|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೀರೋ ಲುಕ್‌ನಲ್ಲಿ ಕ್ರಷ್ ಮಾಡ್ತಾರೆ ತುಳುನಾಡಿನ ಅಭಿಲಾಷ್ ಬಜ್ಪೆ

ಹೀರೋ ಲುಕ್‌ನಲ್ಲಿ ಕ್ರಷ್ ಮಾಡ್ತಾರೆ ತುಳುನಾಡಿನ ಅಭಿಲಾಷ್ ಬಜ್ಪೆ



ಹೌದು ಬಾಲ್ಯದಿಂದಲೇ ಹೀರೊ ಆಗ್ಬೇಕು, ಕಲಾ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಆಸೆ ಪಡುತ್ತಿದ್ದ ಅಭಿಲಾಷ್ ಬಜ್ಪೆ ಈಗ ಕರಾವಳಿ ಕರ್ನಾಟಕದಲ್ಲಿ ಫೇಮಸ್ ಆಗಿದ್ದಾರೆ. ಮಂಗಳೂರಿನ ಕೂಳೂರಿನಲ್ಲಿ ಜನಿಸಿದ ಇವರು ತಂದೆಯಿಂದಲೇ ನಟನೆಯ ಆಸಕ್ತಿಯನ್ನು ಪಡೆದರು. ಇವರ ತಂದೆ ನಾಟಕ ತಂಡಗಳಲ್ಲಿ ಕೆಲಸ ಮಾಡುತ್ತಿದ್ದು, ಊರಲ್ಲಿ ನಾಟಕಗಳು ನಡೆಯುತ್ತಿರುವಾಗ ವಿಲನ್ ಎಂಟ್ರಿ ಮತ್ತು ಹಿರೋ ಎಂಟ್ರಿಯನ್ನು ನೋಡಿ ನಾನು ಕೂಡ ಹೀಗೆ ಆಗಬೇಕು ಎಂದು ಕನಸು ಕಾಣುತಿದ್ದ ಅಭಿಲಾಷ್ ಈಗ ವಿಲನ್ ಲುಕ್ ನಲ್ಲೂ ಹಾಗೂ ಹಿರೋ ಲುಕ್ ನಲ್ಲೂ ಸಕ್ಕತ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


ನಾಲ್ಕನೇ ತರಗತಿಯಲ್ಲಿ ಮೊದಲ ಬಾರಿಗೆ ಚದ್ಮ ವೇಷದ ಮುಖೇನ ವೇದಿಕೆಗೆ ಪಾದಾರ್ಪಣೆ ಮಾಡಿದರು. ಅಜ್ಜಿಯ ವೇಷದಲ್ಲಿ ವೇದಿಕೆಗೆ ಎಂ‌ಟ್ರಿ ಅದರಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ನಂತರ ತಂದೆ -ತಾಯಿಯ ಪ್ರೋತ್ಸಾಹದೊಂದಿಗೆ ನಾಟಕಗಳಲ್ಲಿ, ಸ್ಕಿಟ್ ಗಳಲ್ಲಿ ನಟನೆ ಮಾಡುತ್ತಿದ್ದರು. ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಭಿಲಾಶ್ ಬಜ್ಪೆ ನಟನೆಗೆ ಶಿಕ್ಷಕರಿಂದಲೇ ಶಭಾಸ್ ಗಿರಿ ಸಿಗಿತ್ತಿತ್ತು. ನಂತರ ಪದವಿ ವಿದ್ಯಾಭ್ಯಾಸ ಮಂಗಳೂರಿನ ಕಾರ್ ಸ್ಟ್ರೀಟ್ ಕಾಲೇಜಿನಲ್ಲಿ ನಡೆಸಿದ್ದು, ಅಲ್ಲಿ ಅಭಿಲಾಷ್ ಅವರಿಗೆ ಓರ್ವ ಮಿತ್ರ ಸಿಗುತ್ತಾನೆ ಅವರ ಹೆಸರು ಪ್ರದೀಪ ಬೋಳಾರ್. ಇವರ ಜೊತೆ ಸೇರಿಕೊಂಡ ಅಭಿಲಾಷ್ ಕಾಲೇಜಿನ ಪ್ರತೀ ಕಾರ್ಯಕ್ರಮದಲ್ಲೂ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.


ಪ್ರದೀಪ್ ಬೋಳಾರ್ ಮತ್ತು ಅಭಿಲಾಷ್ ಬಜ್ಪೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕದ ಸಣ್ಣ ತುಣುಕುಗಳನ್ನು ಹೆಕ್ಕಿ ಅವರಂತೆ ನಟನೆ ಮಾಡುತ್ತಿದ್ದು, ಕಾಲೇಜಿನಲ್ಲೇ ಫೇಮಸ್ ಆಗಿ ಗುರುತಿಸಿಕೊಂಡರು. ನಂತರ ಕಾಲೇಜಿನ NSS (ರಾಷ್ಟ್ರೀಯ ಸೇವಾ ಯೋಜನೆ) ಯಿಂದ ಇನ್ನಷ್ಟು ನಟನೆಯ ಕಡೆಗೆ ಮುಖ ಮಾಡಿದ ಇವರು ಕನ್ಯಾಕುಮಾರಿಯಲ್ಲೂ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ನಂತರ ಆಲ್ಬಮ್ ಸಾಂಗ್ ಕಡೆ ಮುಖ ಮಾಡಿದ ಅಭಿಲಾಶ್ ಜನನೆರ್ ಎಂಬ ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.


ಅಭಿಲಾಶ್ ಬಜ್ಪೆ ಅವರ ಶ್ರಮಕ್ಕೆ ದೇವರು 2015 ರಲ್ಲಿ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವಂತೆ ಮಾಡುತ್ತಾರೆ. ಐಸ್ ಕ್ರೀಮ್, ಪಮ್ಮಣ್ಣ ದಿ.ಗ್ರೇಟ್, ಜಬರ್ ದಸ್ತ್ ಶಂಕರ ತುಳು ಚಿತ್ರಗಳಲ್ಲಿ ಅಭಿಲಾಶ್ ಬಜ್ಪೆ ನಟನೆ ಮಾಡಿದ್ದು ನೋಡುಗ ಪ್ರೇಕ್ಷಕರ ಮನ ಗೆದ್ದಿದ್ದಾರೆ‌. ಸೂರಜ್ ಬೋಳಾರ್ ಅವರ ವೆಬ್ ಸಿರೀಸ್ ನಲ್ಲೂ ನಟನೆ ಮಾಡಿದ ಇವರು ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಗಡ್ ಬಡ್ ಎನ್ನುವ ವೆಬ್ ಸಿರೀಸ್ ನಲ್ಲಿ ಅಭಿಲಾಷ್ ಬಜ್ಪೆ ಸಕ್ಕತ್ ಲುಕ್ ನಲ್ಲೇ ಕಾಣಿಸಿಕೊಂಡಿದ್ದು, ಹುಡುಗಿಯರಂತೂ ಫುಲ್ ಫಿದಾ ಆಗಿದ್ದಾರೆ.


ನಂತರ ಪದವಿ ಮುಗಿಸಿ ಉದ್ಯೋಗ ಮಾಡುತ್ತಿದ್ದಾಗ ತುಳು ಚಿತ್ರರಂಗದ ಅದ್ಭುತ ಹಾಸ್ಯ ನಟ ಶರಣ್ ಕೈಕಂಬ ಇವರ ಮೂಲಕ  ನಮ್ಮ ಕಲಾವಿದೆರ್ ಬೆದ್ರ ತಂಡದ ನಾಟಕದಲ್ಲಿ ಅಭಿಲಾಶ್ ಹಿರೋ ಆಗಿ ಕಾಣಿಸಿಕೊಳ್ಳುತ್ತಾರೆ. ಉಮೇಶ್ ಮಿಜಾರ್ ತಂಡದಲ್ಲಿ ಸುಮಾರು ಒಂದು ವರ್ಷಗಳ ಕಾಲ ಕಲಾ ಮಾತೆ ಶಾರದೆಯ ಕೆಲಸ ಮಾಡಿದ್ದಾರೆ.


ಇತ್ತೀಚಿಗೆ ರಿಲೀಸ್ ಆಗಿರುವಂತ ಹರ್ಷಿತ್ ಸೋಮೇಶ್ವರ ನಿರ್ದೇಶನದ ಶ್ರೀಮತಿ, ಕಣತ ದಿಬ್ಬಣ ಮತ್ತು ಲವ್ ಇನ್ ಲೈಫ್, ಅಪ್ಸರೆ, ಹಿಟ್ ಆಲ್ಬಮ್ ಸಾಂಗ್ ಗಳಲ್ಲಿ ಮಿಂಚಿದ ಅಭಿಲಾಶ್ ಈಗ ಫುಲ್ ಬ್ಯೂಸಿ ಆಗಿದ್ದಾರೆ. ಇದೀಗ ಮಂಗಳೂರಿನ MRPL ಕಂಪನಿಯಲ್ಲಿ ಮೆಕಾನಿಕಲ್ ಮೈಂಟೆನೆನ್ಸ್‌ನಲ್ಲಿ ಸುಪರ್‌ವೈಸರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ.


ಇನ್ನು ಎಲ್ಲರೂ ಕಾಯುತ್ತಿರುವ ಹರ್ಷಿತ್ ಸೋಮೇಶ್ವರ ನಿರ್ದೇಶನದ ಖ್ಯಾತ ಗಾಯಕ ಅರ್ಫಾಝ್ ಉಳ್ಳಾಲ ಅವರ ಗಾಯನದಲ್ಲಿ ಮೂಡಿ ಬರುತ್ತಿರುವ ಮಲೆನಾಡು ಎಂಬ ಆಲ್ಬಮ್ ಸಾಂಗ್ ನಲ್ಲಿ ಹಿರೋ ಆಗಿ ನಟನೆ ಮಾಡಿರುವ ಅಭಿಲಾಷ್ ಗೆ ತುಳುನಾಡ ಕ್ರಷ್ ಸಮತಾ ಅಮಿನ್ ಹಿರೋಯಿನ್ ಆಗಿ ಜೊತೆಯಾಗಿದ್ದಾರೆ‌. ಈ ಆಲ್ಬಮ್ ಸಾಂಗ್ ಸೆ.12 ಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಮಾತ್ರ ಕಾಯುವಿಕೆಯಲ್ಲಿದ್ದಾರೆ. ಇನ್ನು ಬಿ.ಚಂದ್ರಹಾಸ್ ದೇವಾಡಿಗ, ರತ್ನ ದೇವಾಡಿಗ ಅವರ ಪುತ್ರ ಅಭಿಲಾಶ್ ಬಜ್ಪೆ ಇದೀಗ ಕರಾವಳಿ ಕರ್ನಾಟಕದಲ್ಲೇ ಅದ್ಭುತ ನಟನಾಗಿ ಗುರುತಿಸಿಕೊಂಡಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post