ಸುಲಭ ಕೃಷಿ ಯಂತ್ರೋಪಕರಣಗಳು: ಪಯಸ್ವಿನಿ ಕ್ಲಬ್‌ನಲ್ಲಿ ಇಂದು ಸಂಜೆ ವಿಚಾರ ವಿನಿಮಯ

Upayuktha
0

ಮಂಗಳೂರು: ಜನಪ್ರಿಯ ಶ್ರವ್ಯ ಜಾಲತಾಣ ಕ್ಲಬ್‌ಹೌಸ್‌ನ ಪಯಸ್ವಿನಿ ಕ್ಲಬ್‌ ಇಂದು ಸಂಜೆ 5 ಗಂಟೆಗೆ 'ಸುಲಭ ಕೃಷಿ ಯಂತ್ರೋಪಕರಣಗಳು' ವಿಷಯದ ಕುರಿತು ವಿಚಾರ ವಿನಿಮಯ ಆಯೋಜಿಸಿದೆ.


ಇಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಟಿಲೆ ಮಹಾಬಲೇಶ್ವರ ಭಟ್, ನವಿಲೆ ಗಣಪತಿ ಭಟ್, ಅನಂತ ಪ್ರಸಾದ್, ರಾಕೇಶ್ ಹೆಗ್ಡೆ, ವೆಂಕಟೇಶ್ವರ ಶರ್ಮ, ಮಧುಸೂದನ ಭಟ್, ಬಾಲಸುಬ್ರಹ್ಮಣ್ಯ, ಕೇಶವ ಪ್ರಸಾದ್ ನೀರ್ಚಾಲು ಹಾಗೂ ಇನ್ನೂ ಹಲವು ಮುಖ್ಯ ತಂತ್ರಜ್ಞಾನ ಧುರೀಣರು, ಜೊತೆಗೆ ಪ್ರಗತಿಪರ ಕೃಷಿಕರು ಭಾಗವಹಿಸಲಿದ್ದಾರೆ.

ಆಸಕ್ತರು ಕಾರ್ಯಕ್ರಮದಲ್ಲಿ ಈ ಲಿಂಕ್‌ ಮೂಲಕ ಭಾಗವಹಿಸಬಹುದು. https://www.clubhouse.com/event/Pr1LorGl 

ಪ್ರತೀ ಭಾನುವಾರ ಅಡಿಕೆ ಕೃಷಿಕರ ಧ್ವನಿ ಚೇತನ ಕಾರ್ಯಕ್ರಮಗಳು ಪಯಸ್ವಿನಿ ಗುಂಪಿನಲ್ಲಿ ನಡೆಯುತ್ತಿವೆ. ಆಸಕ್ತರು ಭಾಗವಹಿಸಬಹುದು. ಪ್ರಗತಿಪರ ಕೃಷಿಕ ಮುರಳಿಕೃಷ್ಣ ಎಡನಾಡು ಅವರು ಪಯಸ್ವಿನಿ ಕ್ಲಬ್‌ ಅನ್ನು ಮುನ್ನಡೆಸುತ್ತಿದ್ದಾರೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ






Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top