"ಮನೆಯವರು ನಕ್ಕರು. ಮೊದಲು ಅನುಮಾನದಿಂದ, ನಂತರ ತೃಪ್ತಿಯಿಂದ"
"ಮೊದಲು ಬಾಳೆಕಾಯಿಯಿಂದ ಹೀಗೂ ಮಾಡಬಹುದು ಎಂದು ನಮಗೆ ಯಾರಿಗೂ ಗೊತ್ತಿರಲಿಲ್ಲ. ಮನೆಯವರೆಲ್ಲಾ, ಹೀಗೊಂದು ಸಾಧ್ಯತೆ ಬಗ್ಗೆ ಈ ವರೆಗೆ ಕೇಳಿಯೇ ಇಲ್ಲ’ ಅಂತ ಈ ಪ್ರಸ್ತಾಪ ಕೇಳಿಯೇ ನಕ್ಕುಬಿಟ್ಟರು. ಅಂತೂ ಪೇಟೆಯಿಂದ ಕಲ್ಯಾಣ ಬಾಳೆ ತಂದು ಮಾಡಿಯೇ ಬಿಟ್ವಿ. ಮೊದಲ ಪ್ರಯತ್ನ. ಯಶಸ್ವಿಯೂ ಆಯ್ತು. ತುಂಬಾ ರುಚಿಯಾಯ್ತು. ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾ ಎಲ್ಲರೂ ಇಷ್ಟಪಟ್ಟು ನಗುನಗುತ್ತಾ ತಿಂದರು. ಮಾಡಿದ್ದೆಲ್ಲಾ ಖಾಲಿ" ಎನ್ನುತ್ತಾರೆ ಬೆಂಗಳೂರಿನ ಯುವ ಗೃಹಿಣಿ ಪ್ರದ ಪ್ರಸನ್ನ ಬಿಳುವೆ.
ಬೇಯಿಸುವಾಗಲೇ ಉಪ್ಪು ಹಾಕಿದ ಕಾರಣ ಒಗ್ಗರಣೆ ಹಾಕಲಿಲ್ಲ. ಅಣಬೆಯ ಗ್ರೇವಿಯ ಜತೆ ತಿಂದರು. "ಅಕ್ಕಿ ಶ್ಯಾವಿಗೆಗಿಂತ ಸುಲಭ. ಚೆನ್ನಾಗಿದೆ. ಆರಾಮಾಗಿ ಮಾಡಿ ತಿನ್ನಬಹುದು. ನಮಗಂತೂ ಇಷ್ಟ ಆಯಿತು" ಎಂದು ಅವರ ಅತ್ತೆ ಸುನೀತಾ ದನಿಗೂಡಿಸುತ್ತಾರೆ.
"ಮುಂದೆಯೂ ಮಾಡಬೇಕು" ಎನ್ನುತ್ತಾರೆ ಪ್ರದ ಪ್ರಸನ್ನ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ