||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಾಂಧೀ ಸ್ಮೃತಿ ಮತ್ತು ದರ್ಶನ ಸಮಿತಿಯಲ್ಲಿ ಕರ್ನಾಟಕದ ಸುರೇಶ್ ವಿ ಕಲಘಟಗಿ

ಗಾಂಧೀ ಸ್ಮೃತಿ ಮತ್ತು ದರ್ಶನ ಸಮಿತಿಯಲ್ಲಿ ಕರ್ನಾಟಕದ ಸುರೇಶ್ ವಿ ಕಲಘಟಗಿಕಲಘಟಗಿ: ಕರ್ನಾಟಕ ಸರ್ವೋದಯ ಸಂಘದ ನಿಕಟಪೂರ್ವ ಅಧ್ಯಕ್ಷರೂ, ಗಾಂಧೀ ಚಿಂತಕರೂ ಆದ ಸುರೇಶ್ ವಿ ಕಲಘಟಗಿ ಅವರನ್ನು ದೆಹಲಿಯ ರಾಷ್ಟ್ರೀಯ ಗಾಂಧೀ ಸ್ಮೃತಿ ಮತ್ತು ದರ್ಶನ ಸಮಿತಿಗೆ ಪ್ರಧಾನ ಮಂತ್ರಿಗಳು ನಾಮ ನಿರ್ದೇಶನ ಮಾಡಿದ್ದಾರೆ.


ಕೇಂದ್ರ ಸರಕಾರದ ಸಂಸ್ಕೃತಿ ಮಂತ್ರಾಲಯದ ಅಧೀನದಲ್ಲಿರುವ ಈ ಸಮಿತಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಾಂಧೀ ವಿಚಾರ ಪ್ರಚಾರದ ಹೊಣೆ ಹೊತ್ತಿದೆ. ರಾಜಘಾಟ್ ಮತ್ತು ಬಿರ್ಲಾ ಭವನದ ಉಸ್ತುವಾರಿ ಸಹ ಹೊಂದಿದೆ.


ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿರುವ ಈ ಉನ್ನತ ಸಮಿತಿಗೆ ಮಾಜೀ ಸಚಿವ ವಿಜಯ್ ಗೋಯಲ್ ಉಪಾಧ್ಯಕ್ಷರಾಗಿ ನಿಯುಕ್ತಿ ಗೊಂಡಿದ್ದಾರೆ.


22 ಸದಸ್ಯರ ಈ ಸಮಿತಿಯ ಕಾಲಾವಧಿ ಈ ಸೆಪ್ಟೆಂಬರ್ ನಿಂದ ಮೂರು ವರ್ಷಗಳಿದ್ದು, ಆಯ್ಕೆಯಾದ ಒಂಭತ್ತು ಅಧಿಕಾರೇತರ ಸದಸ್ಯರಲ್ಲಿ ಕರ್ನಾಟಕಕ್ಕೆ ಪ್ರಾತಿನಿಧ್ಯ ಲಭ್ಯವಾಗಿರುವುದು ಸಂತಸ ತಂದಿದೆ ಎಂದು ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷ ಎಲ್. ನರಸಿಂಹಯ್ಯನವರು ತಿಳಿಸಿದ್ದಾರೆ


ಶ್ರೀ ಕಲಘಟಗಿ ಅವರ ಪತ್ನಿ ಶ್ರೀಮತಿ ನಳಿನಿ ಅವರು ಬೆಂಗಳೂರಿನಲ್ಲಿ ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದಿರುವ ಮೂವತ್ತಕ್ಕೂ ಮಿಕ್ಕಿದ ಮಹಿಳೆಯರನ್ನು ತೊಡಗಿಸಿಕೊಂಡು ಸ್ವಾವಲಂಬಿ ಗೃಹೋದ್ಯಮ ಘಟಕ ಒಂದನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post