ಮಂಗಳೂರು: ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ವಿಭಾಗವು ಸೆ.28ರ ಮಂಗಳವಾರ ಬೆಳಗ್ಗೆ 11:00 ಗಂಟೆಗೆ 'ಗೋದಾವರಿ ತೀರದಲ್ಲಿ ಕನ್ನಡ' ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವೆಬಿನಾರ್ ಆಯೋಜಿಸಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಮಹಾರಾಷ್ಟ್ರದ ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಡಾ. ಜಿ.ಎನ್ ಉಪಾಧ್ಯ ಅವರು ಭಾಗವಹಿಸಲಿದ್ದಾರೆ.
ಕುಪ್ಪಂ ದ್ರಾವಿಡ ವಿವಿಯ ಕನ್ನಡ ವಿಭಾಗದ ಆಯ್ಕೆ ಶ್ರೇಣಿಯ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್ ದುರ್ಗಾಪ್ರವೀಣ ಅವರು ಈ ವೆಬಿನಾರ್‌ನ ನಿರ್ದೇಶಕರಾಗಿದ್ದಾರೆ. ಯಾವುದೇ ರೀತಿಯ ನೋಂದಣಿ ಶುಲ್ಕವಿರುವುದಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿ ಫೀಡ್ ಬ್ಯಾಕ್ ಫಾರ್ಮ್ ಸಲ್ಲಿಸಿದವರಿಗೆ ಇ- ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು https://us06web.zoom.us/j/88645417674?pwd=TitIVEZHNWdWNzNqdUtHUlBDc0ZCZz09 ಈ ಕೊಂಡಿಯ ಮೂಲಕ ಭಾಗವಹಿಸಬಹುದು.
ಜೂಮ್ ಐ.ಡಿ: 88645417674
ಪಾಸ್ವರ್ಡ್: 25
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ