"ಇನ್ನು ಬಾಳೆಕಾಯಿ ದನಗಳಿಗೆ ಹಾಕಬೇಕಿಲ್ಲ"
- ಜಿ. ಎಂ. ಹೆಗಡೆ, ಮಾತ್ನಳ್ಳಿ.
CEO, ಹುಳಗೋಳ ಸೇವಾ ಸಹಕಾರಿ ಸಂಘ ಭೈರುಂಬೆ.
ಕಳೆದ ಮೂರು ತಿಂಗಳುಗಳಿಂದ ನಮ್ಮ ಉತ್ತರ ಕನ್ನಡ ಜಿಲ್ಲೆಯ ಮನೆಮನೆಯಲ್ಲೂ ಕೇಳಿಬರುತ್ತಿರುವ ಸ್ಫೂರ್ತಿದಾಯಕ ಶಬ್ದ 'ಬಾಕಾಹು'.
ಕಳೆದ ವಾರ ನಮ್ಮ ಸೊಸೈಟಿ ಸಂಘಟಿಸಿದ 'ಬಾಕಾಹು' ಕಾರ್ಯಾಗಾರದಿಂದ ಅಚ್ಚರಿ ಮತ್ತು ಸಮಾಧಾನ- ಎರಡೂ ಆಗಿವೆ.
ಕಡಿಮೆ ಅವಧಿಯಲ್ಲಿ ನಮ್ಮ ಭಾಗದ ಮಹಿಳೆಯರು ನೂರಕ್ಕೂ ಹೆಚ್ಚು ಬಾಕಾಹು ಖಾದ್ಯ ತಯಾರಿಸಿ ತಂದಿದ್ದಾರೆ. ಭಾರೀ ಉತ್ಸಾಹದಲ್ಲಿ ಭಾಗವಹಿಸಿದ್ದಾರೆ. ಅಚ್ಚರಿ ಆದದ್ದು ಇದಕ್ಕೆ.
ಲಾಕ್ ಡೌನ್ ಸಂದರ್ಭದಲ್ಲಿ ಬಾಳೆಕಾಯಿ ಖರೀದಿಸುವವರಿಲ್ಲದೆ ಅದನ್ನು ದನಗಳಿಗೆ, ಗೊಬ್ಬರ ಗುಂಡಿಗೂ ಹಾಕಿದ್ದೇವೆ. ಇನ್ನು ಅಂತಹ ಸಂದರ್ಭ ಬರಲಾರದು ಎನ್ನುವುದೇ ಸಮಾಧಾನ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ