*****
ಬ್ರಾಹ್ಮಣ ಸ್ವಭಾವವನ್ನು
ಜಾತಿಯೆಂದು ತಪ್ಪು ತಿಳಿದು
ಬ್ರಹ್ಮನಿಂದೆ ಮಾಡುವವರ
ತಿಳಿವು ಏನದು..??
ಚತುರ್ವರ್ಣ ಜಾತಿ ಅಲ್ಲ
ಹುಟ್ಟಿಗೆಂದು ಜಾತಿ ಇಲ್ಲ
ಇದನರಿಯದೆ ಧರ್ಮನಿಂದೆ
ಎಂದು ಸಲ್ಲದು...
ಬ್ರಹ್ಮ ಕ್ಷಾತ್ರ ವೈಶ್ಯ ಶೂದ್ರ
ಎಂಬ ಇಂಥ ನಾಲ್ಕು ಗುಣವು
ಎಲ್ಲ ಜೀವಿಗಳೊಳಗೆ ಸದಾ
ಇದ್ದೆ ಇರುವವು.....
ಯಾರು ಹೆಚ್ಚು ತಿಳಿವು ಗಳಿಸಿ
ತನ್ನ ತಿಳಿವಿನಿಂದ ಜನರ
ಹಿತವ ಬಯಸಿ ವರ್ತಿಸುವನೊ
ಅವನೇ ಬ್ರಾಹ್ಮಣ.....
ಕಾಯ ಬಲವು ಯಾರಿಗಿಹುದೊ
ದೇಶ ಕಾಯಬಹುದು ಅವನು
ಕ್ಷತ್ರಿಯನೆಂದೆನಿಸಿಕೊಂಡು
ಶೂರನಾದನು......
ಗೋವುಗಳನು ಸಾಕಿಕೊಂಡು
ಕೃಷಿಯ ಜತೆಗೆ ವ್ಯಾಪಾರವ
ಮಾಡುವಂಥ ಚಾಣಾಕ್ಷನು
ವೈಶ್ಯನಾದನು........
ಎಲ್ಲರೊಡನೆ ಬೆರೆತುಕೊಂಡು
ನಿಸ್ವಾರ್ಥಿಯಾಗಿ ಜನರ
ಸೇವೆಯನ್ನು ಮಾಡುವವನು
ಶೂದ್ರನಾದನು......
ಇಲ್ಲಿ ಮೇಲು ಕೀಳು ಇಲ್ಲ
ಅಸ್ಪ್ರಶ್ಯತೆ ಎಂದಿಗಿಲ್ಲ
ಇದನರಿತು ಬಾಳಿದಾಗ
ಎಂಥ ಸೊಗಸಿದೆ......
********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ