬಿಕಾಂ, ಕೆನರಾ ಕಾಲೇಜು, ಮಂಗಳೂರು, ವಿಭಾಶ್ರೀ ಎಂ.ಎಸ್. ದ್ವಿತೀಯ ಬಿಸಿಎ, ಶ್ರೀವಿವೇಕಾನಂದ ಕಾಲೇಜು, ಪುತ್ತೂರು, ಶರಣ್ಯ ಕೆ.ಎನ್ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ
ಸ್ನಾತಕೋತ್ತರ ಮತ್ತು ಸಂಶೋಧನ ವಿಭಾಗ :
ಶ್ರೀವಾಣಿ ಕಾಕುಂಜೆ, ರಸಾಯನ ಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಚೈತ್ರ ಕೊಪ್ಪಳ, ಕಂಪ್ಯೂಟರ್ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ರೂಪ, ಪ್ರಥಮ ಎಂ.ಕಾಂ. ಶ್ರೀವಿವೇಕಾನಂದ ಕಾಲೇಜು, ಪುತ್ತೂರು.
ಬೋಧಕ ವಿಭಾಗ :
ಪೃಥ್ವಿ ಶೆಣೈ, ಸಹಾಯಕ ಪ್ರಾಧ್ಯಾಪಕರು, ಎಂ.ಐ.ಟಿ. ಮಣಿಪಾಲ, ಡಾ. ಅನಿತ ಎಸ್. ಸಹಾಯಕ ಪ್ರಾಧ್ಯಾಪಕರು, ಕೆ.ವಿ.ಜಿ ಮೆಡಿಕಲ್ ಕಾಲೇಜು, ಸುಳ್ಯ, ರಚನಾ ಕಾಮತ್, ಶಿಕ್ಷಕಿ, ಕೆನರಾ ಪ್ರೌಢಶಾಲೆ, ಡೊಂಗರಕೇರಿ, ಮಂಗಳೂರು
ಬೋಧಕೇತರ ವಿಭಾಗ
ಯಶವಂತ, ವಾಹನ ಚಾಲಕರು, ಮಂಗಳೂರು ವಿಶ್ವವಿದ್ಯಾನಿಲಯ, ಬೇಬಿ, ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ರಮೇಶ್ ಯು. ಅನ್ವಯಿಕ ಸಸ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ.
ಸಾರ್ವಜನಿಕ ವಿಭಾಗ :
ಅಶ್ವನಿ ಕುಮಾರ್ ಎನ್.ಕೆ.ಆರ್. ಬಿಜೈ, ಮಂಗಳೂರು, ವಾಮನ ಪೈ, ಕಾರ್ಪೊರೇಷನ್ ಬ್ಯಾಂಕ್, ಮಂಗಳೂರು, ಗಣೇಶ್ ಪೂಜಾರಿ, ಬಗಂಬಿಲ, ಮಂಗಳೂರು
ಮೌಲ್ಯ ಮಾಪಕರಾಗಿ ಸಂಗೀತ ವಿದ್ವಾನ್ ನಾರಾಯಣ ಭಂಡಾರಿ, ಮೂಡುಬಿದಿರೆ, ಮುರಳೀಧರ ಕಾಮತ್, ಮಂಗಳೂರು, ಡಾ. ಬಾಲಕೃಷ್ಣ ಭಾರಧ್ವಾಜ್, ಮಂಗಳೂರು, ಮಂಜುಳಾ ಜಿ. ರಾವ್ ಇರಾ, ಸುಮನ. ಪಿ ಮೂಡುಬಿದಿರೆ, ಶ್ರೀದೇವಿ ಕಲ್ಲಡ್ಕ ಇವರು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ