ನೂತನ ಶಿಕ್ಷಣ ನೀತಿ: ಸೆ.6ರಂದು ಸಿಎಂಆರ್ ನಲ್ಲಿ ವಿಚಾರಸಂಕಿರಣ

Upayuktha
0


ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನ- ಅವಕಾಶಗಳು ಹಾಗೂ ಕಾರ್ಯತಂತ್ರಗಳು ಕುರಿತು ಒಂದು ದಿನದ ವಿಚಾರಸಂಕಿರಣ ಸೆಪ್ಟಂಬರ್ 6ರಂದು ನಡೆಯಲಿದೆ.


ವಿದ್ಯಾಭಾರತಿ ಕರ್ನಾಟಕ ಮತ್ತು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರು ಮಾರತಹಳ್ಳಿಯ ಐಟಿಪಿಎಲ್ ರೋಡ್ ನಲ್ಲಿರುವ ಎಇಸಿಎಸ್ ಬಡಾವಣೆ ಹತ್ತಿರದ ಸಿಎಂಆರ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ವಿಚಾರಸಂಕಿರಣ ಆಯೋಜಿಸಲಾಗಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ಸಮಾರಂಭ ನಡೆಯಲಿದೆ.


ರಾಜ್ಯ ಪ್ರಾಥಮಿಕ, ಪ್ರೌಢ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್ ವಿಚಾರಸಂಕಿರಣ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯರೂ, ಸಿಎಂಆರ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಕೆ.ಸಿ.ರಾಮಮೂರ್ತಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸುವರು. 

ರಾಷ್ಟ್ರೀಯ ಶಿಕ್ಷಣ ನೀತಿ ಸಲಹಾ ಸಮಿತಿ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ ಸದಸ್ಯ ಎಂ.ಕೆ.ಶ್ರೀಧರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿದ್ಯಾಭಾರತಿಯ ರಾಷ್ಟ್ರೀಯ ಅಧ್ಯಕ್ಷ ದೂಸಿ ರಾಮಕೃಷ್ಣ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.


ನೂತನ ಶಿಕ್ಷಣ ನೀತಿಯಲ್ಲಿಯ ಅವಕಾಶ ಮತ್ತು ಕಾರ್ಯತಂತ್ರಗಳ ಕುರಿತು ಎಲ್ಲ ಆಯಾಮಗಳ ಮೇಲೆ ವಿಚಾರಸಂಕಿರಣದಲ್ಲಿ ತಜ್ಞರಿಂದ ವಿಷಯಗಳ ಮಂಡನೆಯಾಗಲಿದೆ.  

ನೂತನ ಶಿಕ್ಷಣ ನೀತಿಯ ಯಶಸ್ವಿ ಜಾರಿಗಾಗಿ ಕರ್ನಾಟಕದಲ್ಲಿ ಪ್ರತಿ ವಿಷಯಕ್ಕೆ ತಜ್ಞರ ಸಮಿತಿ ರಚಿಸಲಾಗಿದ್ದು, ಸಮಿತಿಯ ಅಂತಿಮ ವರದಿ ಆಧರಿಸಿ ಕರ್ನಾಟಕ ಶಿಕ್ಷಣ ಇಲಾಖೆ ಕೈಪಿಡಿಯೊಂದನ್ನು ಹೊರತರಲಿದೆ.


ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಡಾ.ಬಿ.ನರಸಿಂಹ ಮೂರ್ತಿ,

ಉಪ ಪ್ರಾಚಾರ್ಯರು, ಸಿಎಂಆರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಎಂಆರ್ ಐಟಿ)

M:99169 65022 | Email: viceprincipal@cmrit.ac.in




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top