|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಪವಾಸ ವ್ರತ ಫ್ಯಾಶನ್ ಅಲ್ಲ, ಅದಕ್ಕೆ ವಿಶೇಷ ಮಹತ್ವವಿದೆ: ಡಾ. ಗಾಳಿಮನೆ

ಉಪವಾಸ ವ್ರತ ಫ್ಯಾಶನ್ ಅಲ್ಲ, ಅದಕ್ಕೆ ವಿಶೇಷ ಮಹತ್ವವಿದೆ: ಡಾ. ಗಾಳಿಮನೆ

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನವರಾತ್ರಿ ವಿಶೇಷ ಉಪನ್ಯಾಸ




ಪುತ್ತೂರು: ನವರಾತ್ರಿಯ ಸಂದರ್ಭದಲ್ಲಿನ ಒಂಭತ್ತು ದಿನಗಳಲ್ಲಿ ದೈವಿಶಕ್ತಿಯು ಆಗಾಧವಾಗಿದ್ದು ಬೇಡಿದ ವರಗಳನ್ನು ದೇವಿಯು ಅನುಗ್ರಹಿಸುತ್ತಾಳೆ. ಬೇರೆ ಬೇರೆ ಕಾಲಘಟ್ಟದಲ್ಲಿ ದುಷ್ಟ ಸಂಹಾರಕ್ಕೆ ಶಿಷ್ಟರ ರಕ್ಷಣೆಗೆ ತಾಯಿ ಹಲವಾರು ರೂಪಗಳನ್ನು ತಾಳಿದ್ದಾಳೆ. ಅಂತಹ ಮಾತೃಸ್ವರೂಪಿಣಿಯನ್ನು ಪೂಜಿಸಿ ಆರಾಧಿಸಿ ನಮ್ಮ ಜೀವನವನ್ನು ಸಾರ್ಥಕಗೊಳಿಸಬೇಕೆಂದು ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಭಟ್ಟ ಗಾಳಿಮನೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.


ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನವರಾತ್ರಿ ದಿನಗಳಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಯಾಕೆಂದರೆ ನವರಾತ್ರಿಯ ಸಂದರ್ಭದಲ್ಲಿನ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಉಪವಾಸವೆನ್ನುವುದು ಫ್ಯಾಶನ್ ಆಗಿದೆ. ಆದರೆ ನಿಷ್ಠೆಯಿಂದ ಕ್ರಮಬದ್ಧವಾಗಿ ಆಚರಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರುವುದಕ್ಕೆ ಸಾಧ್ಯ ಎಂದರಲ್ಲದೆ ಶರದೃತುವಿನಲ್ಲಿ ಆರಂಭವಾಗುವ ನವರಾತ್ರಿ ಶುಭ್ರವಾದ ಬೆಳದಿಂಗಳ ಸಂಕೇತ. ಇದು ಕೇವಲ ಕಾಲ ಅಥವ ಸಮಯಕ್ಕೆ ಮೀಸಲಾಗದೆ ನಮ್ಮ ಅಂತರಂಗವನ್ನು ಬೆಳಗುವ ಬೆಳಕಾಗಬೇಕು ಎಂದರು .


ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಶಂಕರನಾರಾಯಣ ಭಟ್ ಎಸ್ ಉಪಸ್ಥಿತರಿದ್ದು ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ವೃಂದ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶಾಶ್ವಿತಾ ಡಿ. ಎಂ ನಿರೂಪಿಸಿ ವಂದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم