ಅಂತರಾಷ್ಟ್ರೀಯ ಮಟ್ಟದ ಆಯುರ್‌ ಯೋಗ ವಿಚಾರ ಸಂಕಿರಣ: ಡಾ| ಅಮೃತಗೌರಿ ಅವರ ಪ್ರಬಂಧಕ್ಕೆ ದ್ವಿತೀಯ ಪ್ರಶಸ್ತಿ

Upayuktha
0

ಬೆಳ್ತಂಗಡಿ: ಉತ್ತರ ಪ್ರದೇಶದ ನೋಯ್ಡದಲ್ಲಿ ಇತ್ತಿಚೇಗೆ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಟ್ಟದ ಮೂರನೇ ಆಯುರ್‌ ಯೋಗ (ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆಗಳ ವಿಶ್ವಮೇಳ) ವಿಚಾರ ಸಂಕಿರಣದಲ್ಲಿ ಡಾ| ಅಮೃತ ಗೌರಿ ವೈ ಅವರು ಮಂಡಿಸಿದ ಪ್ರಬಂಧ ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ.


ಇವರು ಪ್ರಸ್ತುತ ಹೈದರಾಬಾದ್‌ನ ಸರಕಾರಿ ಆಯುರ್ವೇದ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವಿಭಾಗದ ಅಂತಿಮ ವರ್ಷದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಹಾಸನದ ಶ್ರೀ ಧ.ಮಂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹಳೆ ವಿದ್ಯಾರ್ಥಿನಿಯಾಗಿರುವ ಇವರು ಡಾ|| ಎಂ.ವಿ.ವಿ ದುರ್ಗಾಪ್ರಸಾದ್ ಇವರ ಧರ್ಮ ಪತ್ನಿ ಮತ್ತು ಬೆಳ್ತಂಗಡಿ ತಾಲೂಕು ಪದ್ಮುಂಜದ ಕೆದಿಲ ನಿವಾಸಿ ದಿ. ಯರ್ಮುಂಜ ರಘುರಾಮ ಜೋಯಿಸ ಮತ್ತು ವಿದ್ಯಾಪರವೇಶ್ವರಿ ವೈ. ಇವರ ಪುತ್ರಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top