ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸನಾ ಚಿನ್ನದ ಪದಕ

Upayuktha
0


ಉಡುಪಿ: ಮಣಿಪಾಲದಲ್ಲಿರುವ ಉಡುಪಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್‍ಶನ್ಸ್‍ನ ದ್ವಿತೀಯ ಬಿಕಾಂ ವಿದ್ ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ ವಿಭಾಗದ ವಿದ್ಯಾರ್ಥಿನಿ ಸನಾ ಅವರು  ಗದಗದಲ್ಲಿ  ನಡೆದ ಬಾಲಕಿಯರ ಕರಾಟೆ (ಕಮಿಟೆ) 50ಕೆಜಿ ಒಳಗಿನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದಿರುತ್ತಾರೆ.


ಸೆ. 25 ಮತ್ತು 26ರಂದು ನಡೆದ ಅಖಿಲ ಕರ್ನಾಟಕ ಸೋಟ್ರ್ಸ್ ಕರಾಟೆ ಅಸೋಸಿಯೇಷನ್ (ರಿ) ಹಾಗೂ ಕಿಯೋ ಮೆಂಬರ್ ಆಫ್ ಏಷಿಯನ್ ಕರಾಟೆ ಫೆಡರೇಶನ್ (ಎಕೆಎಫ್) ಮತ್ತು ವಲ್ರ್ಡ್ ಕರಾಟೆ ಫೆಡರೇಷನ್ (ಡಬ್ಲೂಕೆಎಫ್) ನಡೆಸಿದ ಅಕ್ಸಕ ಕೆಡೆಟ್ ಜೂನಿಯರ್ ಅಂಡರ್ 21 ಮತ್ತು ಸೀನಿಯರ್ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಷಿಪ್ 2021 ಹಾಗೂ ರಾಜ್ಯಮಟ್ಟದ ಮಹಿಳೆಯರ ಕರಾಟೆ(ಕುಮಿಟೆ) 50ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top