||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

ಧರ್ಮಸ್ಥಳದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

ಭಜನೆಯಿಂದ ಸಾಮಾಜಿಕ ಪರಿವರ್ತನೆಉಜಿರೆ: ಭಜನೆಯಿಂದ ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಾಮಾಜಿಕ ಪರಿವರ್ತನೆಯಾಗುತ್ತದೆ. ಉತ್ತಮ ನಾಯಕತ್ವದೊಂದಿಗೆ ದುಶ್ಚಟ ಮುಕ್ತವಾದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು. 


ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.


ಸದಾ ಸತ್ಯವನ್ನೆ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆದಾಗ ಋಣಾತ್ಮಕ ಭಾವನೆಗಳು ದೂರವಾಗಿ, ಧನಾತ್ಮಕ ಚಿಂತನೆಗಳು ಮೂಡಿ ಬರುತ್ತವೆ. ಭಜನೆಯ ಮೂಲಕ ಭಕ್ತಿಯ ಪರಾಕಾಷ್ಟೆಯೊಂದಿಗೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಮಕ್ಕಳಿಗೆ ಭಜನಾ ಸಂಸ್ಕøತಿಯ ತರಬೇತಿಯನ್ನು ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.


ಶುಭಾಶಂಸನೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಮಾತನಾಡಿ, ಹಿಂದೂ ಧರ್ಮ ವಿಶಾಲ ಮನೋಧರ್ಮ ಹೊಂದಿದ್ದು, ಧರ್ಮವು ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ಯುವ ಜನತೆ ಧರ್ಮದ ಮರ್ಮವನ್ನು ಅರಿತು ಆಚರಣೆ ಮಾಡಬೇಕು. ಸನಾತನ ಸಂಸ್ಕøತಿಯ ರಾಯಬಾರಿಗಳಾಗಬೇಕು ಎಂದು ಅವರು ಸಲಹೆ ನೀಡಿದರು. ಸಂದರ್ಭಕ್ಕೆ ಸರಿಯಾಗಿ ಭಜನೆ ಹಾಡಬೇಕು. ರಾಗ, ತಾಳ, ಲಯ ಬದ್ಧವಾದ ಭಜನೆಗಳನ್ನು ಶ್ರದ್ಧಾ-ಭಕ್ತಿಯಿಂದ ಹಾಡಿ, ಕೇಳಿ ಅದರ ಸೊಗಡನ್ನು ಆಸ್ವಾದಿಸಿ ಅನುಭವಿಸಬೇಕು ಎಂದು ಅವರು ಸಲಹೆ ನೀಡಿದರು.


ಭಜನಾ ತರಬೇತಿ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.


ಮುಖ್ಯಾಂಶಗಳು:

• ಭಜನಾ ತರಬೇತಿ ಕಮ್ಮಟ ಏಳು ದಿನಗಳಲ್ಲಿ ನಡೆಯಲಿದೆ.

• 128 ಭಜನಾ ಮಂಡಳಿಗಳ 200 ಮಂದಿ ಸದಸ್ಯರು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.

• ಕಳೆದ 22 ವರ್ಷಗಳಲ್ಲಿ 2059 ಭಜನಾ ಮಂಡಳಿಗಳ 7,205 ಮಂದಿಗೆ ಭಜನಾ ತರಬೇತಿ ನೀಡಲಾಗಿದೆ.

• ಪ್ರತಿ ದಿನ ಯೋಗಾಭ್ಯಾಸ, ಪ್ರಾರ್ಥನೆ, ವ್ಯಾಯಾಮ, ಧ್ಯಾನ, ನೃತ್ಯ ಭಜನೆ, ತಜ್ಞರಿಂದ ವಿಶೇಷ ಉಪನ್ಯಾಸ, ಶೋಭಾನೆ ಹಾಡುಗಳ ಬಗ್ಯೆ ತರಬೇತಿ ನೀಡಲಾಗುತ್ತಿದೆ.


ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆಯವರಿಂದ ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಗೆ ಸಂದೇಶ:

o ಉತ್ತರ ಕರ್ನಾಟಕದಲ್ಲಿ ಭಜನೆ ಆಕರ್ಷಣೀಯವಾಗಿ ನಡೆಯುತ್ತದೆ.

o ಭಜನೆಯಲ್ಲಿ ಶಿಸ್ತು ಇದ್ದರೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ  ನೆಲೆಸುತ್ತದೆ

o ಸಂಘಟನೆಯಿಂದ ಭಜನಾ ಮಂಡಳಿಗಳಲ್ಲಿ ಶಿಸ್ತು ಕಾಪಾಡಲು ಸಾಧ್ಯವಾಗುತ್ತದೆ.

o ಭಗವಂತನನ್ನು ಒಲಿಸಿಕೊಳ್ಳಲು ಭಜನೆಯೇ ಪೂರಕ ಮಂತ್ರವಾಗಿದೆ.

o ನೃತ್ಯ ಭಜನೆಯಲ್ಲಿ ಸಂಗೀತ ಭಜನೆಗೆ ಪ್ರಾಧಾನ್ಯತೆ ನೀಡಬೇಕು.

o ಭಜನಾ ಸಂಗೀತಕ್ಕೆ  ಆಕಾರವನ್ನು ಕೊಟ್ಟ ದಾಸ ಶ್ರೇಷ್ಠರು ಧರ್ಮ ಪ್ರಚಾರವನ್ನು ಸುಲಭವಾಗಿ ಜನಸಾಮಾನ್ಯರಿಗೆ ಮನದಟ್ಟು ಮಾಡಿದರು.

o ಶ್ಲೋಕಗಳನ್ನು ನೆನಪಿಡುವುದು ಕಷ್ಟ, ಆದರೆ ಭಜನೆಗಳನ್ನು ಸುಲಭವಾಗಿ ನೆನಪು ಇಟ್ಟುಕೊಳ್ಳಬಹುದು.

o ಭಜನೆಯ ಸತತ ಅಭ್ಯಾಸದಿಂದ ಸಮಾನತೆ ಒಗ್ಗಟ್ಟು, ಏಕಾಗ್ರತೆ ಕಾಪಾಡಬಹುದು.

o ಸಿನಿಮಾ ಹಾಡುಗಳು ಕೇಳಲು ಇಂಪಾಗಿರುತ್ತದೆ. ಆದರೆ ಅದು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಶಾಸ್ತ್ರೀಯ ಸಂಗೀತ ಮತ್ತು  ಭಕ್ತಿಗೀತೆಗಳು ಸಾವಿರಾರು ವರ್ಷಗಳಿಂದ  ಶಾಶ್ವತವಾಗಿ ಉಳಿದಿವೆ.

o ನಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ರಾಮಾಯಣ, ಮಹಾಭಾರತದ ಕಥೆಯ ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು.

o ಭಜನಾ ಮಂಡಳಿಗಳನ್ನು  ದೇವಸ್ಥಾನವಾಗಿಸದೆ ಭಜನಾ ಮಂಡಳಿಯಾಗಿಯೇ ಉಳಿಸಿಕೊಳ್ಳಬೇಕು.

o ಭಜನಾ ಮಂಡಳಿಗಳಲ್ಲಿ  ರಾಗ, ತಾಳ  ಪಕ್ವವಾಗಿರಬೇಕು. ಎಂದು ಶಿಬಿರಾರ್ಥಿಗಳಿಗೆ ಸಂದೇಶವನ್ನು ನೀಡಿದರು.

ಶ್ರೀ ಸುಬ್ರಹ್ಮಣ್ಯ ಪ್ರಸಾದ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪೂಜ್ಯರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ| ಎಲ್ ಎಚ್ ಮಂಜುನಾಥ್ ಮತ್ತು ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ತೋಳ್ಪಡಿತ್ತಾಯರು ಗೌರವಾರ್ಪಣೆ ಮಾಡಿದರು, ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಮಮತಾ ರಾವ್ ವಂದಿಸಿದರು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post