|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ರಾಂತಿ ವೀರ ಭಗತ್ ಸಿಂಗ್

ಕ್ರಾಂತಿ ವೀರ ಭಗತ್ ಸಿಂಗ್

 


ಪುಸ್ತಕದ ಹೆಸರು: ಹುತಾತ್ಮ ಭಗತ್ ಸಿಂಗ್- ಬದುಕು ಚಿಂತನೆ

ಮೊದಲ ಪ್ರಕಾಶನ 2009

ಮುಖಪುಟ ವಿನ್ಯಾಸ: ನವಕರ್ನಾಟಕ ವಿನ್ಯಾಸ

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ ಪ್ರೈವೇಟ್ ಲಿಮಿಟೆಡ್

ಲೇಖಕರು: ಎ.ಬಿ ಬರ್ಧನ್

ಅನುವಾದಕರು: ಹಲೀಮತ್- ಸ-ಅ-ದಿಯ


ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ವೀರರು ಮಡಿದಿದ್ದಾರೆ. ಅವರನ್ನು ಗಗನದಲ್ಲಿರುವ ನಕ್ಷತ್ರಗಳಿಗೆ ಹೋಲಿಸಬಹುದು. ಅವುಗಳಲ್ಲಿ ಭಗತ್ ಸಿಂಗ್ ಹೊಳೆಯುವ ನಕ್ಷತ್ರವೇ ಸರಿ ಎಂದು ಲೇಖಕಕರು ತಮ್ಮ ಮಾತುಗಳನ್ನು ಆರಂಭಿಸುತ್ತಾರೆ. ಗಾಂಧೀಜಿ ಅಹಿಂಸಾ ಮಾರ್ಗ ಹಿಡಿದರೆ ಭಗತ್ ಕ್ರಾಂತಿಯ ಮಾರ್ಗ ಆಯ್ದುಕೊಂಡರು. ಲೇಖಕ ಎ.ಬಿ ಬರ್ಧನ್ ಅವರು ಬರೆದ ಲೇಖನವನ್ನು ಹಲೀಮತ್-ಸ-ಅ-ದಿಯ ಬಹಳ ಚೆನ್ನಾಗಿ ಅನುವಾದಿಸಿದ್ದಾರೆ. ಇದರಲ್ಲಿ ಭಗತ್ ಮಾಡಿದ ಪ್ರತಿಯೊಂದು ಕಾರ್ಯವನ್ನು ಬಹಳ ಚೆನ್ನಾಗಿ ವಿವರಿಸುತ್ತಾ ಹೋಗುತ್ತಾರೆ ಲೇಖಕರಾದ ಹಲೀಮತ್ ಅವರು. ಇದನ್ನು ಓದುತ್ತಾ ಹೋದಂತೆ ಪ್ರತಿಯೊಂದು ದೃಶ್ಯವೂ ಕಣ್ಣಿಗೆ ಕಟ್ಟಿದ ಅನುಭವವಾಗುತ್ತದೆ. ಭಗತ್ ಸಿಂಗ್ ಬಗ್ಗೆ ಬಹಳ ಉತ್ತಮ ಮಾಹಿತಿಯು ಈ ಲೇಖನವನ್ನು ಓದುತ್ತಾ ಹೋದಂತೆ ತಿಳಿರುತ್ತಾ ಹೋಗುತ್ತದೆ.


ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬ ಅಪ್ರತಿಮ ವೀರನ ಕುರಿತು ಈ ಲೇಖನವು ತಿಳಿಸುತ್ತಾ ಹೋಗುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ವೀರನ ಕುರಿತು ಲೇಖಕರು ತಮ್ಮ ಈ ಲೇಖನದಲ್ಲಿ ಬಹಳ ಸರಳ ಭಾಷೆಯಲ್ಲಿ ವಿವರಿಸುತ್ತಾರೆ. ಈ ಲೇಖನವನ್ನು ಓದುವಾಗ ನನಗೆ ಒಂದು ಘಟನೆ ನೆನಪಿಗೆ ಬರುತ್ತಿದೆ. "ಭಗತ್ ಸಿಂಗ್ ಹಾಗೂ ಸಹಚರರ ಮೇಲೆ ಬಟುಕೇಶ್ವರ ದತ್ ಬಾಂಬ್ ಎಸೆಯುವ ಸಂದರ್ಭದಲ್ಲಿ ಭಗತ್ ಸಿಂಗರು ಇಂಕಿಲಾಬ್ ಜಿಂದಾಬಾದ್, ಬ್ರಿಟಿಷ್ ದೌರ್ಜನ್ಯ ಕೊನೆಗೊಳ್ಳಲಿ, ಜಗತ್ತಿನ ಕಾರ್ಮಿಕರೆಲ್ಲರೂ ಒಗ್ಗಟ್ಟಾಗಿ ಎಂಬ ಘೋಷಣಾವಾಕ್ಯವನ್ನು ಕೂಗಿದ ಘಟನೆ ನನಗೆ ನೆನಪಿಗೆ ಬರುತ್ತದೆ. ಎಂಬಿತ್ಯಾದಿ ಹಲವಾರು ವಿಷಯಗಳನ್ನು ಹುತಾತ್ಮ-ಭಗತ್-ಸಿಂಗ್ ಎಂಬ ಲೇಖನದಲ್ಲಿ ಲೇಖಕರು ವಿವರಿಸುತ್ತಾ ಹೋಗುವುದು ಓದುಗರನ್ನು ಇನ್ನಷ್ಟು ಓದುವಂತರ ಪ್ರೇರೇಪಿಸುವುದು ಮಾತ್ರವಲ್ಲ ಪ್ರತಿರೊಂದು ಹಂತವನ್ನು ಕಣ್ಣಾರೆ ಕಂಡಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಇದು ಒಂದು ಉತ್ತಮ ಲೇಖನ ಮತ್ತು ಇತಿಹಾಸದ ವಿದ್ಯಾರ್ಥಿ ಹಾಗೂ ಇತರರು ಓದಲೇ ಬೇಕಾದ ಒಂದು ಲೇಖನ.

-ಕಾರ್ತಿಕ್ ಕುಮಾರ್ ಕೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





0 Comments

Post a Comment

Post a Comment (0)

Previous Post Next Post