ಪುತ್ತಿಗೆ: ಕಂಬಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ನೂತನ ಪವಿತ್ರ ಪಾಣಿ ಹಾಗೂ ಮೊಕ್ತೇಸರರಾಗಿ ಶ್ರೀಯುತ ಎಡಕ್ಕಾನ ರವಿಶಂಕರ ಭಟ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇವರು ನಿಕಟ ಪೂರ್ವ ಮೊಕ್ತೇಸರರಾಗಿದ್ದ ದಿ| ರಾಮ ಭಟ್ ಎಡಕ್ಕಾನ ಇವರ ಸಹೋದರ ದಿ| ಪದ್ಮನಾಭ ಭಟ್ ಎಡಕ್ಕಾನ ಇವರ ಸುಪುತ್ರ.
ನವರಾತ್ರಿಯ ಆರಂಭದ ದಿನ ಪವಿತ್ರಪಾಣಿಯಾಗಿ ಆಯ್ಕೆಯಾದ ರವಿಶಂಕರ ಭಟ್ಟರು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿ ಅಮ್ಮನ ಸೇವಾ ಕೈಂಕರ್ಯಕ್ಕೆ ಸದಾ ಬದ್ಧರಾಗಿರುವ ಭಾವವನ್ನು ವ್ಯಕ್ತಪಡಿಸಿದರು.
ಶ್ರೀ ರವಿಶಂಕರ ಭಟ್ಟರಿಗೆ ತಾಯಿ ದುರ್ಗಾಪರಮೇಶ್ವರಿಯು ಸಕಲೈಶ್ವರ್ಯಗಳನ್ನಿತ್ತು ಹರಸಲಿ ಎಂದು ಎಡಕ್ಕಾನ ಕುಟುಂಬಸ್ಥರು, ಕ್ಷೇತ್ರದ ಪದಾಧಿಕಾರಿಗಳು ಹಾಗೂ ಊರ ಸಮಸ್ತರ ಪ್ರಾರ್ಥನೆ ಸಲ್ಲಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ