|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದ್ವಾದಶಾನುಪ್ರೇಕ್ಷೆ: ಶಾಸ್ತ್ರದಾನ ಕೃತಿ ಬಿಡುಗಡೆ

ದ್ವಾದಶಾನುಪ್ರೇಕ್ಷೆ: ಶಾಸ್ತ್ರದಾನ ಕೃತಿ ಬಿಡುಗಡೆ


ಮೂಡಬಿದ್ರೆಯ 18 ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್ ಬುಧವಾರ “ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿಸಿದರು. ಆರ್.ಯನ್. ಪೂವಣಿ, ಇದ್ದರು.


ಉಜಿರೆ: ಜೈನಕಾಶಿ ಮೂಡಬಿದ್ರೆಯಲ್ಲಿರುವ ಮಹಾದೇವಿ ಶೆಟ್ಟಿ ಬಸದಿಯ ಅರ್ಚಕರಾದ ಎಮ್. ಜಯಸೇನ ಇಂದ್ರರು ತಮ್ಮ ಗ್ರಂಥ ಭಂಡಾರದಲ್ಲಿದ್ದ “ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಆಸಕ್ತರಿಗೆ ಸ್ವಾಧ್ಯಾಯಕ್ಕಾಗಿ ಪ್ರಕಾಶನಗೊಳಿಸಿದ್ದಾರೆ.


ತಾನು ಪೌರೋಹಿತ್ಯದಿಂದ ಸಂಪಾದಿಸಿದ ಹಣವನ್ನು ಶಾಸ್ತ್ರದಾನ ವಿನಿಯೋಗಿಸುವ ದೃಢ ಸಂಕಲ್ಪ ಮಾಡಿರುವ ಅವರು ಈ ಕೃತಿಯನ್ನು ಗ್ರಂಥಾಲಯಗಳಿಗೆ ಹಾಗೂ ಆಸಕ್ತ ಓದುಗರಿಗೆ “ಶಾಸ್ತ್ರದಾನ”ವಾಗಿ ಉಚಿತವಾಗಿ ವಿತರಿಸುತ್ತಾರೆ.


ಜೈನಧರ್ಮದ ಪ್ರಕಾರ ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗಬಲ್ಲ. ಮೋಕ್ಷ ಪ್ರಾಪ್ತಿಯೇ ಜೀವನದ ಅಂತಿಮ ಗುರಿ. ಅನುಪ್ರೇಕ್ಷೆ ಎಂದರೆ ಬಾರಿ ಬಾರಿ ಚಿಂತಿಸುವುದು ಎಂದು ಅರ್ಥ. ಸ್ವಾಧ್ಯಾಯದ ಮೂಲಕ ತಪದಲ್ಲಿ ಏಕಾಗ್ರತೆ ಉಂಟಾಗಲು ಅನುಪ್ರೇಕ್ಷೆ ಸಹಕಾರಿಯಾಗಿದೆ.

ಮೂಡಬಿದ್ರೆಯ 18 ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್ ಬುಧವಾರ “ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿಸಿದರು.


ಮೂಡಬಿದ್ರೆಯ 18 ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್ ಅವರ ನೇತೃತ್ವ ಮತ್ತು ಸಹಭಾಗಿತ್ವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ. ಜಯಮಾಲ ಯನ್. ಕೃತಿಯ ಮರು ಪ್ರಕಾಶನಕ್ಕೆ ಸಹಕಾರ ನೀಡಿರುತ್ತಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم