ಬಾಳಪ್ಪನ ಬರಹಗಳು- ಪುಸ್ತಕ ಸೆ.17ರಂದು ಬಿಡುಗಡೆ

Upayuktha
0


ಮುಂಡಾಜೆ: ಹಿರಿಯ ವಿದ್ವಾಂಸ ಬಾಲಕೃಷ್ಣ ಸಹಸ್ರಬುಧ್ಯೆ ಅವರ ಲೇಖನಗಳ ಸಂಗ್ರಹ 'ಬಾಳಪ್ಪನ ಬರಹಗಳು' ಕೃತಿ ಸೆ.17ರ ಶುಕ್ರವಾರದಂದು ಮುಂಡಾಜೆಯ ಶ್ರೀ ಪರಶುರಾಮ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.


ಪ್ರಚಲಿತ ವಿದ್ಯಮಾನಗಳು, ಜೀವನಾನುಭವ, ವಿನೋದ, ಜೀವನದ ಸುಖ-ದುಃಖಗಳ ಕುರಿತು ಬಾಲಕೃಷ್ಣ ಸಹಸ್ರಬುಧ್ಯೆ ಅವರು ಬರೆದ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ.


ಶ್ರೀಕರ ಮರಾಠೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೀಧರ ಜಿ. ಭಿಡೆಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸದಾನಂದ ಬಿ. ಮುಂಡಾಜೆ ಮತ್ತು ಸದಾನಂದ ಫಡ್ಕೆಯವರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.


ದೀಪ ಬೆಳಗಿಸುವುದರಿಂದ ಕಾರ್ಯಕ್ರಮ ಪ್ರಾರಂಭವಾಗಿ ಸ್ವಾಗತ, ಹಾಡು, ಪ್ರಸ್ತಾವನೆ, ಪುಸ್ತಕ ಬಿಡುಗಡೆ, ಗಣ್ಯರ ಭಾಷಣ, ಅನಿಸಿಕೆಗಳು ಹೀಗೆ ಕಾರ್ಯಕ್ರಮಗಳಿವೆ. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಸಂಪನ್ನವಾಗಲಿದೆ.


ಬಾಲಕೃಷ್ಣ ಸಹಸ್ರಬುಧ್ಯೆ ಅವರು ಕೆಲವು ವರ್ಷಗಳ ಹಿಂದೆ ಉಡುಪಿಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಅನಂತರ ಪಾಕಶಾಸ್ತ್ರ ಪ್ರವೀಣರಾಗಿ ಜೀವನ ನಡೆಸಿದವರು. ಇವೆಲ್ಲದರ ನಡುವೆಯೇ ಸ್ವಾಧ್ಯಾಯದ ಮೂಲಕ ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡಿ ವಿದ್ವಾಂಸರಾದವರು. ಅವರು ಬರೆದ 'ಗೀತೆಯ ಬೆಳಕು' ಸರಣಿ ಉಪಯುಕ್ತ ನ್ಯೂಸ್‌ನಲ್ಲಿ ಪ್ರಕಟವಾಗಿದೆ. ಅಲ್ಲದೆ ಅವರ ಬಹುತೇಕ ಬರಹಗಳು ಉಪಯುಕ್ತ ನ್ಯೂಸ್‌ ನಲ್ಲಿ ಪ್ರಕಟಗೊಂಡಿವೆ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top