‘ಬ್ರಹ್ಮಯಾನ’ ಕೃತಿ ಲೋಕಾರ್ಪಣೆ, `ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ

Upayuktha
0


ಬೆಂಗಳೂರು: ಭಾರತೀಯ ವಿದ್ಯಾಭವನ, ಉದಯ ಪ್ರಕಾಶನ ಬೆಂಗಳೂರು ಮತ್ತು ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಕಲಬುರಗಿ ಇವರ ಸಹಯೋಗದೊಡನೆ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರ ಬ್ರಹ್ಮಯಾನ ಕೃತಿ ಲೋಕಾರ್ಪಣ ಸಮಾರಂಭವನ್ನು ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. 


ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠ, ಸುತ್ತೂರು ಶ್ರೀಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು `ಬ್ರಹ್ಮಯಾನ’ ಕೃತಿ ಲೋಕಾರ್ಪಣ ಸಮಾರಂಭದ ದಿವ್ಯಸಾನ್ನಿಧ್ಯವನ್ನು ವಹಿಸಿದ್ದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಮಹಲಿಂಗರಂಗನ ಅನುಭವಾಮೃತ `ಬ್ರಹ್ಮಯಾನ’ ಮಹಾಸಂಪುಟ ಭೌತಿಕಚರ್ಯೆಯನ್ನು ವಿಮುಕ್ತಗೊಳಿಸಿ ಪಾರಮಾರ್ಥಿಕ ನೆಲೆಗೆ ನಮ್ಮನ್ನು ಒಯ್ಯುವ ವಿಶಿಷ್ಟ ಬೆಳಗೂ ಇದಾಗಿದೆ. ಇವು ಅಜ್ಞಾನಿಯನ್ನು ಜ್ಞಾನಿಯನ್ನಾಗಿಯೂ, ಬುದ್ಧನನ್ನು ಮುಕ್ತನನ್ನಾಗಿಯೂ ಮಾಡಿ ಮತ್ರ್ಯಲೋಕದಿಂದ ಅಮೃತತ್ತ್ವಕ್ಕೆ ಏರಿಸುವ ಸೋಪಾನಗಳಂತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮನು ಬಳಿಗಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರೊ.ಮಲ್ಲೇಪುರಂ ಸಾಂಸ್ಕøತಿಕ ಪ್ರತಿಷ್ಠಾನ, ಕಲಬುರಗಿ  ಅವರು ಪ್ರತಿವರ್ಷ ಕೊಡಮಾಡುವ 2020ರ `ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಅವರಿಗೆ ನೀಡಿ ಗೌರವಿಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ಲೇಖಕ ಡಾ.ಕೆ.ಜಿ.ಲಕ್ಷ್ಮಿನಾರಾಯಣಪ್ಪ ಬಹುಶ್ರುತ ವಿದ್ವಾಂಸರಾದ ಪ್ರೋ.ಮಲ್ಲೇಪುರಂರವರಿಗೆ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ದೊರೆಯಬೇಕೆಂದು ಆಶಿಸಿದರು.


ಕರ್ನಾಟಕ ಗಾಂಧೀಸ್ಮಾರಕ ನಿಧಿ, ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸದ್ದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಎಚ್.ಟಿ.ಪೋತೆ  ಉದಯ ಪ್ರಕಾಶನದ ವ್ಯವಸ್ಥಾಪಕಿ ಎಂ.ಡಿ.ಶೈಲಜಾ ಹಾಗೂ ಭಾರತೀಯ ವಿದ್ಯಾಭವನದ ಹೆಚ್.ಎನ್.ಸುರೇಶ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top