ಗುತ್ತಿಗಾರು: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಮುಳ್ಳೇರಿಯಾ ಮಂಡಲಾತರ್ಗತ ಗುತ್ತಿಗಾರು ಹವ್ಯಕ ವಲಯದ ಶ್ರೀ ಭಾರತೀ ಹವ್ಯಕ ಘಟಕದ ಸೆಪ್ಟೆಂಬರ್ ತಿಂಗಳ ಸಭೆ ಮತ್ತು ಶ್ರೀ ಗುರು ಪರಂಪರಾ ಪೂಜೆ ಹಾಗೂ ವನಜೀವನ ಯಜ್ಞ ಕಾರ್ಯಕ್ರಮ ತಾರೀಕು 12/09/21 ಆದಿತ್ಯವಾರ ಜೀರ್ಮುಖ್ಕಿ ಸುಬ್ರಹ್ಮಣ್ಯ ಭಟ್ಟರ ಮನೆಯಲ್ಲಿ ಜರುಗಿತು. ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿತು.
ಮನೆಯ ಯಜಮಾನ ದಂಪತಿಗಳು ಗುರು ಪರಂಪರಾ ಪೂಜೆ ಮತ್ತು ವನಜೀವನ ಯಜ್ಞದ ಅಂಗವಾಗಿ ಔಷದಿ ಸಸ್ಯಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಗ್ರಾಮಿಣಿ ಬಿ. ಸುಬ್ರಾಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗುತ್ತಿಗಾರು ವಲಯಾಧ್ಯಕ್ಷೆ ಶ್ರೀಮತಿ ದೇವಕೀ ಪನ್ನೆ ಉಪಸ್ಥಿತರಿದ್ದರು.
ಘಟಕ ಸಭೆಯಲ್ಲಿ ಘಟಕದ ಹೆಚ್ಚಿನ ಮನೆಯವರು ಭಾಗವಹಿಸಿದ್ದರು. ವಲಯಾದ್ಯಕ್ಷೆ ದೇವಕೀ ಪನ್ನೆ ಮಾತನಾಡಿ, ಘಟಕದ ಕಾರ್ಯವೈಖರಿಗಳನ್ನು ಶ್ಲಾಘಿಸಿ ಇನ್ನೂ ಹೆಚ್ಚಿನ ಗುರುಸೇವೆಯಲ್ಲಿ ತೊಡಗಿಸಿಕೊಂಡು ಗುರುಕೃಪೆಗೆ ಪಾತ್ರರಾಗುವಂತೆ ತಿಳಿಸಿದರು. ಅಶೋಕೆಯಲ್ಲಿ ನಡೆಯುತ್ತಿರುವ ವಿಶ್ವ ವಿದ್ಯಾಪೀಠಕ್ಕೆ ತನು ಮನ ಧನದ ಸಹಕಾರ ನೀಡುವಂತೆ ವಿನಂತಿಸಿದರು.
ಶ್ರೀ ಭಾರತೀ ರೈತ ಶಕ್ತಿ ಗುಂಪಿನ ವಿವರಗಳನ್ನು ಕಾರ್ಯದರ್ಶಿ ವಸಂತ ಕುಮಾರ್ ಸಭೆಗೆ ತಿಳಿಸಿದರು. ವಲಯಾದ್ಯಕ್ಷೆ ದೇವಕೀ ಪನ್ನೆಯವರಿಗೆ ಗ್ರಾಮಿಣಿ ಬಿ.ಸುಬ್ರಾಯರು ವನಸ್ಪತಿ ಗಿಡವನ್ನು ನೀಡಿದರು. ನಂತರ ವನಸ್ಪತಿ ಗಿಡಗಳನ್ನು ಎಲ್ಲಾ ಸದಸ್ಯರಿಗೆ ವಿತರಿಸಲಾಯಿತು. ರಾಮ ತಾರಕ ಜಪ, ಶಾಂತಿ ಮಂತ್ರ ಪ್ರಸಾದ ವಿತರಣೆ ಲಘು ಉಪಹಾರದೊಂದಿಗೆ ಸಭೆ ಮುಕ್ತಾಯಗೊಂಡಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ