|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಟೀಲು ಮೇಳದ ದೇವಿ ಪಾತ್ರಧಾರಿ ಅರುಣ್ ಕೋಟ್ಯಾನ್

ಕಟೀಲು ಮೇಳದ ದೇವಿ ಪಾತ್ರಧಾರಿ ಅರುಣ್ ಕೋಟ್ಯಾನ್


ಕರಾವಳಿಗರ ಮನೆ ಮನಗಳಲ್ಲಿ ಯಕ್ಷಗಾನ ಕಲೆ ಬೆರೆತಿದೆ. ಕಿರಿಯ ವಯಸ್ಸಿನಿಂದಲೇ ಯಕ್ಷಗಾನ ಕಲೆ ಕರಗತ ಮಾಡಿಕೊಂಡು, ಇದೀಗ ಈ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವ ಯಕ್ಷಗಾನ ಕಲಾವಿದ  ಶ್ರೀಯುತ ಅರುಣ್ ಕೋಟ್ಯಾನ್.


ಶ್ರೀಮತಿ ಸರಸ್ವತಿ ಹಾಗೂ ಹರೀಶ್ ಪೂಜಾರಿ ಇವರ ಮಗನಾಗಿ ದಿನಾಂಕ 10.06.1994ರಂದು ಇವರ ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಸೂರ್ಯನಾರಾಯಣ ಪದಕಣ್ಣಾಯ, ದಿವಾಣ ಶಿವಶಂಕರ್ ಭಟ್, ಚಂದ್ರಶೇಖರ್ ಧರ್ಮಸ್ಥಳ, ರಕ್ಷಿತ್ ಶೆಟ್ಟಿ ಇವರ ಯಕ್ಷಗಾನದ ಗುರುಗಳು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಆ ದಿನದ ಪಾತ್ರವನ್ನು ಮೊದಲು ಯಾರು ಮಾಡಿದ್ದಾರೆ ಎಂಬ ವಿಡಿಯೋ ನೋಡ್ತೇನೆ. ವಿಡಿಯೋದಲ್ಲಿ ಪಾತ್ರದ ಬಗ್ಗೆ ತಿಳಿದು ಅರ್ಥ ಆಗದ್ದನ್ನು ಹಿರಿಯ ಕಲಾವಿದರಲ್ಲಿ ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಅರುಣ್ ಅವರು ಹೇಳುತ್ತಾರೆ.


ದಕ್ಷದ್ವಾರ, ಚಕ್ರವ್ಯೂಹ, ಕೀಚಕ ವಧೆ, ಸುಧನ್ವಾರ್ಜುನ ಇವರ ನೆಚ್ಚಿನ ಪ್ರಸಂಗಗಳು. ದಾಕ್ಷಾಯಿಣಿ, ಸುಭದ್ರೆ, ಪ್ರಭಾವತಿ ಇವರ ನೆಚ್ಚಿನ ವೇಷಗಳು. ಉಳ್ಳಾಲ ಚೀರುಂಭ ಭಗವತಿ, ಹೊಸನಗರ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ  ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಒಳ್ಳೆಯ ಸ್ಥಿತಿ ಗತಿಯಲ್ಲಿ ಇದೆ. ಕಲಾವಿದರಿಗೆ ಒಳ್ಳೆಯ ಅವಕಾಶ ಸಿಕ್ಕಿದರೆ ಒಳ್ಳೇದು. ಯಕ್ಷಗಾನ ನಂಬಿ ಬದುಕಲಿಕ್ಕೆ ಮಾತ್ರ ಕಷ್ಟ, ಬೇರೆ ವೃತ್ತಿ ಅಗತ್ಯ ಬೇಕು ಎಂದು ಅರುಣ್ ಅವರು ಹೇಳುತ್ತಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಒಳ್ಳೆಯ ಪ್ರೇಕ್ಷಕರು ಇರ್ತಾರೆ ಹಾಗೂ ಕೆಟ್ಟ ಪ್ರೇಕ್ಷಕರು ಇರ್ತಾರೆ. ಹೊಗಳುವಾಗ ಖುಷಿ ಪಡಬೇಕು, ಟೀಕೆ ಮಾಡಿದರೆ ಅದನ್ನು ಸ್ವೀಕಾರ ಮಾಡಿ ತಿದ್ದಿಕೊಳ್ಳಬೇಕು ಎಂದು ಅರುಣ್ ಅವರು ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಕಟೀಲು ಮೇಳದಲ್ಲಿ ತಿರುಗಾಟ ಮಾಡಬೇಕು. ಒಳ್ಳೆಯ ಸ್ತ್ರೀ ವೇಷಧಾರಿ ಆಗಬೇಕು ಎಂದು ಅರುಣ್ ಅವರು ಹೇಳುತ್ತಾರೆ.


ತಾವು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ತಮ್ಮ ಹುಟ್ಟೂರಿನಲ್ಲಿ ಸನ್ಮಾನ ಹಾಗೂ ಮರಕಡ  ಶುಭವರ್ಣ ಯಕ್ಷಗಾನ ಸಂಘವು ಇವರ ಪ್ರತಿಭೆಯನ್ನು ನೋಡಿ ಗೌರವಿಸಿದ್ದಾರೆ.


ತನ್ನ ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ತಂದೆ ತಾಯಂದಿರು, ಮೇಳದ ಸರ್ವ ಕಲಾವಿದರು, ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಮೇಳದ ಯಜಮಾನರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Click: Dhanu K.P, Vaishak Kotian, Vinu Yedapadavu.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم