||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರತಿಭೆ: ಅನುಷ್ಕಾ ರಾವ್ ದೇವ- 9ನೇ ತರಗತಿಯಲ್ಲೇ ಎಐ ಮಾಡೆಲ್ ತಯಾರಿಸಿದವಳು ಈಕೆ

ಪ್ರತಿಭೆ: ಅನುಷ್ಕಾ ರಾವ್ ದೇವ- 9ನೇ ತರಗತಿಯಲ್ಲೇ ಎಐ ಮಾಡೆಲ್ ತಯಾರಿಸಿದವಳು ಈಕೆ


ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ತಾಯಿ: ವೀಣಾ ರಾವ್ ದೇವ. ರವಿಶಂಕರ ರಾವ್ ದೇವ ಮತ್ತು ಜಯಶ್ರೀ ರಾವ್ ದೇವ, ಇವರ ಮೊಮ್ಮಗಳು.


ಕರ್ನಾಟಕ ಶಾಸ್ತ್ರೀಯ ಸಂಗೀತ ಈ ವರ್ಷ ಸೀನಿಯರ್ ಪರೀಕ್ಷೆ ಬರೆಯಲಿದ್ದಾಳೆ. 5ನೆ ತರಗತಿಯಲ್ಲಿ ಜೂನಿಯರ್ ಪರೀಕ್ಷೆ ಬರೆದು 93 ಶೇಕಡಾ ಅಂಕ ಪಡೆದಿದ್ದಾಳೆ. ಸತತವಾಗಿ 3 ವರ್ಷ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ವಿಭಾಗದ ಲಘು ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾಳೆ. ಶಾಲಾ ಮತ್ತು ಕ್ಲಸ್ಟರ್ ಮಟ್ಟದ ಸಂಗೀತ, ನಾಟಕ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿದ್ದಾಳೆ. ಕಲಿಕೆಯಲ್ಲಿ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದಾಳೆ.


2020 ರಲ್ಲಿ ಪ್ರಾರಂಭವಾದ "National Program for Government Schools: Responsible Al for Youth." ಇದರಲ್ಲಿ ಇಡೀ ಭಾರತದಿಂದ ಆಯ್ಕೆಯಾದ 100 ಮಕ್ಕಳಲ್ಲಿ ಇವಳೂ ಒಬ್ಬಳು. ಉಚಿತ ಲಾಪ್ ಟಾಪ್ ಗೆದ್ದು ಒಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾಡೆಲ್ ಸಲ್ಲಿಸಿದ್ದಾಳೆ. ಮುಂದಿನ ಹಂತದ ಫಲಿತಾಂಶ ಇನ್ನು ಬರಬೇಕಷ್ಟೆ. ಚಿತ್ರಕಲೆ, ಛಾಯಾಗ್ರಹಣ ಹವ್ಯಾಸ.


ಸುಮಾರು ಒಂದೂವರೆ ವರ್ಷ ಭೌತಿಕ ತರಗತಿ ಇಲ್ಲದ ಸಮಯದಲ್ಲಿ ಆನ್‌ಲೈನ್ ಪಾಠ ಕಲಿಕೆಯ ಜೊತೆಗೆ ಚಿತ್ರಕಲೆಯನ್ನು ಯೂ ಟ್ಯೂಬ್ ನೋಡಿ ಕಲಿಯುತ್ತಾ ಚಿತ್ರ ಬಿಡಿಸಿದ್ದಾಳೆ. ಯಾವುದೇ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನ ಇಲ್ಲದೇ ತಾನೇ ಸ್ವತಃ ಕಲಿತು ಬಿಡಿಸಿದ ಅನೇಕ ಚಿತ್ರಗಳಿವೆ. ಮುಂದೆ ಸಮಯ ಸಿಕ್ಕಾಗ ಪಠ್ಯ ಚಟುವಟಿಕೆಗಳ ಜೊತೆಗೆ ಸಂಗೀತ ಚಿತ್ರಕಲೆ ಹಾಗೂ ಛಾಯಾಗ್ರಹಣವನ್ನು ಹವ್ಯಾಸವಾಗಿ ಮುಂದುವರೆಸುವ ಇಚ್ಛೆ ಹೊಂದಿದ್ದಾಳೆ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post