ಧರ್ಮಸ್ಥಳದಲ್ಲಿ ಪುರಾಣ ವಾಚನ- ಪ್ರವಚನ ಸಪ್ತಾಹ- ಸೆ.11ರಿಂದ 17ರ ವರೆಗೆ

Upayuktha
1 minute read
0




ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಪುರಾಣ ವಾಚನ-ಪ್ರವಚನ ಸಪ್ತಾಹವು ಸೆ.11 ರಿಂದ 17ರ ವರೆಗೆ ಪ್ರತಿ ದಿನ ಸಂಜೆ 7 ರಿಂದ 8.30ರ ವರೆಗೆ ನಡೆಯಲಿದೆ.



ನೂತನ ಟ್ರಸ್ಟ್ ಉದ್ಘಾಟನೆ

ಉಜಿರೆ: ಧರ್ಮಸ್ಥಳ ಗ್ರಾಮದ ದೊಂಡೋಲೆ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ರಚಿಸಿದ “ಕಮಲಾ ಸೂರ್ಯನಾರಾಯಣ ರಾವ್ ಚಾರಿಟೇಬಲ್ ಟ್ರಸ್ಟ್” ಎಂಬ ನೂತನ ಸಂಸ್ಥೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಇದೇ 10 ರಂದು ಶುಕ್ರವಾರ ಸಂಜೆ. 6 ಗಂಟೆಗೆ ಉದ್ಘಾಟಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.


ಹಿರಿಯ ಯಕ್ಷಗಾನ ಕಲಾವಿದರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮತ್ತು ಹಿಮ್ಮೇಳ ಕಲಾವಿದ ಧರ್ಮಸ್ಥಳದ ಬಿ. ಸೀತಾರಾಮ ತೋಳ್ಪಾಡಿತ್ತಾಯ ಅವರನ್ನು ಸನ್ಮಾನಿಸಲಾಗುವುದು.


ಕಳೆದ ಏಳು ದಶಕಗಳಿಂದ ದೊಂಡೋಲೆ ಮನೆಯಲ್ಲಿ ಚೌತಿ ಸಂದರ್ಭ ಪ್ರತಿ ವರ್ಷ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಿ ಕಲಾವಿದರನ್ನು ಗೌರವಿಸಲಾಗುತ್ತದೆ ಎಂದು ಸಂಘಟಕರಾದ ಕೆ. ಶಂಕರರಾಮ ರಾವ್ ತಿಳಿಸಿದ್ದಾರೆ.

-ಆರ್. ಯನ್. ಪೂವಣಿ, ಉಜಿರೆ




إرسال تعليق

0 تعليقات
إرسال تعليق (0)
To Top