|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 3 ಬಿಸಿಲು + 2 ತಾಸು ಕೆಲಸ + ಚೂರಿ + ಮಿಕ್ಸಿ- ಇಷ್ಟಿದ್ದರೆ ಸಾಕು 'ಬಾಕಾಹು' ತಯಾರಿಗೆ!

3 ಬಿಸಿಲು + 2 ತಾಸು ಕೆಲಸ + ಚೂರಿ + ಮಿಕ್ಸಿ- ಇಷ್ಟಿದ್ದರೆ ಸಾಕು 'ಬಾಕಾಹು' ತಯಾರಿಗೆ!ರಾಜ್ಯದ 33 ಕೇವೀಕೆಗಳೇಕೆ ಟ್ರಯಲ್ / ತರಬೇತಿ / ವೆಬಿನಾರ್ ನಡೆಸಬಾರದು?


ಬಿಸಿಲಿನ ದಿನ ಮೂರು, ನಿಮ್ಮ ಒಬ್ಬರ ಮೂರು ತಾಸು ಶ್ರಮ ಬಳಸಿದರೆ ಸಾಕು. ಬಾಳೆಕಾಯಿ ಕತ್ತರಿಸಿ ಒಣಗಿಸಿ ಮಿಕ್ಸಿಯಲ್ಲಿ ಪುಡಿಗುಟ್ಟಿದರೆ, ಪೋಷಕಸಮೃದ್ಧ ’ಬಾಕಾಹು’ (ಬಾಳೆಕಾಯಿ ಹುಡಿ/ ಹಿಟ್ಟು) ರೆಡಿ.


ಎರಡು ವಾರಗಳಲ್ಲಿ ಕೊಳೆತು ಮಣ್ಣು ಸೇರುವ ಬಾಳೆಕಾಯಿಗೆ ಆರು ತಿಂಗಳ ಪುನರ್ಜನ್ಮ.


ಯಾವುದೇ ಬಾಳೆಕಾಯಿಯಿಂದ ಮಾಡಬಹುದು.


ಒಮ್ಮೆ ಬಾಕಾಹು ತಯಾರಾದರೆ ತಾಜಾ ಬಾಳೆಕಾಯಿಯಿಂದ ಮಾಡುವುದರ ಹತ್ತು ಪಟ್ಟು ತಿಂಡಿತಿನಸು ಸುಲಭದಲ್ಲಿ ಮಾಡಬಹುದು.


ದೋಸೆ, ರೊಟ್ಟಿ, ಉಪ್ಪಿಟ್ಟಿನಿಂತಹ ದಿನನಿತ್ಯದ ತಿಂಡಿಯಿಂದಾರಂಭಿಸಿ ಹತ್ತಾರು ಸಿಹಿ - ಕುರುಕು ತಿಂಡಿಗಳು! ಬರೇ ಬಾಕಾಹು ಅಥವಾ ಒಂದಷ್ಟು ಇತರ ಹಿಟ್ಟು ಮಿಶ್ರಣದೊಂದಿಗೆ ಮಾಡಲಾಗದ ತಿಂಡಿಗಳೇ ಇಲ್ಲ.


ಅಕ್ಕಿ, ಗೋಧಿಗಳಂತಹ ಏಕದಳ ಧಾನ್ಯಮೂಲದ ಆಹಾರಕ್ಕಿಂತ ಇದು ಎಲ್ಲ ವಯೋಮಾನದವರಿಗೂ ಉತ್ತಮ.


ಶಿಶುಗಳಿಂದ ಸಕ್ಕರೆ ಕಾಯಿಲೆಯವರ ವರೆಗೂ ಹೇಳಿಮಾಡಿಸಿದ ಆಹಾರ.


ಇಷ್ಟು ರೈತಸ್ನೇಹಿ / ಸಮುದಾಯ ಸ್ನೇಹಿ ಆರೋಗ್ಯವರ್ಧಕ ಆಹಾರದ ಪ್ರಾಯೋಗಿಕ ತಯಾರಿ / ಪ್ರಚಾರವನ್ನೇಕೆ ನಮ್ಮ 33 ಕೇವೀಕೆ (ಕೃಷಿ ವಿಜ್ಞಾನ ಕೇಂದ್ರ) ಗಳು ಮಾಡಬಾರದು ?


ತಡವೇಕೆ? ಶುರುವಾಗಲಿ ಎಲ್ಲೆಲ್ಲೂ ಬಾಕಾಹು ಪ್ರಯೋಗ!


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post