|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೀವೂ ಆಗಬಹುದು ಶೇರು ಮಾರುಕಟ್ಟೆಯ ಎಕ್ಸ್‌ಪರ್ಟ್‌ ಟ್ರೇಡರ್!

ನೀವೂ ಆಗಬಹುದು ಶೇರು ಮಾರುಕಟ್ಟೆಯ ಎಕ್ಸ್‌ಪರ್ಟ್‌ ಟ್ರೇಡರ್!

ಎರಡು ದಿನದ ವಿಶೇಷ ಟೆಕ್ನಿಕಲ್‌ ಟ್ರೇಡಿಂಗ್ ತರಬೇತಿ

ವಿಭಾ ಟೆಕ್ನಾಲಜೀಸ್‌ನಿಂದ ಆಯೋಜನೆ

ಆಗಸ್ಟ್‌ 28 ಹಾಗೂ 29




ಡಿಜಿಟಲ್‌ ಯುಗದಲ್ಲಿ ಎಲ್ಲವೂ ಸ್ಮಾರ್ಟ್ ಆಗಿ ನಡೆದು ಹೋಗಬೇಕೆಂಬುದೇ ಎಲ್ಲರ ಬಯಕೆಯಾಗಿರುತ್ತದೆ. ಎಲ್ಲೂ, ಯಾವ ಸಮಯದಲ್ಲೂ ಯಾರನ್ನೂ ಕಾಯಲು ಸಮಯ ಇಲ್ಲ. ಪ್ರತಿಯೊಂದೂ ಕ್ಷಣಾರ್ಧದಲ್ಲಿ ಮುಗಿದು ಬಿಡಬೇಕೆಂಬ ತವಕ ಈಗಿನ ದೈನಂದಿನ ಜೀವನದಲ್ಲಿ ಸಾಮಾನ್ಯ.


ಅನೇಕರಿಗೆ ಬಲು ಬೇಗನೇ ಶ್ರೀಮಂತರಾಗಬೇಕೆಂಬ ಹಂಬಲವೂ ಹೆಚ್ಚು. ಈ ವೇಳೆ ಪ್ರಮುಖವಾಗಿ ಕಣ್ಣಿಗೆ ಕಾಣುವುದು ಶೇರು ಮಾರುಕಟ್ಟೆ! ಅತಿ ಸಣ್ಣ ವ್ಯವಹಾರದಿಂದ ಹಿಡಿದು, ಕೋಟಿಗಟ್ಟೆಲೆಯ ವಹಿವಾಟುಗಳೆಲ್ಲವೂ ಇಂದು ಸ್ಮಾರ್ಟ್‌ಫೋನ್‌ನಲ್ಲೇ ಮುಗಿದು ಬಿಡುತ್ತದೆ. ಅಂತೆಯೇ ಶೇರು ಮಾರುಕಟ್ಟೆಯಲ್ಲಿನ ಹೂಡಿಕೆ, ಅದಕ್ಕೆ ಅಗತ್ಯವಾದ ದಾಖಲೆ ಇತ್ಯಾದಿಗಳು ಕ್ಷಣಾರ್ಧದಲ್ಲಿ ಫೋನ್‌ ಮೂಲಕ ಖಾತೆ ತೆರಯಲು ಸಾಧ್ಯವಿದೆ. 

ಆದರೆ ನಮ್ಮಲ್ಲೇ ಬಹಳಷ್ಟು ಮಂದಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಮಾಡಿಕೊಂಡವರನ್ನೂ ಕಾಣಬಹುದು. ಇದಕ್ಕೆ ಪ್ರಮುಖ ಕಾರಣ ಶೇರು ಮಾರುಕಟ್ಟೆಯ ಕುರಿತ ಅಜ್ಞಾನ!


ಯಾವ ಸಮಯದಲ್ಲಿ ಯಾವ ಸಂಸ್ಥೆಯ ಶೇರುಗಳನ್ನು ಖರೀದಿಸಬೇಕು ಹಾಗೂ ಅದನ್ನು ಯಾವಾಗ ಮಾರಾಟ ಮಾಡಬೇಕೆಂಬ ಜ್ಞಾನದ ಕೊರತೆಯಿಂದ ಅನೇಕ ಮಂದಿ ಹೂಡಿಕೆ ಮಾಡಿದ ಹಣವನ್ನು ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಒಂದು ಸಂಸ್ಥೆಯ ಶೇರು ಮುಂದಿನ ದಿನದಲ್ಲಿ ಲಾಭ ತಂದುಕೊಡಬಲ್ಲದೇ ಎಂಬುದನ್ನು ಅಧ್ಯಯನ ನಡೆಸದೇ ಖರೀದಿಸಿ, ನಷ್ಟ ಮಾಡಿಕೊಳ್ಳುತ್ತಾರೆ. 


ಟೆಕ್ನಿಕಲ್‌ ಟ್ರೇಡಿಂಗ್‌ ಅರಿತುಕೊಳ್ಳಿ!

ಶೇರು ಸೂಚ್ಯಂಕ, ಮಾರುಕಟ್ಟೆಯ ಅಂದಾಜು ಬೆಲೆಗಳ ಏರಿಳಿತಗಳನ್ನು ಶೇ.95 ರಷ್ಟು ನಿಖರತೆಯಲ್ಲಿ ನೀವೂ ಅಂದಾಜಿಸಲು ಸಾಧ್ಯವಿದೆ. ಟೆಕ್ನಿಕಲ್‌ ಟ್ರೇಡಿಂಗ್‌ ನಿಂದ ಈ ಅಂಶಗಳನ್ನು ನಿಖರವಾಗಿ ಅಂದಾಜಿಸಲು ಸಾಧ್ಯ. MACD, RSI, EMA ಇತ್ಯಾದಿ ಅನೇಕ ವಿಧವಾದ ಟೆಕ್ನಿಕಲ್‌ ಇಂಡಿಕೇಟರ್‌ಗಳ ಬಳಕೆಗಳ ಮೂಲಕ ಟ್ರೇಡಿಂಗ್‌ ಮಾಡಿದಲ್ಲಿ ಮಾತ್ರ ಶೇರು ಹೂಡಿಕೆ ಲಾಭದಾಯಕವಾಗುತ್ತದೆ. ಶೇರು ಮಾರುಕಟ್ಟೆಯ ಸಂಪೂರ್ಣ ತಾಂತ್ರಿಕತೆ, ವಿವಿಧ ಬಗೆಯ ಚಾರ್ಟ್‌ಗಳ ವಿಶ್ಲೇಷಣೆ ಮಾಡುವ ವಿಧಾನಗಳನ್ನು ಅರಿಯಬಹುದು. ಪುತ್ತೂರಿನ ವಿಭಾ ಟೆಕ್ನಲಾಜೀಸ್‌ ಶೇರು ಮಾರುಕಟ್ಟೆಯ ತಾಂತ್ರಿಕ ವಿಚಾರಗಳ ಕುರಿತು ಆಗಸ್ಟ್‌ 28 ಹಾಗೂ 29 ರಂದು 2 ದಿನಗಳ ಕಾರ್ಯಾಗಾರ ಆಯೋಜಿಸಿದೆ.


ಕಾರ್ಯಾಗಾರದಲ್ಲಿ ನೀವೇನು ಕಲಿಯುತ್ತೀರಿ?

ಶೇರು ಮಾರುಕಟ್ಟೆಯ ವಿಸ್ತಾರ ಚಿತ್ರಣ

ಶೇರು ಮಾರುಕಟ್ಟೆಯ ಸರಿ ಮತ್ತು ತಪ್ಪು ನಿರ್ಧಾರಗಳ ಕುರಿತು

ವಿವಿಧ ಬಗೆಯ ಟೆಕ್ನಿಕಲ್‌ ಚಾರ್ಟ್ಸ್‌ ವಿಶ್ಲೇಷಣೆ ಮಾಡುವ ಕ್ರಮಗಳು

ಹೂಡಿಕೆ/ಮಾರಾಟ ಸೂಚನೆ (ಸಿಗ್ನಲ್ಸ್‌)ಗಳನ್ನು ಗ್ರಹಿಸುವ ವಿಧಾನ

ಲೈವ್‌ ಟ್ರೇಡಿಂಗ್‌ - ಪ್ರಾಯೋಗಿಕ ಅಧ್ಯಯನ


ತರಬೇತಿಯ ಕುರಿತು: 

ವಿಭಾ ಟೆಕ್ನಾಲಜೀಸ್‌ನ ಪ್ರಮೇಯ- ಅ ನಾಲೆಡ್ಜ್‌ ಶೇರಿಂಗ್‌ ಇನಿಷಿಯೇಟಿವ್‌ ನಿಂದ ಸ್ಕಿಲ್‌ ಡೆವೆಲಪ್‌ಮೆಂಟ್‌, ವ್ಯಕ್ತಿಕ್ವ ವಿಕಸನ ತರಬೇತಿ, Big Data, Cyber Security, Fingerprint based carrier analysis ಸೇರಿ ಅನೇಕ ಬಗೆಯ ಆನ್‌ಲೈನ್‌ ಹಾಗೂ ಆಫ್‌ಲೈನ್‌ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಅಂತೆಯೇ ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ 101 ವೆಬಿನಾರ್ (ಕ್ರಿಪ್ಟೋಕರೆನ್ಸಿ ಕುರಿತ ಮಾಹಿತಿ) ಆಯೋಜಿಸುತ್ತಿದ್ದಾರೆ.


ಯುಕೆ ಟ್ರೇಡರ್ಸ್‌ ವಿಶ್ವವಿದ್ಯಾಲಯದಿಂದ ಫಾರೆಕ್ಸ್‌ ಹಾಗೂ ಈಕ್ವಿಟಿ ವಿಭಾಗದಲ್ಲಿ ಸರ್ಟಿಫೈಡ್‌ ಟ್ರೇಡರ್‌ ಹಾಗೂ ವಿಭಾ ಟೆಕ್ನಾಲಜೀಸ್‌ ನ ಮಾರ್ಗದರ್ಶಕರಾದ ಕೇಶವ ಮೂರ್ತಿ ಚಂದ್ರಶೇಖರ್‌ 2 ದಿನದ ಕಾರ್ಯಾಗಾರವನ್ನು ನಡೆಸಲಿದ್ದಾರೆ.


ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ: 

9611 319 643

9036 480 567, 9945 087 141


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post