||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಸ್ಥೆಯ ಏಳಿಗೆಯಲ್ಲಿ ಪ್ರತಿ ಸಿಬ್ಬಂದಿಯ ಪಾತ್ರ ಅತಿಮುಖ್ಯ: ಎಂಆರ್‌ಪಿಎಲ್‌ ಎಂಡಿ ಎಂ ವೆಂಕಟೇಶ್

ಸಂಸ್ಥೆಯ ಏಳಿಗೆಯಲ್ಲಿ ಪ್ರತಿ ಸಿಬ್ಬಂದಿಯ ಪಾತ್ರ ಅತಿಮುಖ್ಯ: ಎಂಆರ್‌ಪಿಎಲ್‌ ಎಂಡಿ ಎಂ ವೆಂಕಟೇಶ್ನಿಟ್ಟೆ: “ಪ್ರತಿಯೊಂದು ಸಂಸ್ಥೆಯ ಏಳಿಗೆಯಲ್ಲಿ ಅಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯ ಪಾತ್ರವೂ ಅತಿಮುಖ್ಯ” ಎಂದು ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.


ಅವರು ಸೆ.13 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. "ನಾನು, ನನ್ನದು ಎಂಬ ತನವನ್ನು ಬಿಟ್ಟು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಶ್ರಮವಹಿಸಿ ಕೆಲಸ ಮಾಡಬೇಕು. ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಕಾಣುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸಮಾಡಬೇಕು" ಎಂದು ಅವರು ಹೇಳಿದರು.


2020-2021ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕ ಡಾ| ವೆಂಕಟೇಶ್ ಕಾಮತ್, ಸಹಪ್ರಾಧ್ಯಾಪಕಿ ಡಾ| ಉಳ್ಳಾಲ್ ಹರ್ಷಿಣಿ ದೇವಿ, ಸಿವಿಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಶ್ರೀರಾಮ್ ಮರಾಠೆ, ಕಂಪ್ಯೂಟರ್‍ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ರಾಧಾಕೃಷ್ಣ, ಸಹಪ್ರಾಧ್ಯಾಪಕಿ ಡಾ| ಶಬರಿ ಶೇಡ್ತಿ, ಇಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕಿ ಡಾ| ಸಿಫಾ ಕ್ರೆಸಿಲ್ ಡಯಾಸ್, ಅಸೋಸಿಯೇಟ್ ಪ್ರೊಫೆಸರ್ ಡಾ| ನಯನಾ ಶೆಟ್ಟಿ, ಸಹಪ್ರಾಧ್ಯಾಪಕಿ ಡಾ| ಕೆ ಲತಾ ಶಣೈ, ಇನ್ಫೋರ್ಮೇಶನ್‍ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ| ಬೋಳ ಸುನಿಲ್ ಕಾಮತ್, ಡಾ| ಜೇಸನ್ ಎಲ್ರಾಯ್ ಮಾರ್ಟಿಸ್, ಮೆಕ್ಯಾನಿಕಲ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಅನಂತಕೃಷ್ಣ ಸೋಮಯಾಜಿ, ಸಹಪ್ರಾಧ್ಯಾಪಕ ಡಾ| ವಿದ್ಯಾಸಾಗರ್ ಶೆಟ್ಟಿ, ಡಾ| ಶರತ್‍ಚಂದ್ರ, ಡಾ| ವೀರೇಶ್ ಆರ್.ಕೆ, ಅಸೋಸಿಯೇಟ್ ಪ್ರೊಫೆಸರ್ ಡಾ| ವೇಣುಗೋಪಾಲ್ ಟಿ.ಆರ್, ಎಂ.ಸಿ.ಎ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಮಮತಾ ಬಲಿಪ, ಸಹಪ್ರಾಧ್ಯಾಪಕಿ ಡಾ| ಮಂಗಳ ಶೆಟ್ಟಿ, ಹ್ಯುಮ್ಯಾನಿಟೀಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ವಿಶ್ವನಾಥ ಸನ್ಮಾನ ಸ್ವೀಕರಿಸಿದರು.


ಇಂಜಿನಿಯರ್ಸ್ ಡೇ ಆಚರಣೆಯ ಅಂಗವಾಗಿ ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಂ. ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ| ಐ ರಮೇಶ್ ಮಿತ್ತಂತಾಯ ಅತಿಥಿಯನ್ನು ಪರಿಚಯಿಸಿದರು. ಡಾ| ಸುಬ್ರಹ್ಮಣ್ಯ ಭಟ್, ಡೀನ್ ಸ್ಟೂಡೆಂಟ್ ವೆಲ್ಫೇರ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ನಿಟ್ಟೆ ಕ್ಯಾಂಪಸ್‍ನ ರಿಜಿಸ್ಟ್ರಾರ್ ಎ.ಯೋಗೀಶ್ ಹೆಗ್ಡೆ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಗ್ರೈನಲ್ ಕಾರ್ಯಕ್ರಮ ನಿರೂಪಿಸಿದರು.(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post