||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರಜಾತಂತ್ರದ ಯಶಸ್ಸಿಗೆ ಭ್ರಷ್ಟಾಚಾರದ ಸವಾಲು: ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ

ಪ್ರಜಾತಂತ್ರದ ಯಶಸ್ಸಿಗೆ ಭ್ರಷ್ಟಾಚಾರದ ಸವಾಲು: ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ

 


ಬೆಂಗಳೂರು: ಸ್ವಾತಂತ್ರೋತ್ತರ ಭಾರತದಲ್ಲಿ ಬಹಳ ದೂರ ಸಾಗಿ ಬಂದಿದ್ದೇವೆ. ಸಾಕಷ್ಟು ಸಾಧನೆಗಳೂ ಆಗಿವೆ. ಆ ಬಗ್ಗೆ ಹೆಮ್ಮೆ ಪಡಲೇಬೇಕು. ಆದರೆ ಸರ್ವಸಮಾನವಾಗಿ ಸುಖ ಸಮೃದ್ಧಿಯ ಸವಲತ್ತುಗಳನ್ನು ತಲುಪಿಸಲು ರಾಜಕೀಯ, ಜಾತಿ, ಅಧಿಕಾರ ಹೀಗೆ ವಿವಿಧ ಬಗೆಯ  ಭ್ರಷ್ಟಾಚಾರಗಳು ತೊಡಕಾಗಿವೆ.


ಭ್ರಷ್ಟಾಚಾರ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಆದರೆ ಅನೈತಿಕ ಮಾರ್ಗದ ಸಂಪತ್ತುಗಳನ್ನು ವರ್ಜಿಸುವ ಸಂಕಲ್ಪ, ಸಂಸ್ಕಾರದ ಪಾಠಗಳು ಮನೆಯಿಂದಲೇ ಆಗಬೇಕು. ಧಾರ್ಮಿಕ ಸಂಸ್ಥೆಗಳೂ ಈ ಕಾರ್ಯಮಾಡುತ್ತಿವೆ. ಸಮಾಜದಲ್ಲಿ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಅರಿವು ಸದಾ ಜಾಗೃತವಾಗಿರಬೇಕು.‌ ಯುವಶಕ್ತಿ ದೇಶದ ಬಹುದೊಡ್ಡ ಸಂಪತ್ತು. ಯುವಕರನ್ನು ಧರ್ಮದ ತಳಹದಿಯಲ್ಲಿ ಯೋಗ್ಯ ನಾಗರಿಕರನ್ನಾಗಿ ರೂಪಿಸಿದಲ್ಲಿ ಭಾರತ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗುತ್ತದೆ ಎಂದು ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.


ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 34ನೇ ಚಾತುರ್ಮಾಸ್ಯ ವ್ರತದ ಸದವಸರದಲ್ಲಿ ಸೋಮವಾರ ಶ್ರೀಗಳನ್ನು ಭೇಟಿ ಮಾಡಿ ಭಕ್ತಿ ಗೌರವ ಸಮರ್ಪಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸಂದೇಶ ನೀಡಿದ ಶ್ರೀಗಳು ಹಕ್ಕುಗಳ ಬಗ್ಗೆ ಮಾತ್ರ ಹೋರಾಟ ಹಾರಾಟಗಳು ನಡೆಯುತ್ತವೆಯೇ ವಿನಹ ದೇಶದ ಸುಭಿಕ್ಷೆ ಸಮೃದ್ಧಿ ಶಾಂತಿಯಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ಕಡಿಮೆ ಚಿಂತನೆ ನಡೆಯುವುದು ವಿಷಾದನೀಯ. ಆಸೆಯ ಹಿಂದೆ ಬಿದ್ದಾಗ ಅನರ್ಥ ನಿಶ್ಚಿತ ಎನ್ನುವುದನ್ನು ನಮ್ಮ ಸ್ಮೃತಿ ಪುರಾಣಗಳು ಸಾರಿ ಸಾರಿ ಹೇಳಿವೆ. ತನ್ನ ದುರಾಸೆಗೆ ಸಮಾಜದ ಸುಖ, ಹಿತವನ್ನೂ ಬಲಿಕೊಡುವ ಕಸಿಯುವ ಪ್ರವೃತ್ತಿ ಸಲ್ಲದು ಎಂದರು.  


ನಾಗರಿಕ ಸಮಾಜದಲ್ಲಿ ಹಕ್ಕು ಮತ್ತು ಕರ್ತವ್ಯಗಳು ಎಂಬ ವಿಷಯದ ಬಗ್ಗೆ ಯುವ ನ್ಯಾಯವಾದಿ ಸಾಯಿದೀಪಕ್ ಉಪನ್ಯಾಸ ನೀಡಿದರು.


ಶ್ರೀಗಳು, ವಿಶ್ವನಾಥ ಶೆಟ್ಟಿ ದಂಪತಿ ಮತ್ತು ಅವರ ಪುತ್ರ ಪ್ರಸಿದ್ಧ ಹೃದ್ರೋಗ ತಜ್ಞ ಡಾ ರವಿಶಂಕರ್ ಶೆಟ್ಟಿ ಮತ್ತು ಸಾಯಿ ದೀಪಕ್ ಅವರನ್ನು ಸಂಮಾನಿಸಿದರು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post