ಅಂಬಿಕಾದಲ್ಲಿ ಅ.12ರಂದು ಶಾರದಾಪೂಜೆ ಹಾಗೂ ಸಾರ್ವಜನಿಕ ಅಕ್ಷರಾಭ್ಯಾಸ

Upayuktha
0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಕ್ಟೋಬರ್ 12ರಂದು ಶಾರದಾಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ (ಸಿಬಿಎಸ್‍ಇ)ದಲ್ಲಿ ನಡೆಯಲಿದೆ.


ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಹೆತ್ತವರು ಪೂರ್ವಾಹ್ನ ಹತ್ತು ಗಂಟೆಯ ಒಳಗಾಗಿ ತಮ್ಮ ಮಕ್ಕಳೊಂದಿಗೆ ವಿದ್ಯಾಲಯದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ.


ಭಾಗವಹಿಸುವವರು ಅಕ್ಟೋಬರ್ 12ರ ಬೆಳಗ್ಗೆ 8 ಗಂಟೆಯ ಒಳಗಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ತಮ್ಮ ಹಾಜರಿಯನ್ನು ದಾಖಲು ಮಾಡುವಂತೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊ: 8197251489 / 9449102082.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Advt Slider:
To Top