ಈ ಮೆಮೋರಿ ಅನ್ನುವುದೇ ಒಂದು ಅದ್ಬುತ. ಎಷ್ಟೇ ಕಷ್ಟ ಪಟ್ಟರೂ ಕೆಲವು ನೆನಪು ಉಳಿಯಲ್ಲ. ಕೆಲವೊಂದು ಎಷ್ಟೇ ಕಷ್ಟ ಪಟ್ಟರೂ ಮರೆತು ಹೋಗಲ್ಲ!!
ಕೆಲವರಿಗೆ ಮದುವೆ ಆಗಿ ಮೊವತ್ತು ವರ್ಷ ಆದರೂ, ಆ ಹಳೇ ಬಾಯ್ ಫ್ರೆಂಡೋ, ಗರ್ಲ್ ಫ್ರೆಂಡೋ ನೆನಪಲ್ಲಿ ಉಳಿದು ಬಿಡ್ತಾರೆ!! ಕಾಲೇಜಿನಲ್ಲಿ ಪಕ್ಕದಲ್ಲೇ ಮೂರು ವರ್ಷ ಕುಳಿತವ, ಕಾಲೇಜ್ ಬಿಟ್ಟು ಮೂರುವರೆ ವರ್ಷಕ್ಕೆ ಫೋಟೋದಲ್ಲಿ ನೋಡಿದರೂ ನೆನಪಾಗಲ್ಲ!!!
ಅನೇಕ ವರ್ಷಗಳ ಹಿಂದೆ ಅಲ್ಲೆಲ್ಲೋ ಬೆಂಗಳೂರಿನ ವೆಂಕಟೇಶ್ವರ ಸ್ವೀಟ್‌ನಲ್ಲಿ ತಿಂದ ಮೈಸೂರು ಪಾಕ, 'ಮೈಸೂರು ಪಾಕ' ಅಂತ ಶಬ್ದ ಕೇಳಿದಾಗಲೆಲ್ಲ ನೆನಪಾಗುತ್ತೆ. ನೈನ್ಟೀನ್ ನೈನ್ಟಿ ಫೈವ್‌ನಲ್ಲಿ ಕೇಳಿದ್ದ ಕರ್ಣಾವಸಾನ ಕ್ಯಾಸೆಟ್‌ನಲ್ಲಿ ಶೇಣಿಯವರ ಕರ್ಣನ ಮಾತಿನ ವಾಕ್ಯ, ಕೋಮ, ಪೂರ್ಣ ವಿರಾಮ ಸಹಿತ ನೆನಪಿದೆ.
ನಾಗರ ಹಾವಿಗೆ ಹನ್ನೆರಡು ವರ್ಷ ನೆನಪಂತೆ!! ಹನ್ನೆರಡರಲ್ಲಿ ನೋಡಿದ್ದ ವಿಷ್ಣುವರ್ಧನ್‌ರ ನಾಗರ ಹಾವು, ಹನ್ನೆರಡು ಕಳೆದು ವೈಕುಂಠಕ್ಕೆ ಹೋದರೂ ಮರೆಯಲಿಕ್ಕಿಲ್ಲ!!
ಅವತ್ತು ಹೇಳಿದ ಹಾಗೆ, ನನ್ನ ಮೊಬೈಲ್ ನಂಬರ್ ಬಿಟ್ರೆ ಮತ್ತೆ ನನಗೆ ನೆನಪಿರುವುದು ಆ ಬಾಹುಬಲಿ ಹೀರೋಯಿನ್ ಹೇಳಿದ "ಕಾಲ್ ತ್ರಿಬಲ್ ಎಯ್ಟ್ ಜೀರೋ ತ್ರೀ ಹಂಡ್ರೆಡ್, ತ್ರೀ ಹಂಡ್ರೆಡ್ ಎನ್ನುವ ಮೊಬೈಲ್ ನಂಬರ್ ಮಾತ್ರ!! ಅದು ಬಿಟ್ರೆ ನಾನು ಚಿಕ್ಕ ಪೇಟೆಯಲ್ಲಿ ಎಂಟು ವರ್ಷ ಕೆಲಸ ಮಾಡಿದ ಮಾರ್ವಾಡಿ ಸಂಸ್ಥೆಯ ಎರಡು ಲ್ಯಾಂಡ್ ಲೈನ್ ನಂಬರ್‌ಗಳು!!, ಮೂರು ಡಿಜಿಟಿನ ಎರಡು ಬ್ಯಾಂಕ್ ಅಕೌಂಟ್ ನಂಬರ್‌ಗಳು!! ಮರೆಯ ಬೇಕೆಂದರೂ ಮರೆಯಲಿ ಹ್ಯಾಂಗ!!?
ಒಮ್ಮೊಮ್ಮೆ ATM ಗೆ ಹೋಗಿ ನಿಂತು, ಕಾರ್ಡ್ ತುರ್ಕಿ, ಪಿನ್ ಒತ್ತಲು ಹೋದ್ರೆ ಮಹಾಭಾರತದ ಕೋನೇ ಕ್ಷಣದ ಕರ್ಣನ ಸ್ಥಿತಿ!! ಕಲಿತ ಮಂತ್ರ ಕೊನೇಕಾಲದಲ್ಲಿ ಮರೆತ ಪರಿಸ್ಥಿತಿ.
ನಮ್ಮ ಮಲೆನಾಡ ಗಾಂಧಿ ದಿವಂಗತ ಗೋವಿಂದ ಗೌಡರ ಬಳಿ ಒಂದು ಕಾರು ಇತ್ತು. ಪ್ರೈಮರಿ 'ಇಸ್ಕೂಲ್'ಲ್ಲಿ ಓದ್ತಾ ಇರುವಾಗ ದಿನಾ ನೋಡ್ತಿದ್ದ ಕಾರು ಅದು. ಅದರ ನಂಬರ್ 252 !!? ಆ ಕಾರ್ ನಂಬರ್ ಮರೆತೇ ಹೋಗಲ್ಲ.
ಇವತ್ತು ಅವತ್ತಿನ ಆ ಗೋವಿಂದ ಗೌಡರ ಕಾರ್ ನಂಬರ್‌ನಲ್ಲೂ ಒಂದು ವಿಶೇಷತೆ ಸಿಕ್ತು!!
252
ಅದಕ್ಕೊಂದು ಸೊನ್ನೆ ಸೇರಿಸಿ.
2520 !!!
ಅದರಲ್ಲಿ ಏನು ವಿಶೇಷ?
ಇದು 1 ರಿಂದ 10 ರ ವರೆಗಿನ ಯಾವ ಸಂಖ್ಯೆಯಿಂದ ಭಾಗಿಸಿದರೂ ಶೇಷ ಉಳಿಯದೇ (rest zero.) ಭಾಗವಾಗುವ ಕನಿಷ್ಠ ಸಂಖ್ಯೆ!!!!
2520 ÷ 1 = 2520
2520 ÷ 2 = 1260
2520 ÷ 3 = 840
2520 ÷ 4 = 630
2520 ÷ 5 = 504
2520 ÷ 6 = 420
2520 ÷ 7 = 360
2520 ÷ 8 = 315
2520 ÷ 9 = 280
2520 ÷ 10 = 252
In mathematics, no number can be divided by all the numbers from 1 to 10 other than 2520. !!! (ಅಫ್‌ಕೋರ್ಸ 2520ರ ಗುಣಿತಗಳು ಮಾತ್ರ ಈ ನಿಯಮಕ್ಕೆ ಬಾದ್ಯಸ್ತ ಸಂಖ್ಯೆಗಳು).
ಇಷ್ಟೇ ಅಲ್ಲ ಇದರ ವಿಶೇಷ!!
ವಾರಕ್ಕೆ 7 ದಿನಗಳು
ತಿಂಗಳಿಗೆ 30 ದಿನಗಳು
ವರ್ಷಕ್ಕೆ 12 ತಿಂಗಳು
ಈ ಮೂರನ್ನು ಗುಣಿಸಿ....
7 × 30 × 12 = 2520 !!!
ಈ ಗಣಿತ ಚಮತ್ಕಾರ ಕಂಡು ಹಿಡಿದಿದ್ದು ಶ್ರೀ ಶ್ರೀನಿವಾಸ ರಾಮಾನುಜಂ ಅಂತೆ.
ಜೀರೋ ಕಂಡು ಹಿಡಿದಿದ್ದು ಶ್ರೀಆರ್ಯಭಟ ಅಂತೆ.
ಗೋವಿಂದ ಗೌಡರ ಕಾರಿನ ನಂಬರ್ (252)ಗೆ, ಗಣಿತಜ್ಞ ಆರ್ಯಭಟರ ಸೊನ್ನೆ (0) ಸೇರಿಸಿದರೆ, ಗಣಿತಜ್ಞ ಶ್ರೀನಿವಾಸ ರಾಮಾನುಜಂರ ಚಮತ್ಕಾರಿಕ ಸಂಖ್ಯೆ {2520} ಸಿಗುತ್ತದೆ. ಮರೆಯದಂತೆ ನೆನಪಾಗಿ ಉಳಿಯಿತ್ತೆ!!
ಇದಕ್ಕಿಂತ ಹೆಚ್ಚಿನ ತಮಾಷೆ ಬೇಕು ಅಂದ್ರೆ, ನೀವು ಲೈವ್ ರಿಯಾಲಿಟಿ ಕಾಮಿಡಿ ಕ್ರಿಕೇಟ್ ಕಾಮೆಂಟ್ರಿ ಶೋನಲ್ಲಿ "ನಾನು ಅಂದ್ರೆ ಸಂಖ್ಯೆ, ಸಂಖ್ಯೆ ಅಂದ್ರೆ ನಾನು" ಅಂತ ಬೊಗಳೆ ಬಿಡುತ್ತ, IPL ಕ್ರಿಕೇಟ್‌ಗೆ ಜ್ಯೋತಿಷ್ಯ ಟಚ್ ಕೊಟ್ಟು, ಫೋರು, ಸಿಕ್ಸ್ ಹೊಡೆಯುವ ರೀತಿ ಕ್ರಿಕೇಟ್ ಸುಳ್ಳು ಸುಳ್ಳು ಭವಿಷ್ಯ ಹೇಳುವ ಅನಾರ್ಯವರ್ಧಿಗೆ ಕರೆ ಮಾಡಿ!!
ಸಾರಿ, ಅವರ ಮೊಬೈಲ್ ನಂಬರ್ ಮರೆತು ಹೋಗಿದೆ!!
-ಅರವಿಂದ ಸಿಗದಾಳ್, ಮೇಲುಕೊಪ್ಪ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ