|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಸ್ತಕ ವಿಮರ್ಶೆ: 'ಮಹಲಿನೊಳಗೆ'- ಅನುವಾದಿತ ಕಾದಂಬರಿ

ಪುಸ್ತಕ ವಿಮರ್ಶೆ: 'ಮಹಲಿನೊಳಗೆ'- ಅನುವಾದಿತ ಕಾದಂಬರಿ



ಶ್ರೀಮತಿ ರಮಾ ಮೆಹ್ತಾ ಅವರ ಇಂಗ್ಲಿಷ್ ಕಾದಂಬರಿ Inside the Haveli.

ಕನ್ನಡಾನುವಾದ-

ಡಾ. ವಸಂತಕುಮಾರ ಪೆರ್ಲ 

ಪ್ರಕಟಣೆ: ಕೇಂದ್ರ ಸಾಹಿತ್ಯ ಅಕಾಡೆಮಿ.

ಪುಟ:250, ಬೆಲೆ: ರೂ. 245. 


ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಡಾ. ವಸಂತಕುಮಾರ ಪೆರ್ಲ ಅವರು ಅನುವಾದಿಸಿಕೊಟ್ಟ ಶ್ರೀಮತಿ ರಮಾ ಮೆಹ್ತಾ ಅವರ ಇಂಗ್ಲಿಷ್ ಕಾದಂಬರಿ Inside the Haveli ಯ ಕನ್ನಡಾನುವಾದ 'ಮಹಲಿನೊಳಗೆ' ಒಂದು ಸುಂದರವಾದ ಅನುವಾದವಾಗಿ ಹೊರಗೆ ಬಂದಿದೆ. ಭಾಷೆ ಹೃದ್ಯವೂ ಮನೋಜ್ಞವೂ ಆಗಿದ್ದು ಇದೊಂದು ಅನುವಾದ ಎಂಬುದು ಗೊತ್ತಾಗದಷ್ಟು ಕನ್ನಡಕ್ಕೆ ಸಹಜವಾಗಿದೆ.


ಮುಂಬೈಯಿಂದ ದೂರದ ರಾಜಸ್ತಾನದ ರಾಜಮನೆತನಕ್ಕೆ ಮದುವೆಯಾಗಿ ಹೋದ ಸುಶಿಕ್ಷಿತ ಮತ್ತು ಆಧುನಿಕ ಮನೋಧರ್ಮದ ಹೆಣ್ಣುಮಗಳೊಬ್ಬಳು ಅರಮನೆಯ ಸಾಂಪ್ರದಾಯಿಕ ಕಟ್ಟುಪಾಡುಗಳ ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಲು ಹೆಣಗುವ ಹೃದಯಂಗಮ ಚಿತ್ರಣ ಈ ಕಾದಂಬರಿಯ ವಸ್ತು. ನವೋಲ್ಲಾಸದಿಂದ ಸ್ವತಂತ್ರ ಜೀವನ ರೂಪಿಸಿಕೊಳ್ಳಬೇಕು ಅಂದುಕೊಂಡವಳು ಅನಿವಾರ್ಯವಾಗಿ ಅರಮನೆಯಲ್ಲಿ ಮುಖಪರದೆ ಹಾಕಿಕೊಂಡು ಅಲ್ಲಿನ ಕಟ್ಟುಪಾಡುಗಳಿಗೆ ಬದ್ಧಳಾಗಿ ಜೀವನ ಮಾಡುವ ಪ್ರಸಂಗ ಬಂದೊದಗುತ್ತದೆ. ಆದರೆ ಆಕೆ ಹತಾಶಳಾಗದೆ, ಅನಂತರ ನಿಧಾನವಾಗಿ ತಾನು ನಂಬಿದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಆಚರಣೆಗೆ ತರುವ ಹೋರಾಟದ ಚಿತ್ರಣ ಹೃದಯಂಗಮವಾಗಿ ಚಿತ್ರಿತವಾಗಿದೆ.


ಶ್ರೀಮತಿ ರಮಾ ಮೆಹ್ತಾ ಅವರ ಈ ಇಂಗ್ಲಿಷ್ ಕಾದಂಬರಿಗೆ 1979 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಅದನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯವನ್ನು ಡಾ. ವಸಂತಕುಮಾರ ಪೆರ್ಲ ಅವರು ಮಾಡಿದ್ದಾರೆ.


ರಾಜಸ್ತಾನದ ರಾಜಮನೆತನಗಳ ಮತ್ತು ಅರಮನೆಯೊಳಗಿನ ಬದುಕಿನ ಒಳವಿವರಗಳು ಕಾದಂಬರಿಯಲ್ಲಿ ಅದ್ಭುತವಾಗಿ ಚಿತ್ರಿತವಾಗಿದ್ದು, ಸೂಕ್ಷ್ಮ ಮನಸ್ಸಿನ ಓರ್ವ ಮಹಿಳೆಯ ಕಣ್ಣಿನಿಂದ ಅವುಗಳನ್ನು ದಾಖಲಿಸಿರುವುದು ಅಪೂರ್ವವಾಗಿದೆ. ಮುಂಬೈಯ ಆಧುನಿಕ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದ ನವವಧುವು ಅಪರಿಚಿತವಾದ ರಾಜಸ್ತಾನದ ಪಾರಂಪರಿಕ ಸಂಸ್ಕೃತಿಯೊಡನೆ ಮಿಳಿತಗೊಂಡಾಗ ಉಂಟಾಗುವ ತಲ್ಲಣ ಮತ್ತು ಸಂಘರ್ಷಗಳು, ಆಕೆಯಿಂದಾಗಿ ಅರಮನೆಯೊಳಗೆ ನಿಧಾನವಾಗಿ ಉಂಟಾಗುವ ಬದಲಾವಣೆಗಳು ಸ್ವಾತಂತ್ರ್ಯ ಆಂದೋಲನ ಕಾಲಘಟ್ಟದ ಕಥನವೂ ಆಗಿ ಪ್ರಾಮುಖ್ಯ ಪಡೆಯುತ್ತದೆ.


250 ಪುಟಗಳಿರುವ ಈ ಕಾದಂಬರಿಯ ಬೆಲೆ 245 ರೂಪಾಯಿಗಳು. ಅಚ್ಚುಕಟ್ಟಾದ ಮುದ್ರಣ. ತುಂಬ ಒಳ್ಳೆಯ ಕಾದಂಬರಿ. ಓದಲು ಆರಂಭಿಸಿದರೆ ನಮಗರಿವಿಲ್ಲದೆಯೇ ಒಳಗೆಳೆದುಕೊಳ್ಳುವ ಭಾವಸೂಕ್ಷ್ಮದ ಚಿತ್ರಣ ಮತ್ತು ಕಥನಗಳಿಂದಾಗಿ ಈ ಕಾದಂಬರಿ ಗಮನ ಸೆಳೆಯುತ್ತದೆ.


-ಕೆ. ಶೈಲಾಕುಮಾರಿ 



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم