ವಿದ್ಯೆ ಮತ್ತು ವಿನಯ ಇವೆರಡೂ ಇಂದಿನ ಯುವಜನಾಂಗದ ಬಹುದೊಡ್ಡ ಆಸ್ತಿ. ಬೆಲೆಕಟ್ಟಲಾಗದ ಈ ಆಸ್ತಿಯನ್ನು ಹೊಂದಿರುವ ವ್ಯಕ್ತಿ ಯಾರ ಮುಂದೆಯೂ ಸೋಲಲಾರ ಮತ್ತು ತನ್ನ ಬದುಕಿನುದ್ದಕ್ಕೂ ಯಶಸ್ಸಿನ ಜೊತೆಗೆ ಅಪಾರ ಪ್ರೀತಿ ನಂಬಿಕೆಯನ್ನೂ ಗಳಿಸುವನು.
ವಿದ್ಯೆ ಮತ್ತು ವಿನಯ ಎಂಬುದು ಒಂದು ರಥದ ಎರಡು ಚಕ್ರಗಳಿದ್ದಂತೆ ಆದರೂ ವಿನಯ ಎಂಬುದು ವಿದ್ಯೆಗಿಂತಲೂ ಶಕ್ತಿಶಾಲಿ. ವ್ಯಕ್ತಿಯೊಬ್ಬ ವಿನಯವಂತನಾಗಿದ್ದರೆ ಆತನ ಬಳಿ ಇರುವ ವಿದ್ಯೆಗಿಂತ ಆತನ ಗುಣನಡತೆಗೆ ಗೌರವ ಹೆಚ್ಚು. ಅದೇ ವ್ಯಕ್ತಿಯೊಬ್ಬನ ಬಳಿ ಎಷ್ಟೇ ವಿದ್ಯೆ ಇದ್ದರೂ ಆತನ ಬಳಿ ವಿನಯ ಎಂಬ ಅಮೂಲ್ಯ ರತ್ನವೊಂದು ಇಲ್ಲದಿದ್ದರೆ ಆತನಿಗೆ ಯಾವ ಗೌರವವೂ ಸಿಗದು ಜೊತೆಗೆ ಆತನ ವಿದ್ಯೆಯೂ ಅಪೂರ್ಣವಾಗಿರುತ್ತದೆ.
ಇಂದಿನ ಸಮಾಜ ವಿದ್ಯಾವಂತರಿಗಿಂತ ಹೆಚ್ಚಾಗಿ ವಿನಯವಂತರನ್ನು ಬಯಸುತ್ತಿದೆ. ಗುರು ಹಿರಿಯರನ್ನು ಗೌರವಿಸುವುದು, ಸೇವಾ ಮನೋಭಾವ, ತಾಳ್ಮೆ ಇತ್ಯಾದಿ ಗುಣಗಳನ್ನು ಹೊಂದಿರುವ ವ್ಯಕ್ತಿಯ ಬಳಿ ವಿದ್ಯೆ ಇರದಿದ್ದರೂ, ಆತನ ಗುಣನಡತೆಗಳನ್ನು ಇಡೀ ಸಮಾಜವೇ ಮೆಚ್ಚುವುದು.
ಸಮಾಜದಲ್ಲಿ ನಾವು ಇತರರಿಗೆ ಕಾಣುವಂತೆ ಬದುಕಬೇಕಾದರೆ, ವಿನಯದ ದಾರಿಯಲ್ಲಿ ಸಾಗಬೇಕಾಗಿದೆ. ಪಡೆದ ವಿದ್ಯೆಯನ್ನು ವಿನಯವಂತಿಕೆಯಿಂದ ಬಳಸಿಕೊಳ್ಳೋಣ.
-ಸರೋಜ ಪಿ ಜೆ ದೋಳ್ಪಾಡಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು ಪುತ್ತೂರು.