ಪ್ರಬುದ್ಧ ನಾಗರಿಕನಾಗಲು ವಿವೇಕಾನಂದರೆ ಚಿಂತನೆ ಅಗತ್ಯ: ಡಾ. ಆರ್. ಬಾಲಸುಬ್ರಹ್ಮಣ್ಯಂ

Upayuktha
0


ಮಂಗಳೂರು: ರಾಜಕೀಯ ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆದರೂ ನಾಗರಿಕತ್ವ ಹಾಗೂ ಹಾಗೂ ಪ್ರಬುದ್ಧ ನಾಗರಿಕತ್ವದ ವ್ಯತ್ಯಾಸವನ್ನು ನಾವು ಅರಿತಿಲ್ಲ. ಹೀಗಾಗಿ 75 ವರ್ಷಗಳ ಸಂಭ್ರಮಾಚರಣೆಯ ಜೊತಗೆ ಸ್ವಾಮಿ ವಿವೇಕಾನಂದರನ್ನು ಅರ್ಥ ಮಾಡಿಕೊಳ್ಳಬೇಕಿದೆ, ಎಂದು ಕೇಂದ್ರ ಸರ್ಕಾರದ ಕೆಪಾಸಿಟಿ ಬಿಲ್ಡಿಂಗ್ ಕಮಿಷನ್ ನ ಸದಸ್ಯ ಡಾ. ಬಾಲಸುಬ್ರಹ್ಮಣ್ಯಂ ಆರ್. ಹೇಳಿದರು.


ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ‘ವಿವೇಕ ವಾಣಿ’ ಸರಣಿ ಉಪನ್ಯಾಸ ಕಾರ್ಯಕ್ರಮದ ಏಳನೇ ಉಪನ್ಯಾಸದಲ್ಲಿ ಅವರು "ಸ್ವಾಮಿ ವಿವೇಕಾನಂದರ ಬೆಳಕಲ್ಲಿ ಪ್ರಬುದ್ಧ ನಾಗರಿಕತ್ವ" ಎಂಬ ವಿಷಯದ ಕುರಿತು ಅವರು ಮಾತನಾಡಿದರು.


“ನಿಜವಾದ ರಾಷ್ಟ್ರೀಯ ಪರಿಕಲ್ಪನೆ ಎಂದರೇನು ಮತ್ತು ಈ ಮಹಾನ್ ರಾಷ್ಟ್ರಕ್ಕೆ ನಾವು ಹೇಗೆ ಸೇವೆ ಮಾಡಬೇಕು ಎಂಬದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ವಾತಂತ್ರ‍್ಯವನ್ನು ಬ್ರಿಟಿಷರು ನೀಡಲಿಲ್ಲ ಬದಲಾಗಿ ನಾವು ಅದನ್ನು ಪಡೆದುಕೊಂಡೆವು ಎಂದು ನಮಗೆ ಅರಿವಾಗಬೇಕು. ಪ್ರಬುದ್ಧ ನಾಗರಿಕತ್ವವನ್ನು ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ,” ಎಂದರು.


ವಿಶೇಷ ಅಭ್ಯಾಗತರಾಗಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿದರು. ಹೈದರಾಬಾದ್ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಎಕ್ಸೆಲೆನ್ಸ್ ನ ನಿರ್ದೇಶಕ ಸ್ವಾಮಿ ಬೋಧಮಯಾನಂದಜಿ, ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದಜಿ, ಸೈಂಟ್ ಅಲೋಷಿಯಸ್ ಕಾಲೇಜಿನ ಫಾದರ್ ಜೋಯೆಲ್ ಫರ್ನಾಂಡಿಸ್, ದುಬೈನ ಹೇರಿಯಟ್ ವಾಲ್ಟ್ ಯುನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಡಾ. ಉಲ್ಲಾಸ್ ರಾವ್, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಪ್ರಾಂಶುಪಾಲ ನಾರಾಯಣ ಶೆಟ್ಟಿ, ಎಸ್. ಸಿ. ಎಸ್. ಸಮೂಹ ಸಂಸ್ಥೆಗಳ ಭಾರತಿ ಸೊರಕೆ, ಮಂಡ್ಯದ ಎಐಪಿ ಸ್ಕೂಲ್ ನ ಪ್ರಾಂಶುಪಾಲೆ ವಿಂಧ್ಯಾ ಬೋಪಣ್ಣ, ಮತ್ತಿತರರು ಉಪಸ್ಥಿತರಿದ್ದರು.


ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಶ್ರೀಪತಿ ಕಲ್ಲೂರಾಯ ಪಿ. ಸ್ವಾಗತಿಸಿ, ವಿವೇಕಾನಂದ ಅಧ್ಯಯನ ಕೇಂದ್ರದ ಸದಸ್ಯ ಡಾ. ಚಂದ್ರು ಹೆಗ್ಡೆ ವಂದಿಸಿದರು, ಮಂಗಳೂರು ರಾಮಕೃಷ್ಣ ಮಠದ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top