|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಪದವಿ ಕಾಲೇಜಿನಿಂದ ಮೂರು ದಿನಗಳ ಭಗವದ್ಗೀತಾ ಉಪನ್ಯಾಸ ಮಾಲಿಕೆ

ಅಂಬಿಕಾ ಪದವಿ ಕಾಲೇಜಿನಿಂದ ಮೂರು ದಿನಗಳ ಭಗವದ್ಗೀತಾ ಉಪನ್ಯಾಸ ಮಾಲಿಕೆ

 



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಕಾಲೇಜಿನ ಸಂಸ್ಕøತ ಮತ್ತು ತತ್ತ್ವಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಸ್ಕೃತ ಮಾಸಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೂರು ದಿನಗಳ ಭಗವದ್ಗೀತಾ ಉಪನ್ಯಾಸ ಆನ್ ಲೈನ್ ವೇದಿಕೆ ಮೂಲಕ ಆಗಸ್ಟ್ 27ರಿಂದ 29ರವರೆಗೆ ನಡೆಯಿತು.


ಉದ್ಘಾಟನಾ ಸಮಾರಂಭದಂದು ಕರ್ಮ ಎಂಬ ವಿಚಾರದ ಬಗೆಗೆ ಮಾತನಾಡಿದ ಅಂಬಿಕಾ ಪದವಿ ಕಾಲೇಜಿ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಭಗವದ್ಗೀತೆ ಹುಟ್ಟಿದ್ದೇ ಕರ್ಮಕ್ಷೇತ್ರದಲ್ಲಿ. ಧರ್ಮದ ಬೆಳೆ ಬೆಳೆಯಬೇಕೆಂದು ಚಂದ್ರವಂಶದ ಅರಸ ಕುರು ಮಹಾರಾಜ ಹೊರಡುತ್ತಾನೆ. ಆಗ ಶ್ರೀಮನ್ನಾರಾಯಣನು ಕಾಲಾಂತರದಲ್ಲಿ ತಾನೇ ಅವತರಿಸಿ ಪ್ರತಿಯೊಬ್ಬರಿಗೂ ಪಾತಃಸ್ಮರಣೀಯವಾದ ವಿಚಾರಧಾರೆಗಳನ್ನು, ಜೀವ ಭಾವದ ರಹಸ್ಯಗಳನ್ನು ತಿಳಿಸಿಕೊಡುವವನಿದ್ದೇನೆ ಎಂದು ತಿಳಿಸಿಕೊಡುತ್ತಾನೆ. ಅದನ್ನೇ ನಾವಿಂದು ಭಗವದ್ಗೀತೆ ಎಂದು ಆರಾಧಿಸುತ್ತಿದ್ದೇವೆ ಎಂದು ನುಡಿದರು.


ಕೆಸವಿನ ಎಲೆಯ ಮೇಲೆ ನೀರು ಇರುವಂತೆ ನಮ್ಮ ಕರ್ಮ ಇರಬೇಕು. ನಿರೀಕ್ಷೆಗಳೇ ನಮ್ಮೆಲ್ಲರ ಸಮಸ್ಯೆ. ಅದನ್ನು ಮೀರಿ ಕರ್ತವ್ಯವನ್ನಷ್ಟೇ ಮಾಡುವ ಮನಃಸ್ಥಿತಿ ನಿರ್ಮಾಣವಾಗಬೇಕು. ಅದಕ್ಕಾಗಿ ಮನಸ್ಸನ್ನು ಸ್ಥಿರಗೊಳಿಸಬೇಕು. ಚಂಚಲತೆ ಮನಸ್ಸಿನ ಸಹಜವಾದ ಗುಣ. ಹಾಗಾಗಿಯೇ ನಮ್ಮ ಕಾರ್ಯಗಳಲ್ಲಿ ಅನೇಕ ವ್ಯತ್ಯಯಗಳಾಗುತ್ತವೆ. ಈ ನೆಲೆಯಿಂದ ನಮ್ಮನ್ನು ನಾವು ನಿರೀಕ್ಷೆ ಇಲ್ಲದೆ, ಆಕಾಂಕ್ಷೆಗಳಿಲ್ಲದೆ  ಕೆಲಸ ಮಾಡುವ ನೆಲೆಯಲ್ಲಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಕರ್ಮ, ಭಕ್ತಿ ಹಾಗೂ ಜ್ಞಾನಯೋಗಗಳಲ್ಲಿ ಜನಸಾಮಾನ್ಯರಿಗೆ ಕರ್ಮಯೋಗವೇ ಹೆಚ್ಚು ಹತ್ತಿರವಾಗುವಂತಹದ್ದು. ಈ ನೆಲೆಯಿಂದ ಕರ್ಮಯೋಗವನ್ನು ಸರಳವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಕಾರ್ಯ ಆಗಬೇಕಿದೆ. ಸಂಸ್ಕøತ ಮತ್ತು ಭಗವದ್ಗೀತೆ ಒಂದಕ್ಕೊಂದು ಕೊಂಡಿ ಹೊಂದಿವೆ ಎಂದರಲ್ಲದೆ ಕೃಷ್ಣ ಜನ್ಮಾಷ್ಟಮಿ ಎಂಬುದು ಕೇವಲ ಉಂಡೆ ಚಕ್ಕುಲಿಗೆ ಸೀಮಿತವಾಗಬಾರದು. ಹಿಂದೂ ಧರ್ಮದ ಭಾವನೆ, ನಾಡಿಗಳನ್ನು ಅರಿಯುವ ಕಾರ್ಯ ಆಗಬೇಕಿದೆ ಎಂದರು.


ಎರಡನೆಯ ದಿನ ಭಕ್ತಿ ಎಂಬ ವಿಷಯದ ಬಗೆಗೆ ಮಾತನಾಡಿದ ಅಂಬಿಕಾ ಪದವಿ ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಉಪನ್ಯಾಸಕ ತೇಜಶಂಕರ ಸೋಮಯಾಜಿ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವ ಕರ್ಮ ಅತ್ಯಂತ ಶ್ರೇಷ್ಟವಾದದ್ದು. ಭಕ್ತಿಯಿಂದ ಸಮರ್ಪಣೆ ಮಾಡುವ ಎಲ್ಲವೂ ಭಗವಂತನಿಗೆ ಸ್ವೀಕಾರಾರ್ಹವಾಗುತ್ತದೆ. ಭಕ್ತಿ ಇಲ್ಲದೆ ಏನನ್ನೇ ನಾವು ದೇವರಿಗೆ ಅರ್ಪಿಸಿದರೂ ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.


ನಾವಿಂದು ದೇವಸ್ಥಾನಕ್ಕೆ ತೆರಳಿ ಪ್ರಣಾಮ ಮಾಡುವುದರ ಬದಲಾಗಿ ಭಾವಚಿತ್ರ ತೆಗೆಸಿಕೊಳ್ಳುವುದರಲ್ಲೇ ಸಮಯ ಕಳೆಯುತ್ತಿದ್ದೇವೆ. ನನಗೆ ಇಂತಹದ್ದನ್ನು ದಯಪಾಲಿಸು ಎಂಬ ಪಟ್ಟಿಯನ್ನು ಹಿಡಿದೇ ದೇವರಿಗೆ ಕಾಣಿಕೆ ಅರ್ಪಿಸುತ್ತಿದ್ದೇವೆ. ಒಂದು ರೀತಿಯಲ್ಲಿ ದೇವರ ಜತೆಗೇ ನಾವು ವ್ಯವಹಾರ, ಚೌಕಾಸಿಗಿಳಿಯುತ್ತಿದ್ದೇವೆ. ಹೀಗಿರುವಾಗ ಭಗವಂತ ಒಲಿಯುವುದಾದರೂ ಹೇಗೆ ಎಂಬುದನ್ನು ಆಲೋಚಿಸಬೇಕು. ವ್ಯಕ್ತಿಯಲ್ಲಿ ಭಕ್ತಿ ಬಂದಾಗ ಮಾತ್ರ ಕರ್ಮಾಚರಣೆಗಳು ಸರಿಯಾಗಿ ಮೂಡಿಬಂದು ಮುಕ್ತಿಯ ಹಾದಿ ತೆರೆದೀತು ಎಂದು ಅಭಿಪ್ರಾಯಪಟ್ಟರು.


ಮೂರನೆಯ ದಿನ ಸಮಾರೋಪ ಸಮಾರಂಭದಂದು ಜ್ಞಾನ ಎಂಬ ವಿಷಯದ ಬಗೆಗೆ ಮಾತನಾಡಿದ ಬೆಂಗಳೂರಿನ ವೇದವಿಜ್ಞಾನ ಸಂಸ್ಥೆಯ ಸಂಶೋಧನಾ ಮಾರ್ಗದರ್ಶಕ ಡಾ.ಜಿ.ಎನ್.ಭಟ್ ಭಗವಾನ್ ಶ್ರೀಕೃಷ್ಣ ಜಗತ್ತಿನ ಅತ್ಯುತ್ತಮ ಗುರು ಮಾತ್ರವಲ್ಲದೆ ಶ್ರೇಷ್ಟ ಮನಃಶಾಸ್ತ್ರಜ್ಞ ಎಂದರಲ್ಲದೆ ಇಲ್ಲದ್ದನ್ನು ಬಯಸುವುದೇ ಕಾಮನೆ. ಅದಕ್ಕೆ ಕೊನೆಯಿಲ್ಲ. ಮೋಹವೇ ಜ್ಞಾನ ಸಂಗ್ರಹಣೆಗೆ ಅತ್ಯಂತ ದೊಡ್ಡ ಸವಾಲು ಎಂದು ನುಡಿದರು.


ಮೂರೂ ದಿನಗಳ ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ  ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಹೆತ್ತವರು, ಬೋಧಕ ಮತ್ತು ಬೋಧಕೇತರ ವೃಂದ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾದರು. ಅಂಬಿಕಾ ಪದವಿ ಕಾಲೇಜಿನ ಉಪನ್ಯಾಸಕರಾದ ಅಕ್ಷಯ್ ಹೆಗಡೆ, ರಾಕೇಶ್ ಕುಮಾರ್ ಕಮ್ಮಜೆ ಹಾಗೂ ಗಣೇಶ್ ಪ್ರಸಾದ್ ಎ ವಿವಿಧ ದಿನಗಳ ಕಾರ್ಯಕ್ರಮವನ್ನು ನಿರ್ವಹಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post