||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳ: ಪುರಾಣ ವಾಚನ- ಪ್ರವಚನ ಸಮಾರೋಪ

ಧರ್ಮಸ್ಥಳ: ಪುರಾಣ ವಾಚನ- ಪ್ರವಚನ ಸಮಾರೋಪ

ಪುರಾಣ ವಾಚನ, ಪ್ರವಚನದಿಂದ ಸಾಂಸಾರಿಕ ಹಾಗೂ ವ್ಯಾವಹಾರಿಕ ಸಮಸ್ಯೆಗಳಿಗೆ ಪರಿಹಾರ


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಶ್ರೀ ರಾಮಕಥಾ ನಮನ” ಕೃತಿಯನ್ನು ಬಿಡುಗಡೆಗೊಳಿಸಿದರು. ನಿವೃತ್ತ ತಹಸೀಲ್ದಾರ್ ಕೆ. ಸುರೇಶ ಕುದ್ರೆಂತ್ತಾಯ, ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಮತ್ತು ವಾಚನಕಾರ ಹಾಸನದ ಗಣೇಶ ಉಡುಪ ಉಪಸ್ಥಿತರಿದ್ದರು.


ಉಜಿರೆ: ಪುರಾಣ ವಾಚನ, ಪ್ರವಚನದಿಂದ ಸುವಿಚಾರಗಳು ಹಾಗೂ ಬದುಕಿಗೆ ಉಪಯುಕ್ತವಾದ ಸಾರ್ಥಕ ಸಂದೇಶವನ್ನು ಕೇಳಿ ಮನಸ್ಸು ಪವಿತ್ರವಾಗುತ್ತದೆ. ಸಾಂಸಾರಿಕ ಹಾಗೂ ವ್ಯಾವಹಾರಿಕ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಪವ್ರಚನ ಮಂಟಪದಲ್ಲಿ ಒಂದು ವಾರ ಕಾಲ ನಡೆದ ಪುರಾಣ ವಾಚನ- ಪ್ರವಚನದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಭಾಗವತದಲ್ಲಿ ಕೃಷ್ಣನ ಬಾಲಲೀಲೆ ಹಾಗೂ ತುಂಟಾಟವನ್ನು ಕಂಡು ಆನಂದಿಸಿ ಅನುಭವಿಸಬೇಕು. ಇದೇ ರೀತಿ ಬಾಲ್ಯದಲ್ಲಿ ಮಕ್ಕಳ ತುಂಟಾಟ ಸಹಜವಾಗಿಯೂ, ಸ್ವಾಭಾವಿಕವಾಗಿಯೂ ಇರುತ್ತದೆ. ರಾಮಾಯಣ ಮತ್ತು ಮಹಾಭಾರತದಂತಹ ಪುರಾಣಗಳಲ್ಲಿ ಸಾರ್ಥಕ ಬದುಕಿನ ಸೂತ್ರ, ಸಂಕಟಗಳಿಗೆ, ಸವಾಲುಗಳಿಗೆ ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರವಿದೆ ಎಂದು ಅವರು ಹೇಳಿದರು.


ಯಕ್ಷಗಾನ ಕೃತಿ ಬಿಡುಗಡೆ: ನಿವೃತ್ತ ತಹಸೀಲ್ದಾರ್ ಹಾಗೂ ಮೂಲತ: ಧರ್ಮಸ್ಥಳದ ನಿವಾಸಿಯಾದ ಹವ್ಯಾಸಿ ಯಕ್ಷಗಾನ ಕಲಾವಿದ ಕೆ. ಸುರೇಶ ಕುದ್ರೆಂತ್ತಾಯ ರಚಿಸಿದ “ಶ್ರೀ ರಾಮಕಥಾ ನಮನ” ಕೃತಿಯನ್ನು ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಧರ್ಮಸ್ಥಳದಲ್ಲಿ ಬಾಲ್ಯದಿಂದಲೇ ಯಕ್ಷಗಾನದ ಕಲಾವಿದರು, ಪ್ರೇಕ್ಷಕರು ಹಾಗೂ ಅಭಿಮಾನಿಗಳು ಅನೇಕ ಮಂದಿ ಇದ್ದಾರೆ. ಯಕ್ಷಾಗನವನ್ನು ಕೇಳಿ, ನೋಡಿ, ಆನಂದಿಸಿ ಅವರು ಲೋಕ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ. ಯಾವುದೇ ಆವರಣ ಗೋಡೆಗಳಿಲ್ಲದ ಲೋಕ ಜ್ಞಾನದಿಂದ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿ ಕೊಂಡಿದ್ದಾರೆ.

ಸುರೇಶ ಕುದ್ರೆಂತ್ತಾಯರ ಕೃತಿ ಯಕ್ಷಗಾನ ರಂಗಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದು ಶ್ಲಾಘಿಸಿ ಅವರನ್ನು ಹೆಗ್ಗಡೆಯವರು ಅಭಿನಂದಿಸಿದರು. ಆಸಕ್ತ ಅಧ್ಯಯನಾಸಕ್ತರಿಗೆ ಇದು ಮಾಹಿತಿಯ ಕಣಜವಾಗಿದೆ. ಆಕರ ಗ್ರಂಥವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಪುರಾಣ ವಾಚನ- ಪ್ರವಚನಕ್ಕೆ ವಿಷಯ ಹಾಗೂ ಕೃತಿಗಳ ಆಯ್ಕೆ ಬಗ್ಗೆ ಹೇಮಾವತಿ ವಿ. ಹೆಗ್ಗಡೆಯವರ ನಿರಂತರ ಮಾರ್ಗದರ್ಶನ, ಪ್ರೇರಣೆ ಹಾಗೂ ಪ್ರೋತ್ಸಾಹವನ್ನು ಅವರು ಶ್ಲಾಘಿಸಿದರು.


ವಾಚನಕಾರರು ಹಾಗೂ ಪ್ರವಚನಕಾರರನ್ನು ಆಯ್ಕೆ ಮಾಡಿ ಆಮಂತ್ರಿಸಿ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅವರ ಸಕ್ರಿಯ ಸಹಕಾರವನ್ನು ಹೆಗ್ಗಡೆಯವರು ಸ್ಮರಿಸಿ ಅಭಿನಂದಿಸಿದರು.


“ತೊರವೆ ರಾಮಾಯಣ”ದಲ್ಲಿ ಭರತನ ಭ್ರಾತೃ ಪ್ರೇಮದ ಬಗ್ಗೆ ಹಾಸನದ ಗಣೇಶ ಉಡುಪರು ವಾಚನ ಮಾಡಿದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರವಚನ ನೀಡಿದರು.


0 Comments

Post a Comment

Post a Comment (0)

Previous Post Next Post