ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟನೆ
ಕೊಂಚಾಡಿ: ಲ್ಯಾಂಡ್ ಲಿಂಕ್ಸ್ ಪ್ರದೇಶದ ಜನರ ಬಹುದಿನದ ಬೇಡಿಕೆಯಾದ ಸರಕಾರಿ ಬಸ್ ಓಡಾಟದ ಕನಸು ನನಸಾಗಿದೆ.
ಬುಧವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ನರ್ಮ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಅವರು ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು, ನೌಕರಿಗೆ ಹೋಗುವ ಜನರಿಗೆ ಅನುಕೂಲವಾದ ಸಮಯದಲ್ಲಿ ನರ್ಮ್ ಬಸ್ ಸಂಚಾರ ಅವಕಾಶ ನೀಡಲಾಗಿದೆ. ಪ್ರತೀ 45 ನಿಮಿಷಕ್ಕೆ ನರ್ಮ್ ಬಸ್ ಓಡಾಟ ನಡೆಸಲಿದೆ.
ಇದೀಗ ಪ್ರಾಯೋಗಿಕವಾಗಿ ಸಮಯದಲ್ಲಿ ಓಡಾಟ ನಡೆಸಲಿದೆ. ಬಳಿಕ ಜನರ ಬೇಡಿಕೆ ತಕ್ಕಂತೆ ಸಮಯ ಬದಲಾವಣೆ ಮಾಡಲಾಗುವುದು.ಜನರು ಹೆಚ್ವಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಮೂಲಕ ಸರಕಾರಿ ಬಸ್ ನಿರಂತರವಾಗಿ ಓಡಾಟ ನಡೆಸುವಂತೆ ನೋಡಿಕೊಳ್ಳ ಬೇಕು. ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ, ವಿಕಲ ಚೇತನರಿಗೆ ಸಹಿತ ಅರ್ಹ ಫಲಾನುಭವಿಗಳಿಗೆ ಬಸ್ ಪಾಸ್ ಸೌಲಭ್ಯವಿದೆ. ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಕಂಕನಾಡಿ, ಬಜಾಲ್ ವರೆಗೆ ವ್ಯಾಪ್ತಿ ಹೊಂದಿದೆ ಎಂದರು.
ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯ ನೀರುಮಾರ್ಗ, ವಾಮಂಜೂರು, ಮೂಡುಶೆಡ್ಡೆ ಸಹಿತ ಗ್ರಾಮಾಂತರ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆ ನರ್ಮ್ ಬಸ್ ಓಡಿಸಲಾಗುವುದು ಎಂದು ಈ ಸಂದರ್ಭ ಶಾಸಕರು ನುಡಿದರು.
ಕೆಎಸ್ ಆರ್ಟಿಸಿ ಡಿಸಿ ಅರುಣ್ ಎಸ್.ಎನ್, ಡಿಟಿಒ ಎಚ್.ಆರ್. ಕಮಲ್ ಕುಮಾರ್, ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ನಿಕಟಪೂರ್ಪ ಕಾರ್ಪೊರೇಟರ್ ಶ್ರೀ ರಾಜೇಶ್ ಕೆ, ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಘವೇಂದ್ರ ಉಡುಪ ಮತ್ತು ಸ್ಥಳೀಯ ಪ್ರಮುಖರಾದ ನಾರಾಯಣ ಕಂಜರ್ಪಣೆ, ನಂದಕಿಶೋರ್ ಭಟ್, ಅರುಣ್ ಕುಮಾರ್, ಸಂಧ್ಯಾ ಶೆಟ್ಟಿ ಹಿರಿಯರಾದ ನಾಗಪ್ಪ ಪೂಜಾರಿ, ಜಯಪ್ರಕಾಶ್ ಹೆಗ್ಡೆ, ಕೃಷ್ಣಪ್ಪ ಹರಿಪದವು, ಪ್ರಕಾಶ್ ಉಡುಪ, ಕಿರಣ್ ಪೂಜಾರಿ, ವಸಂತ್ ಮಾಲೆಮಾರ್, ಚೇತನ್ ಸಾಲ್ಯಾನ್, ಜೀತನ್ ದೇವಾಡಿಗ, ಉಮೇಶ್ ಮಾಲೆಮಾರ್ ಉಪಸ್ಥಿತರಿದ್ದರು.
ಬಡಾವಣೆಯ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ಸಿಹಿ ತಿಂಡಿ ವಿತರಿಸಿ ಬಸ್ ಆರಂಭದ ಖುಷಿ ಹಂಚಿಕೊಂಡರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ