||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಜನಾ ಮಂಡಳಿಗಳು ವ್ಯಸನಮುಕ್ತ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಬೇಕು: ಡಾ. ಎಲ್‌.ಎಚ್‌. ಮಂಜುನಾಥ್‌

ಭಜನಾ ಮಂಡಳಿಗಳು ವ್ಯಸನಮುಕ್ತ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಬೇಕು: ಡಾ. ಎಲ್‌.ಎಚ್‌. ಮಂಜುನಾಥ್‌ಧರ್ಮಸ್ಥಳ: ಸಮಾಜದ ದೇಶದ ಅಭಿವೃದ್ದಿಯಲ್ಲಿ ಭಜನಾ ಮಂಡಳಿಗಳು ಗುರುತರವಾದ ಕೊಡುಗೆಗಳನ್ನು ನೀಡಬಹುದು, ಧಾರ್ಮಿಕ ಆಚರಣೆಗಳ ಜೊತೆಗೆ ಸಾಮಾಜಿಕವಾಗಿ ತನ್ನ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ ಪೂರಕ, ಕೃಷಿ ಅಭಿವೃದ್ಧಿಗೆ ಪೂರಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವುದು ಅಗತ್ಯವಿದೆ. ಮಹಾತ್ಮ ಗಾಂಧಿಜಿಯವರು ತಮ್ಮ ಚಳುವಳಿಯನ್ನು ಒಂದು ಗ್ರಾಮದಲ್ಲಿ ತಂತ್ರಜ್ಞಾನ ಕಡಿಮೆ ಇದ್ದ ಕಾಲದಲ್ಲಿ ಆರಂಭಿಸಿದರು. ಅತ್ಯಂತ ಸರಳ ಸಜ್ಜನಿಕೆಯು ಅವರ ವ್ಯಕ್ತಿತ್ವ ಎಲ್ಲರಿಗೂ ಆಪ್ತವಾಯಿತು. ಸಂಘಟನೆ, ಬಲವರ್ಧನೆಗಾಗಿ ಅವರು ನಡೆದಂತಹ ದಾರಿ ನಮಗೆ ಇಂದು ದೀಪವಾಗಿ ನಿಂತಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್. ಎಚ್. ಮಂಜುನಾಥ್ ರವರು ನುಡಿದರು.


ಯಶಸ್ವೀ ಮಂಡಳಿಗಳ ಹಿಂದೆ ಯಶಸ್ವೀ ನಾಯಕನ ಪಾತ್ರ ಬಹಳಷ್ಟಿದೆ. ಈ ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಅಧ್ಯಯನಶೀಲರಾಗಿರಬೇಕು ಮತ್ತು ಸದ್ಭಾವನೆ, ಸಹಾನುಭೂತಿ, ಸಮಭಾವ ಹೊಂದಿರುವ ಮುಖ್ಯ ಮಂಡಳಿಗಳು ತಮ್ಮ ಕಾರ್ಯಕ್ರಮದಲ್ಲಿ ತಮ್ಮ ಗ್ರಾಮದ ಸ್ವಚ್ಚತೆ ಅರಿವು, ಶಿಸ್ತುಬದ್ಧ ನಡವಳಿಕೆಗಳು, ಜಾತ್ರೆಗಳಲ್ಲಿ ಪಾಲ್ಗೊಳ್ಳುವಿಕೆ, ಶ್ರಮದಾನ ಕ್ರಮಗಳು, ಆರ್ಥಿಕ ವಲಯದಲ್ಲಿ ರೈತ ಉತ್ಪಾದನಾ ಕೇಂದ್ರಗಳ ರಚನೆ, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬಿ ಜಾಗ್ರತಿ ಹೀಗೆ ಅನೇಕ ಅಭಿವೃದ್ಧಿ ಪೂರಕ ಕ್ರಮ ಕೈಗೊಳ್ಳಬಹುದು. ಭಜನಾ ಮಂಡಳಿಗಳಿಗೆ ಈ ಶಕ್ತಿ ಇದೆ. ಇದರ ಸದುಪಯೋಗ ಮಾಡಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಬಹುದು ಎಂದು ಅವರು ನುಡಿದರು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post