|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಧುಮೇಹ ಪರೀಕ್ಷೆಯಿಂದ ಮುಂದಾಗುವ ತೊಡಕುಗಳಿಂದ ರಕ್ಷಿಸಿಕೊಳ್ಳಬಹುದು: ಡಾ. ಗೋಪಾಲಕೃಷ್ಣ

ಮಧುಮೇಹ ಪರೀಕ್ಷೆಯಿಂದ ಮುಂದಾಗುವ ತೊಡಕುಗಳಿಂದ ರಕ್ಷಿಸಿಕೊಳ್ಳಬಹುದು: ಡಾ. ಗೋಪಾಲಕೃಷ್ಣ

ಬೆನಕ ಆಸ್ಪತ್ರೆಯಲ್ಲಿ ರೋಟರಿಯ ಉಚಿತ ಮಧುಮೇಹ ಪರೀಕ್ಷಾ ಅಭಿಯಾನ



ಬೆಳ್ತಂಗಡಿ: ಮಧುಮೇಹದ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳು ಇರದಿರಬಹುದು. ಅಂತಹ ಸಂದರ್ಭದಲ್ಲಿ ನಮಗರಿವಿಲ್ಲದೇ ಕಣ್ಣು, ಮೂತ್ರಪಿಂಡಗಳು, ಹೃದಯ, ರಕ್ತನಾಳಗಳಿಗೆ ಹಾನಿಯುಂಟಾಗುತ್ತಿರಬಹುದು. ಆದುದರಿಂದ ಮಧುಮೇಹ ಹಾಗೂ ರಕ್ತದೊತ್ತಡವನ್ನು ಪರೀಕ್ಷೆ ಮಾಡಿಸುತ್ತಿದ್ದರೆ ಮುಂದಾಗುವ ತೊಡಕುಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಉಜಿರೆ ಬೆನಕ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.


ಡಾ. ಗೋಪಾಲಕೃಷ್ಣ ಅವರು ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಉಜಿರೆ ಬೆನಕ ಆಸ್ಪತ್ರೆ ಜಂಟಿಯಾಗಿ ಆಯೋಜಿಸಿದ ಉಚಿತ ಮದುಮೇಹ ಪರೀಕ್ಷೆ ಮತ್ತು ರಕ್ತದೊತ್ತಡ ಪರೀಕ್ಷಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರೋಟರಿ ಸಂಸ್ಥೆ ಭಾರತ ಮಟ್ಟದಲ್ಲಿ ಸೆಪ್ಟೆಂಬರ್ 29ರಂದು ಒಂದೇ ದಿನದಲ್ಲಿ 10 ಲಕ್ಷ ಜನರ ಮದುಮೇಹ ತಪಾಸಣಾ ಅಭಿಯಾನದ ಅಂಗವಾಗಿ ಬೆಳ್ತಂಗಡಿ ರೋಟರಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.


ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದ ಬೆಳ್ತಂಗಡಿ ರೋಟರಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಮಾತನಾಡುತ್ತಾ ಮಧುಮೇಹದ ಹಾಗೂ ರಕ್ತದ ಒತ್ತಡ ಬಗ್ಗೆ ಜನಜಾಗೃತಿಗಾಗಿ ದೇಶದಾದ್ಯಂತ ಈ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ಬಿನ ಕಾರ್ಯದರ್ಶಿ ಡಾ. ಭಾರತಿ ಜಿ.ಕೆ ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ. ಭಟ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಅಬೂಬ್ಬಕ್ಕರ್ ವಂದಿಸಿದರು. ಖ್ಯಾತ ವೈದ್ಯ ಡಾ.ಅಶ್ವಿನಿ ಉದ್ಯಾವರ ಹಾಗೂ ಮಕ್ಕಳ ತಜ್ಞ ಡಾ. ಗೋವಿಂದ್ ಕಿಶೋರ್ ಅವರು ಭಾಗವಹಿಸಿದವರಿಗೆ ಉಚಿತ ಸಲಹೆ ಮಾರ್ಗದರ್ಶನ ನೀಡಿದರು. ಡಾ. ಗೋಪಾಲಕೃಷ್ಣ ಪಥ್ಯಾಹಾರದ ಬಗ್ಗೆ ಮಾರ್ಗದರ್ಶನ ನೀಡಿದರು.


ಕಾರ್ಯಕ್ರಮದಲ್ಲಿ ಸುಮಾರು 75 ಜನರಿಗೆ ಉಚಿತವಾಗಿ ಮದುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು. ಬೆನಕ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದೇವಸ್ಯ ಅವರ ಮಾರ್ಗದರ್ಶನದಲ್ಲಿ ಬೆನಕ ಆಸ್ಪತ್ರೆಯ ಸಿಬ್ಬಂದಿ ಸಾರ್ವಜನಿಕರಿಗೆ ಉಚಿತ ಮದುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆಯನ್ನು ನಡೆಸಿಕೊಟ್ಟರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم