ಮಂಗಳೂರು ಆಕಾಶವಾಣಿ: ಯುವವಾಣಿ ಕತೆ, ಲೇಖನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

Upayuktha
0


ಮಂಗಳೂರು: ಮಂಗಳೂರು ಆಕಾಶವಾಣಿ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಸಹಯೋಗದಲ್ಲಿ  ಆಯೋಜಿಸಲಾದ ಯುವವಾಣಿ ಕತೆ ಮತ್ತು ಲೇಖನ ಸ್ಪರ್ಧೆಗಳ ಬಹುಮಾನ ವಿತರಣೆ ಸೋಮವಾರ ನಡೆಯಿತು.


ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಅಪರಾಹ್ನ 2 ಗಂಟೆಗೆ ನಡೆಯಿತು. ನಿಟ್ಟೆ ವಿಶ್ವವಿದ್ಯಾಲಯದ Centre for Curriculum Development ನ ನಿರ್ದೇಶಕ ಮತ್ತು ಪ್ರಾಧ್ಯಾಪಕ ಡಾ. ಹರ್ಷ ಹಾಲಹಳ್ಳಿ ಇವರು ಬಹುಮಾನ ವಿತರಣೆ ಮಾಡಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಅಭಿವೃದ್ಧಿಯಲ್ಲಿ ಉನ್ನತ ವ್ಯಾಸಂಗ, ಸಂಶೋಧನೆ ಮತ್ತು interdisciplinary ಅಧ್ಯಯನದ ಮಹತ್ವ” ಎಂಬ ವಿಚಾರವಾಗಿ ಮಾತನಾಡಿದರು.


ಆಕಾಶವಾಣಿ ಮಂಗಳೂರು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವರು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮತ್ತು ಯುವಕರಿಗಾಗಿ ಹಮ್ಮಿಕೊಂಡ ಯುವವಾಣಿ ಕತೆ ಮತ್ತು ಲೇಖನ ಸ್ಪರ್ಧೆ 2021-22ನ್ನು ಆಯೋಜಿಸಿತ್ತು.


ಬಹುಮಾನ ಪಡೆದ ಮತ್ತು ಉತ್ತಮ ಲೇಖನಗಳನ್ನು ಬರೆದ ಎಲ್ಲರನ್ನೂ ಮಂಗಳೂರು ಆಕಾಶವಾಣಿಗೆ ಮುಂದಿನ ದಿನಗಳಲ್ಲಿ ಧ್ವನಿಮುದ್ರಣಕ್ಕಾಗಿ ಆಹ್ವಾನಿಸಲಾಗುವುದು.

 

ಕೆಲವು ವಿಭಾಗಗಳಿಗೆ ಬರಹಗಳು ಬಂದಿಲ್ಲ, ಕೆಲವು ವಿಭಾಗಗಳಿಗೆ ಅತಿಕಡಿಮೆ ಸಂಖ್ಯೆಯಲ್ಲಿ ಬಂದಿವೆ ಮತ್ತು ಕೆಲವು ವಿಭಾಗಗಳಿಗೆ ಬಂದ ಬರಹಗಳ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. (ಕೊಂಕಣಿ ವಿಭಾಗಕ್ಕೆ ಯಾವ ಬರಹಗಳೂ ಬಂದಿಲ್ಲ.) ಆದುದರಿಂದ ಪರೀಕ್ಷಕರು ವಿವಿಧ ವಿಭಾಗಗಳಿಗೆ ಬಂದ ಬರಹಗಳ ಉದಾಹರಣೆಗಳನ್ನು ತುಲನಾತ್ಮಕವಾಗಿ ಬಳಸಿಕೊಂಡು ಕೆಲವು ವಿಭಾಗಗಳಲ್ಲಿ ಕೆಲವು ಬಹುಮಾನಗಳನ್ನು ಘೋಷಿಸಿದ್ದಾರೆ, ಕೆಲವು ವಿಭಾಗಗಳಲ್ಲಿ ಬಹುಮಾನಗಳನ್ನು ಘೋಷಿಸಿಲ್ಲ. ಯಾವುದೇ ಫಲಾಪೇಕ್ಷೆಯಿಲ್ಲದೆ ವಿದ್ಯಾರ್ಥಿಗಳ ಮೇಲಿನ ಪ್ರೀತಿಯಿಂದ ಅಪಾರ ಸಹನೆದೋರಿ ಎಲ್ಲ ಬರಹಗಳನ್ನು ಓದಿ ಫಲಿತಾಂಶ ನೀಡಿದ ಎಲ್ಲ ಪರೀಕ್ಷಕರಿಗೂ ಆಕಾಶವಾಣಿ ಕೃತಜ್ಞತೆ ಸಲ್ಲಿಸಿದೆ.  


ಶ್ರೀ ವಾದಿರಾಜ ಶೆಟ್ಟಿ, ಅಧ್ಯಕ್ಷರು, ಲಯನ್ಸ್ ಕ್ಲಬ್, ಹೆಬ್ರಿ, ಶ್ರೀ ಗೋಪಿಕೃಷ್ಣ ಭಟ್, ಮಾಲಕರು, ಭಾರತ್ ಪೆಟ್ರೋಲಿಮ್ಸ್ ಹೆಬ್ರಿ, ಶ್ರೀ ಶ್ರೀನಿವಾಸ ಹೆಬ್ಬಾರ, ಉದ್ಯಮಿ, ಹೆಬ್ರಿ, ವಿಜೇತರಿಗೆ ನಗದು ಬಹುಮಾನಗಳನ್ನು ನೀಡಿದರು. ಅದೇ ರೀತಿ, ನಾಡಿನ ಖ್ಯಾತ ವಿದ್ವಾಂಸರೂ, ಲೇಖಕರೂ ಆದ ಶ್ರೀ ಲಕ್ಷ್ಮೀಶ ತೋಳ್ಪಾಡಿ, ಡಾ. ಬಿ. ಜನಾರ್ದನ ಭಟ್, ಶ್ರೀ ಗಣಪತಿ ಭಟ್ ಕುಳಮರ್ವ, ಶ್ರೀ ಅರವಿಂದ ಚೊಕ್ಕಾಡಿ, ಮತ್ತು ಡಾ. ರೋಹಿಣಾಕ್ಷ ಶಿರ್ಲಾಲ್ ಅವರು ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top