ನೀರಾವರಿ ಇಲಾಖೆ 2 ಸಾವಿರ ಕೋಟಿ ಅವ್ಯವಹಾರ ಆರೋಪ: ಬಿಎಸ್‌ವೈ ಮಾಜಿ ಆಪ್ತನ ಮನೆ ಸೇರಿದಂತೆ 50 ಕಡೆಗಳಲ್ಲಿ ಐಟಿ ದಾಳಿ

Upayuktha
0


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್‌ ಅವರ ನಗರದ ಭಾಷ್ಯಂ ಸರ್ಕಲ್‌ನಲ್ಲಿರುವ ಮನೆಯ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 50 ಕಡೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಬಾಷ್ಯಂ ಸರ್ಕಲ್‌ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಉಮೇಶ್‌ ವಾಸವಾಗಿದ್ದರು. ಐಟಿ ದಾಳಿಯ ವೇಳೆಯಲ್ಲಿ ಉಮೇಶ್‌ ಮನೆಯಲ್ಲಿದ್ದರು ಎಂಬ ಮಾಹಿತಿ ಇದೆ. ಉಮೇಶ್‌ ಅವರು ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.


ಬಿಎಂಟಿಸಿಯಲ್ಲಿ ಡ್ರೈವರ್‌/ ಕಂಡಕ್ಟರ್‌ ಆಗಿದ್ದ ಉಮೇಶ್‌ ಡೆಪ್ಯುಟೇಷನ್‌ ಆಧಾರದ ಮೇಲೆ ಯಡಿಯೂರಪ್ಪ ಅವರ ಆಪ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಯಡಿಯೂರಪ್ಪ ಪ್ರತಿಪಕ್ಷದ ನಾಯಕರಾಗಿದ್ದಾಗಲೂ ಸೇವೆ ಸಲ್ಲಿಸಿದ್ದರು.


ಯಡಿಯೂರಪ್ಪ ಅವರ ಆಡಳಿತ ಕಾಲದಲ್ಲಿ ನೀರಾವರಿ ಇಲಾಖೆಯಲ್ಲಿ ಸುಮಾರು 2 ಎರಡು ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನೀರಾವರಿ ಇಲಾಖೆಯ ಟೆಂಡರ್‌, ಬಿಲ್‌ ಪಾಸ್‌ ಮಾಡಿರುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಹಾರಗಳನ್ನೂ ಉಮೇಶ್‌ ಅವರೇ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಉಮೇಶ್‌ ಅವರು ಗುತ್ತಿಗೆದಾರರು ಸಿಮೆಂಟ್‌ ಡೀಲರ್‌ ಗಳ ಸಂಪರ್ಕ ಹೊಂದಿದ್ದರು. ಚಾರ್ಟೆಡ್‌ ಅಕೌಂಟೆಂಟ್‌ಗಳು ಜೊತೆಗೆ ಸಂಪರ್ಕ ಟ್ಯಾಕ್ಸ್‌ ವಂಚನೆ ನಡೆಸಿರುವ ಆರೋಪ ಕೇಳಿ ಬಂದಿದೆ.‌ ಈ ಕುರಿತು ತನಿಖೆಯಿಂದಲೇ ಹೆಚ್ಚಿನ ವಿವರ ತಿಳಿಯಬೇಕಾಗಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top